6

ಗ್ರಾಮೀಣ ಸೇವೆಯನ್ನು ತಿರಸ್ಕರಿಸದಿರಿ

Published:
Updated:

ಮಂಗಳೂರು: ಯಾವುದೇ ಬ್ಯಾಂಕ್‌ ಗಳಲ್ಲಿ ದುಡಿಯುತ್ತಿರುವ ಎಸ್‌ಸಿ, ಎಸ್‌ಟಿ ನೌಕರರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಹಿಂಜರಿಯಬಾರದು. ಗ್ರಾಮಾಂತರ ಪ್ರದೇಶದಲ್ಲಿರುವ ಶೋಷಿ ತರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಈ ನೌಕರರಿಂದ ಹೆಚ್ಚಬೇಕು ಎಂದು ಅಖಿಲ ಭಾರತ ಸಿಂಡಿಕೇಟ್‌ ಬ್ಯಾಂಕ್‌ ಎಸ್‌ಸಿ/ ಎಸ್‌ಟಿ ನೌಕರರ ಕಲ್ಯಾಣ ಒಕ್ಕೂಟದ ಅಧ್ಯಕ್ಷ ರಂಜನ್‌ ಕೇಲ್ಕರ್‌ ಹೇಳಿದರು.

ಇಲ್ಲಿ ಭಾನುವಾರ ಆಯೋಜಿಸಿದ್ದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಎಸ್‌ಸಿ/ ಎಸ್‌ಟಿ ನೌಕರರ ಒಕ್ಕೂಟ (ಸೇವಾ) ಕರ್ನಾಟಕ ಇದರ ಎರಡನೇ ವಲಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಿದಾಗ ಸಮಾಜದ ನೈಜ ಸಮಸ್ಯೆ ಅರಿವಾಗುತ್ತದೆ. ಯಾರಿಗೆ ಸಹಾಯ ಬೇಕೋ ಅವರ ಕಷ್ಟಕ್ಕೆ ಸಂದಿಸಲು ಅವಕಾಶ ಸಿಗುತ್ತದೆ ಎಂದು ಅವರು ಸಲಹೆ ನೀಡಿದರು.

ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಲ್ಲಿರುವ ಒಟ್ಟು 2.8 ಲಕ್ಷ ನೌಕರರಲ್ಲಿ ಶೇ 45ರಷ್ಟು ಎಸ್ಸಿ, ಎಸ್ಟಿಗೆ ಸೇರಿದವರು ಎನ್ನುವುದು ಹೆಮ್ಮೆಯ ವಿಚಾರ. ಮೀಸ ಲಾತಿಗಿಂತ ಹೆಚ್ಚಿನ ಲಾಭ ಸಮಾಜಕ್ಕೆ ದೊರಕಿದೆ. ಈ ನೌಕರರಿಗೆ ಬ್ಯಾಂಕ್‌ನ ಜವಾಬ್ದಾರಿಯ ಜತೆಗೆ ಸಾಮಾಜಿಕ ಜವಾ ಬ್ದಾರಿಯೂ ಇದೆ. ಸಮಾಜ ಕೂಡ ಈ ನೌಕರರಿಂದ ಹೆಚ್ಚು ನಿರೀಕ್ಷೆ ಮಾಡುತ್ತಿದೆ ಎಂದು ಹೇಳಿದರು.

ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಡಿಜಿಎಂ ಸುಕುಮಾರ್‌ ವಿ.ಕೆ. ಸಮ್ಮೇಳನವನ್ನು ಉದ್ಘಾಟಿಸಿ, ‘ಮನು ಷ್ಯನಿಗೆ ಜ್ಞಾನವೇ ನಿಜವಾದ ಶಕ್ತಿ. ಬ್ಯಾಂಕ್‌ ನೌಕರರು ಹೆಚ್ಚು ಹೆಚ್ಚು ಜ್ಞಾನವನ್ನು ಸಂಪಾದಿಸಬೇಕು. ಹೊಸತನ್ನು ಕಲಿಯಲು ಆಸಕ್ತಿ ವಹಿಸಬೇಕು. ಬ್ಯಾಂಕ್‌ಗಳಲ್ಲಿ ದಿನದಿಂದ ದಿನಕ್ಕೆ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದು, ಅದಕ್ಕೆ ತಕ್ಷಣ ಹೊಂದಿಕೊಳ್ಳುವ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಬ್ಯಾಂಕಿನ ಎಸ್‌ಸಿ, ಎಸ್‌ಟಿ ನೌಕರರಿಂದ ಬ್ಯಾಂಕ್‌ ಮತ್ತು ಸಮಾಜ ಹೆಚ್ಚಿನ ನಿರೀಕ್ಷೆ ಇಟ್ಟು ಕೊಂಡಿದೆ’ ಎಂದು ಹೇಳಿದರು.

‘ಸೇವಾ’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಎಲ್‌.ಚೌಹಾನ್‌ ಮಾತನಾಡಿ, ‘ಬ್ಯಾಂಕ್‌ನ ಎಸ್‌ಸಿ/ ಎಸ್‌ಟಿ ನೌಕರರ ಹಕ್ಕು ಮತ್ತು ಸೌಲ ಭ್ಯದ ರಕ್ಷಣೆಗಾಗಿ ಸೇವಾ ಸಂಘಟನೆ ಹುಟ್ಟು ಕೊಂಡಿದ್ದು, ಇಂದು ರಾಷ್ಟ್ರದಲ್ಲಿ ಬಲಿಷ್ಠ ಸಂಘಟನೆಯಾಗಿ ಬೆಳೆದಿದೆ. ಸಂಘಟನೆ ಬಲಿಷ್ಠವಾಗಿದ್ದರೆ ನಮ್ಮ ಹಕ್ಕನ್ನು, ಪಾಲನ್ನು ಸುಲಭವಾಗಿ ಪಡೆಯಲು ಅನುಕೂಲವಾಗುತ್ತದೆ. ಬ್ಯಾಂಕ್‌ನ ಆಡಳಿತ ಮಂಡಳಿಯು ಸಂಘಟನೆಗಳ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸು ತ್ತಿದೆ’ ಎಂದು ಹೇಳಿದರು.

ಸೇವಾ ಸಂಘಟನೆ ಅಧ್ಯಕ್ಷ ಡಿ.ವಿಜಯ ರಾಜ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಾದೇಶಿಕ ವ್ಯವಸ್ಥಾಪಕರಾದ ಕಿಶೋರ್‌ ಕುಮಾರ್‌ ಬಂಟ್ವಾಳ್‌, ಎಚ್‌.ಎ. ಲೂಯಿಸ್‌, ಸೂರ್ಯ ನಾರಾಯಣ ಎಂ.ಬಿ., ಸಂಘಟನೆಯ ಪ್ರಾದೇಶಿಕ ಕಾರ್ಯದರ್ಶಿ ಉಮಾನಾಥ್‌ ಕರ್ಕೇರ ಇದ್ದರು.

ಬ್ಯಾಂಕ್‌ ನೌಕರರಾದ 96 ಬಾರಿ ರಕ್ತದಾನ ಮಾಡಿರುವ ದೇವಣ್ಣ, ನಾಟಿ ವೈದ್ಯ ಎಂ.ಮುರಳೀಧರ, ಎಂ.ಟೆಕ್‌ ಪದವಿಯನ್ನು ಎರಡನೇ  ರ‍್ಯಾಂಕ್‌ನೊಂದಿಗೆ ಪಡೆದ ಸುನೀತಾ ಎನ್‌.ವಿ. ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry