7

ಕುಂಟೆ ಸ್ವಚ್ಛತೆಗೆ ಜನರ ಒತ್ತಾಯ

Published:
Updated:

ವಿಜಯಪುರ: ಶಿಡ್ಲಘಟ್ಟ ಮುಖ್ಯರಸ್ತೆಯಲ್ಲಿರುವ ನಾಗರಬಾವಿ ಕುಂಟೆಯ ಅಭಿವೃದ್ಧಿಗಾಗಿ ಶಾಸಕ ‍ಪಿಳ್ಳಮುನಿಶಾಮಪ್ಪ ₹5 ಲಕ್ಷ ಅನುದಾನವನ್ನು ಘೋಷಣೆ ಮಾಡಿದ್ದರು. ಶೀಘ್ರವಾಗಿ ಅನುದಾನ ಬಿಡುಗಡೆ ಮಾಡಿ ಸ್ವಚ್ಚತೆ ಮಾಡಿಕೊಡಬೇಕು ಎಂದು ನಾಗರಿಕರಾದ ಮಂಜುನಾಥ್, ಸುರೇಶ್, ಸುಭಾಷ್ ಒತ್ತಾಯಿಸಿದ್ದಾರೆ.

ಶಿಡ್ಲಘಟ್ಟ–ಬೆಂಗಳೂರು ಮುಖ್ಯ ರಸ್ತೆಯಲ್ಲಿರುವ ನಾಗರಭಾವಿ ಕುಂಟೆಯಲ್ಲಿ ಹೆಚ್ಚಾಗಿರುವ ಹೂಳು, ಹಾಗೂ ದಟ್ಟವಾಗಿ ಬೆಳೆದಿರುವ ಗಿಡಗಂಟಿಗಳಿಂದಾಗಿ ಮಳೆಯ ನೀರು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ, ಆಗಸ್ಟ್– ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಪೂರ್ಣ ಪ್ರಮಾಣದಲ್ಲಿ  ನೀರು ತುಂಬಿತ್ತು. ಈಗ ಹೂಳಿನಿಂದಾಗಿ ಒಂದು ಹನಿ ನೀರು ನಿಲ್ಲದಂತಾಗಿದೆ ಎಂದಿದ್ದಾರೆ.

ಕುಂಟೆಯಲ್ಲಿ ಹೂಳು ತೆಗೆಯುವುದು, ಕುಂಟೆಯ ತಡೆಗೋಡೆಗೆ ಕಲ್ಲುಗಳನ್ನು ಜೋಡಿಸಬೇಕು. ಸುತ್ತಲೂ ಬೇಲಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸುತ್ತಲಿನ ರೈತರ ಭೂಮಿಗಳಿಂದ ಬರುವ ಮಳೆಯ ನೀರು ಸರಾಗವಾಗಿ ಕುಂಟೆಗೆ ಹರಿದು ಬರುವಂತೆ ವ್ಯವಸ್ಥೆ ಮಾಡಬೇಕು. ಶಾಸಕರು ಈ ಕುರಿತು ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry