7

ಸ್ವಲ್ಪ ಚೆನ್ನಾಗಿ ರೆಡಿಯಾಗೀಪ್ಪಾ...

Published:
Updated:
ಸ್ವಲ್ಪ ಚೆನ್ನಾಗಿ ರೆಡಿಯಾಗೀಪ್ಪಾ...

ಯಾವುದೇ ಸಮಾರಂಭ, ವಿಶೇಷ ಕಾರ್ಯಕ್ರಮಗಳಲ್ಲಿ ಫ್ಯಾಷನ್‌ ಜಗತ್ತನ್ನೇ ಆವಾಹಿಸಿಕೊಂಡವರಂತೆ ಕಾಣಿಸಿಕೊಳ್ಳುವುದು ಹೆಣ್ಣುಮಕ್ಕಳೇ. ತಮ್ಮ ಫ್ಯಾಷನ್‌ ಜಗತ್ತು ಎಷ್ಟು ಟ್ರೆಂಡಿಯಾಗಿದೆ, ಇತ್ತೀಚೆಗೆ ಬಂದಿರುವ ಫ್ಯಾಷನ್‌ ಯಾವುದು ಎಂಬ ಗೊಡವೆಯೇ ಇಲ್ಲದ ಪುರುಷರು ಇಸ್ತ್ರಿ

ಮಾಡಿಟ್ಟ ಉಡುಪನ್ನು ಧರಿಸಿಕೊಂಡು ಹೊರಡುವುದುಂಟು. ಫಾರ್ಮಲ್‌, ಕ್ಯಾಶುವಲ್‌, ಟ್ರೆಂಡಿ, ಫ್ಯಾಷನೆಬಲ್‌ ಎಂಬ ಪದಗಳ ಅರಿವೂ ಅವರಿಗೆ ಇರುವುದಿಲ್ಲ.

ಅಂಥವರಿಗೆ ಉಡುಗೆ ತೊಡುಗೆಗಳ ಆಯ್ಕೆ, ಧರಿಸಬೇಕಾದ ಸಂದರ್ಭ, ಅವರಿಗೆ ಯಾವ ಉಡುಗೆ ಯಾವ ಕಾಲದಲ್ಲಿ ಸೂಕ್ತ ಎಂಬ ಒಂದಿಷ್ಟು ಮಾಹಿತಿಗಳನ್ನು ಕಲೆಹಾಕಿಕೊಳ್ಳೋಣ ಬನ್ನಿ.

ಬಾಂಧ್‌ಗಲಾಸ್‌ ಅಥವಾ ಜೋಧ್‌ಪುರಿ ಸೂಟ್‌ ಎಂದೂ ಇದನ್ನು ಕರೆಯಲಾಗುತ್ತದೆ. ಚಳಿಗಾಲದಲ್ಲಿ ದೇಹಕ್ಕೆ ಬೆಚ್ಚಗಿನ ಭಾವವನ್ನೂ ನೀಡುತ್ತಾ, ದೇಹಸೌಂದರ್ಯವನ್ನೂ ಹೆಚ್ಚಿಸುತ್ತವೆ ಈ ಸೂಟ್‌ಗಳು. ತುಂಬು ತೋಳಿನ, ತೋಳು ರಹಿತ, ಸ್ಲಿಮ್‌ಫಿಟ್‌ ಸೂಟ್‌ಗಳಿದ್ದು ವಿವಿಧ ಬಣ್ಣ ಹಾಗೂ ಆಕರ್ಷಕ ವಿನ್ಯಾಸಗಳಲ್ಲಿ ಲಭ್ಯ. ಸೊಂಟಕ್ಕೆ ತಾಕುವಷ್ಟು ಚಿಕ್ಕದಾದ ಹಾಗೂ ಮೊಣಕಾಲುವರೆಗೆ ಚಾಚಿದ ಸೂಟ್‌ಗಳೂ ಇರುತ್ತವೆ. ಚಳಿಗಾಲದಲ್ಲಿ ಗಾಢ ಕೆಂಪು ಅಥವಾ ಗಾಢ ನೀಲಿ ಬಣ್ಣದ ವೆಲ್ವೆಟ್‌ ಅಥವಾ ಸ್ಯಾಟಿನ್‌ ಬಟ್ಟೆಯ ಸೂಟ್‌ಗಳು ಹೆಚ್ಚು ಸೂಕ್ತ ಎನ್ನುವುದು ಫ್ಯಾಷನ್‌ ತಜ್ಞರ ಅಭಿಪ್ರಾಯ.

l ಸೂಟ್‌ಗಳನ್ನು ಆಯ್ದುಕೊಳ್ಳುವಾಗ ಬಟ್ಟೆಯ ಗುಣಮಟ್ಟದ ಬಗೆಗೆ ಹೆಚ್ಚು ಕಾಳಜಿವಹಿಸಿ. ಮದುವೆಯಂಥ ವಿಶೇಷ ಸಮಾರಂಭಗಳಾದರೆ ಶ್ರೀಮಂತ ವಿನ್ಯಾಸ ಇರುವ ರೇಷ್ಮೆ, ವೆಲ್ವೆಟ್‌ ಹಾಗೂ ಸ್ಯಾಟಿನ್‌ ಬಟ್ಟೆಯ ಸೂಟ್‌ಗಳು ಸೂಕ್ತ. ಇಲ್ಲವಾದಲ್ಲಿ ರೇಷ್ಮೆ, ಕಾಟನ್‌, ಸಿಲ್ಕ್‌ ಕಾಟನ್‌, ಕ್ರೇಪ್‌ ಹಾಗೂ ಜಾರ್ಜೆಟ್‌ ಬಟ್ಟೆಯ ಸೂಟ್‌ಗಳನ್ನು ಧರಿಸಬಹುದು.

l ಅನೇಕರಿಗೆ ಕಪ್ಪು ಬಣ್ಣದ ಬಗೆಗೆ ವಿಶೇಷ ಒಲವಿರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಬೆಚ್ಚನೆಯ ಅನುಭವಕ್ಕೆ ಕಪ್ಪು ಹೇಳಿ ಮಾಡಿಸಿದ ಬಣ್ಣ. ಅಲ್ಲದೆ ಧರಿಸಿದವರ ಚೆಲುವನ್ನು ಹೆಚ್ಚಿಸುವ ಗುಣವೂ ಅದಕ್ಕಿದೆ. ಈ ಬಣ್ಣದ ಸೂಟ್‌ ಆಕರ್ಷಕವಾಗಿ ಕಾಣಬೇಕು ಎಂದರೆ ಬಿಳಿ ಅಥವಾ ತಿಳಿ ಬಣ್ಣದ ಶರ್ಟ್‌ಗಳನ್ನು ಬಳಸಿ. ಸೂಟ್‌ನಲ್ಲಿ ಪೋಲ್ಕಾ ಡಾಟೆಡ್‌ ವಿನ್ಯಾಸದ ಜಾಕೆಟ್‌ ಇದ್ದರೆ ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಧರಿಸುವ ಶೂ ಕೂಡ ವಿಶೇಷ ನೋಟವನ್ನು ದಕ್ಕಿಸಿಕೊಡಬಲ್ಲುದು.

l ವಿನ್ಯಾಸಭರಿತ ದಿರಿಸು ಹುಡುಗಿಯರಿಗಷ್ಟೇ ಚಂದ ಎನ್ನುವುದೂ ಅನೇಕರ ಭಾವನೆ. ಆದರೆ ಈಗ ಹುಡುಗರಿಗೂ ವಿನ್ಯಾಸವುಳ್ಳ ದಿರಿಸು ಬಂದಿದೆ. ಸೂಟ್‌ಗಳಲ್ಲಿಯೂ ಫ್ಲೋರಲ್‌ ವಿನ್ಯಾಸಕ್ಕೆ ಆದ್ಯತೆ ಇದೆ. ಇವುಗಳೂ ಆಯ್ದ ಸಮಾರಂಭಗಳಿಗೆ ಸೂಕ್ತ ಎನಿಸುತ್ತವೆ.

l ಮದುಮಗನಾದರೆ ವಿಭಿನ್ನವಾಗಿ ಸಿಂಗರಿಸಿಕೊಳ್ಳಲೇಬೇಕು. ಗಾಢ ಕೆಂಪು ಅಥವಾ ಗಾಢ ನೀಲಿ ಬಣ್ಣದ ವೆಲ್ವೆಟ್‌ ಸೂಟ್‌ ಅನ್ನೇ ಆಯ್ದುಕೊಳ್ಳಿ. ಸೂಟ್‌ ಬಣ್ಣ ಗಾಢವಾಗಿದ್ದಷ್ಟೂ ಚೆಲುವು ಹೆಚ್ಚುತ್ತದೆ. ಅದಕ್ಕೆ ಕಪ್ಪು, ಬಿಳಿ, ಇಲ್ಲವೆ ತೆಳು ಬಣ್ಣದ ಪ್ಯಾಂಟ್‌ ಧರಿಸಿ. ಪ್ಯಾಂಟ್‌ಗಳಲ್ಲೂ ಸಾಕಷ್ಟು ವಿನ್ಯಾಸದ ಆಯ್ಕೆ ಇದ್ದು ನಿಮಗೆ ಸೂಕ್ತ ಎನಿಸುವುದನ್ನು ಆಯ್ದುಕೊಳ್ಳಿ. ಇವು ಕ್ಯಾಮೆರಾ ಕಣ್ಣಲ್ಲೂ ಮಿನುಗುತ್ತವೆ.

l ಇತ್ತೀಚೆಗೆ ಜನಪ್ರಿಯತೆ ಗಳಿಸಿಕೊಂಡಿರುವುದು ಪಿನ್‌ಸ್ಟ್ರೈಪ್‌ ವಿನ್ಯಾಸ. ಗೆರೆಯಾಕಾರದ ಚಿತ್ತಾರದಂತಿರುವ ಇವುಗಳು ಮೊದಲ ನೋಟಕ್ಕೇ ಸೆಳೆಯುತ್ತವೆ. ವಿನ್ಯಾಸವಿಲ್ಲದ ಉದ್ದದ ಜುಬ್ಬಾಗಳ ಮೇಲೆ ಪಿನ್‌ಸ್ಟ್ರೈಪ್‌ ಸೂಟ್‌ ತೊಟ್ಟರೆ ಚೆನ್ನಾಗಿ ಕಾಣುತ್ತದೆ.

l ಹಬ್ಬದ ಸಂದರ್ಭಗಳಲ್ಲಿ ತುಸು ವಿಭಿನ್ನವಾಗಿ ರೆಡಿಯಾಗಿ. ಅಂದರೆ ಜುಬ್ಬಾ, ಸೂಟ್‌ಗಳ ಜೊತೆಗೆ ಪ್ಯಾಂಟ್‌ ತೊಡುವ ಬದಲು ಧೋತಿ ತೊಟ್ಟು ಸಂಭ್ರಮಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry