ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರಕ್ಕೆ ರೈತರ ಹೋರಾಟ ಅಗತ್ಯ

Last Updated 18 ಡಿಸೆಂಬರ್ 2017, 6:40 IST
ಅಕ್ಷರ ಗಾತ್ರ

ದೇವನಹಳ್ಳಿ: ‘ರಾಜ್ಯದಲ್ಲಿ ರೈತರ ಸಮಸ್ಯೆಗಳು ಹೆಚ್ಚುತ್ತಿದ್ದು ರೈತರಾದ ನಾವೇ ಹೋರಾಟದ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎಂದು ರೈತ ಸಂಘ ರಾಜ್ಯ ಘಟಕ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ರೈತ ಸಂಘ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ನೇಮಕ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರೈತರಿಗೆ ಕಳೆದ ವರ್ಷದ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪರಿಹಾರ ಹಣ ಕೆಲವು ಕಡೆ ದೊರಕಿದೆ. ಕೆಲವು ಕಡೆ ರೈತರು ಅಲೆದಾಡುತ್ತಿದ್ದಾರೆ ಎಂದರು.

ಶೇಂಗಾ, ರಾಗಿ, ತೊಗರಿಗೆ ಈಗಾಗಲೇ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದರಿಂದ ರೈತರಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಸರ್ಕಾರ ಬರಿ ಹೇಳಿಕೆ ನೀಡಿ ಬೆಂಬಲ ಬೆಲೆ ನೀಡಲಾಗುವುದು. ಇಂದಿನಿಂದಲೇ ಸರ್ಕಾರದ ವತಿಯಿಂದ ಖರೀದಿಸಲಾಗುವುದು ಎಂದು ಹೇಳುತ್ತಿದೆಯೇ ಹೊರತು ಕಾರ್ಯಾರಂಭ ಮಾಡಿಲ್ಲ ಎಂದು ಹೇಳಿದರು.

ರೈತ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಕೆಂಚೇಗೌಡ ಮಾತನಾಡಿ, ರೈತ ಸಂಘದ ನೋಂದಾಯಿತ ಸದಸ್ಯರು ಸಂಘದ ಧ್ಯೇಯ, ಉದ್ದೇಶಕ್ಕೆ ಅನುಗುಣವಾಗಿ ಕೆಲಸ ಮಾಡಬೇಕಾಗಿದೆ ಎಂದರು. ಹಸಿರು ಸೇನೆ ರಾಜ್ಯಾಧ್ಯಕ್ಷ ಕೆ.ಎಸ್‌.ಹರೀಶ್‌, ರೈತ ಸಂಘ ತಾಲ್ಲೂಕು ಅಧ್ಯಕ್ಷ ಗಾರೆ ರವಿಕುಮಾರ್‌, ಪ್ರಧಾನ ಕಾರ್ಯದರ್ಶಿ ರಮೇಶ್‌, ಮುಖಂಡ ಮುನಿಶ್ಯಾಮಪ್ಪ, ನಾರಾಯಣಸ್ವಾಮಿ ಇದ್ದರು.

ನೂತನ ಪದಾಧಿಕಾರಿಗಳು: ವೆಂಕಟೇಶಪ್ಪ (ಜಿಲ್ಲಾ ಘಟಕ ಗೌರವಾಧ್ಯಕ್ಷ), ಎಚ್‌.ಆರ್‌.ಹರೀಶ್‌ (ಪ್ರಧಾನ ಕಾರ್ಯದರ್ಶಿ), ರಾಮಮೂರ್ತಿ (ಕಾರ್ಯದರ್ಶಿ), ನಾರಾಯಣ
ಸ್ವಾಮಿ ಮತ್ತು ಅಪ್ಪಯ್ಯ (ಉಪಾಧ್ಯಕ್ಷರು), ಕೆ.ಪ್ರಕಾಶ್‌ (ಹಸಿರು ಸೇನೆ ಜಿಲ್ಲಾಧ್ಯಕ್ಷ) , ಮುನೇಗೌಡ (ಸಂಘಟನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT