ಕುರುಬ ಸಮುದಾಯ ಭವನಕ್ಕೆ ₹15 ಲಕ್ಷ ಅನುದಾನ

6

ಕುರುಬ ಸಮುದಾಯ ಭವನಕ್ಕೆ ₹15 ಲಕ್ಷ ಅನುದಾನ

Published:
Updated:

ಹುಮನಾಬಾದ್: ‘ಕುರುಬ ಸಮಾಜ ಸಮುದಾಯ ಭವನ ನಿರ್ಮಾಣಕ್ಕೆ ₹15 ಲಕ್ಷ ಅನುದಾನ ನೀಡುವುದಾಗಿ’ ಕೆ.ಆರ್‌.ಡಿ.ಎಲ್ ಅಧ್ಯಕ್ಷ ರಾಜಶೇಖರ ಬಿ.ಪಾಟೀಲ ಘೋಷಣೆ ಮಾಡಿದರು. ಕನಕ ಜಯಂತಿ ಉತ್ಸವ ಸಮಿತಿ ಭಾನುವಾರ ಇಲ್ಲಿನ ರಥ ಮೈದಾನದಲ್ಲಿ ಏರ್ಪಡಿಸಿದ್ದ ಕನಕದಾಸರ 530ನೇ ಜಯಂತಿ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಮಹಾತ್ಮರ ಜಯಂತಿ ಆಚರಣೆಗಳು ಕೇವಲ ವೇದಿಕೆ ಭಾಷಣಕ್ಕೆ ಸೀಮಿತಗೊಳ್ಳದೇ ಸಮಾಜದಲ್ಲಿ ಪರಿವರ್ತನೆ ತರುವಂತಾಗಬೇಕು. ಪೌರಾಡಳಿತ ಕಾಯ್ದೆಯಲ್ಲಿ ಬದಲಾವಣೆ ಆಗಿರುವುದರಿಂದ ನಿವೇಶನ ಹಂಚಿಕೆ ಕೊಂಚ ಕಷ್ಟ. ಜಿಲ್ಲಾ ಉಸ್ತುವಾರಿ ಸಚಿವರೇ ಪೌರಾಡಳಿತ ಸಚಿವರಾಗಿರುವುದರಿಂದ ಸೌಲಭ್ಯ ಕಲ್ಪಿಸಲು ಯತ್ನಿಸಲಾಗುವುದು’ ಎಂದು ತಿಳಿಸಿದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಮಾತನಾಡಿ, ಮಹಾತ್ಮರನ್ನು ಜಾತಿಗಳಿಗೆ ಸೀಮಿತವಾಗಿಸಿಕೊಳ್ಳದೇ ಗೌರವದಿಂದ ಕಾಣಬೇಕು ಎಂದರು.

* * 

ಒಂದೂವರೆ ದಶಕ ಹಿಂದೆ ಇದ್ದ ಹೋರಾಟಗಾರರೆಲ್ಲ ಈಗ ಮಾರಾಟ ಆಗಿದ್ದಾರೆ. ಸ್ವಜಾತಿಯವರು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಮಾಡಿದ ಕುತಂತ್ರದಿಂದ ಸಮಾಜದ ಅಭಿವೃದ್ದಿ ಕುಂಠಿತಗೊಂಡಿದೆ.

ಡಾ.ಸುಚಿತಾನಂದ ಕೆ.ಮಲ್ಕಾಪುರೆ

ಪ್ರಾಧ್ಯಾಪಕರು, ಭಾಲ್ಕಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry