ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಭವನಕ್ಕೆ ₹10ಲಕ್ಷ ಅನುದಾನ

Last Updated 18 ಡಿಸೆಂಬರ್ 2017, 5:57 IST
ಅಕ್ಷರ ಗಾತ್ರ

ಜೇವರ್ಗಿ: ‘ಪಟ್ಟಣದ ಮಾಳಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ಮಿಸುತ್ತಿ ರುವ ಸಮುದಾಯ ಭವನಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಯಿಂದ ₹10 ಅನುದಾನ ಬಿಡುಗಡೆ ಗೊಳಿಸಲಾಗುವುದು’ ಎಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.

ಈಚೆಗೆ ಪಟ್ಟಣದ ಮಾಳಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಮಾಳಿಂಗೇಶ್ವರರ ಪುರಾಣ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಥಮ ಹಂತದಲ್ಲಿ ₹5ಲಕ್ಷ ಅನುದಾನ ನೀಡಲಾಗಿದೆ. 2ನೇ ಹಂತದಲ್ಲಿ ಶಾಸಕರ ನಿಧಿಯಿಂದ ₹10ಲಕ್ಷ ಅನುದಾನ ನೀಡಲಾಗುವುದು. ಹಾಲುಮತ ಸಮಾಜದ ಸದ್ಗುರು ಮಾಳಿಂಗೇಶ್ವರರ ಚಿಂತನೆಗಳನ್ನು ಸಮಾಜದಲ್ಲಿನ ಪ್ರತಿಯೊಬ್ಬರು ಬದುಕಿ ನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕಂಕಣ ಬದ್ಧರಾಗಬೇಕಾಗಿದೆ’ ಎಂದರು.

ತಿಂಥಣಿ ಕನಕ ಗುರುಪೀಠದ ಬೀರಲಿಂಗ ದೇವರು, ಮಾವನೂರ ಧರ್ಮರಾಯ ಮುತ್ತ್ಯಾ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬಸವನ ಸಂಗೋಳಗಿಯ ಮದಗೊಂಡ ಮಹಾರಾಜರು ಮಾಳಿಂಗೇಶ್ವರ ಪುರಾಣ ಕಾರ್ಯಕ್ರಮ ನಡೆಸಿಕೊಟ್ಟರು.

ಜಿ.ಪಂ ಮಾಜಿ ಸದಸ್ಯ ಅಶೋಕ ಸಾಹು ಗೋಗಿ, ಸ್ವಾಗತ ಸಮಿತಿ ಅಧ್ಯಕ್ಷ ಶರಣಗೌಡ ಸರಡಗಿ, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ತಿಪ್ಪಣ್ಣ ಗುಂಡಗುರ್ತಿ, ಮಾಳಿಂಗೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬೀರಲಿಂಗ ಹನ್ನೂರ, ರಾಜಶೇಖರ ಸೀರಿ, ತಮ್ಮಣ್ಣ ಬಾಗೇವಾಡಿ, ಮರೆಪ್ಪ ಸರಡಗಿ, ಮಹಿಬೂಬಸಾಬ್ ಚನ್ನೂರ್, ಬಸವರಾಜ ಚನ್ನೂರ್,
ಲಕ್ಷ್ಮೀಕಾಂತ ಗೌನಳ್ಳಿ, ಗುಡದಪ್ಪ ಪೂಜಾರಿ, ಕಾಮಣ್ಣ ಪೂಜಾರಿ, ರಾಮಣ್ಣ ಪೂಜಾರಿ, ಸಿದ್ದಣ್ಣ ಹಾಲ ಗಡ್ಲಾ, ಎಂ.ಎಸ್.ಪಾಟೀಲ ಹರವಾಳ, ಬಸ್ಸಣ್ಣ ಪೂಜಾರಿ ಕುನ್ನೂರ್, ರಾಜು ರದ್ದೇವಾಡಗಿ, ಶರಣಬಸಪ್ಪ ಯಡ್ರಾಮಿ, ತಿಪ್ಪಣ್ಣ ಕನಕ, ಗುಂಡಪ್ಪ ಪೂಜಾರಿ, ನಿಂಗಣ್ಣ ದೊಡ್ಡಮನಿ, ಶಂಕರಲಿಂಗ ಹನ್ನೂರ್, ಶರಣು ಗುತ್ತೇದಾರ್, ರವಿ ಕೋಳಕೂರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT