7

ಮದಗಾನೂರಿನಲ್ಲಿ ಬಯಲು ರಂಗಮಂದಿರ ಉದ್ಘಾಟನೆ

Published:
Updated:

ಗದಗ: ‘ಐತಿಹಾಸಿಕ ಕುರುಹುಗಳಾದ ಪ್ರಾಚೀನ ಶಾಸನಗಳು, ನಾಣ್ಯಗಳು, ಅರಮನೆ, ದೇವಸ್ಥಾನ, ಸ್ಮಾಕರಗಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ’ ಎಂದು ಮುಖ್ಯಶಿಕ್ಷಕ ಸಿ.ಸಿ.ಕುರಹಟ್ಟಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಲಕ್ಕುಂಡಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ತಾಲ್ಲೂಕುಮಟ್ಟದ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಯುವಪೀಳಿಗೆಯು ದೇಶದ ಪಾರಂಪರಿಕ ಸಂಪತ್ತು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಫ್.ಪೂಜಾರ, ಹಾತಲಗೇರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೊಟ್ರೇಶ ವಿಭೂತಿ, ಶಿಕ್ಷಣ ಸಂಯೋಜಕ ವಿವೇಕಾನಂದಗೌಡ ಪಾಟೀಲ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಮಲ್ಲಿಕಾರ್ಜುನ ಹಗರಿ, ವೈ.ವೈ.ಬೆಟಗೇರಿ, ಶಾರದಾ ಬಾಣದ, ಕೀರ್ತಿ ಮ್ಯಾಗೇರಿ ಇದ್ದರು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಭಾಷಣ, ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಗಳು ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry