6

ಈ ಕ್ಯಾಲೆಂಡರ್‌ಗೆ ಪ್ರಾಣಿಗಳೇ ಮಾಡೆಲ್‌

Published:
Updated:
ಈ ಕ್ಯಾಲೆಂಡರ್‌ಗೆ ಪ್ರಾಣಿಗಳೇ ಮಾಡೆಲ್‌

ಕ್ಯಾಲೆಂಡರ್ ಬದಲಿಸುವ ದಿನಗಳು ಸನಿಹದಲ್ಲಿವೆ. ವಿಭಿನ್ನ ಕ್ಯಾಲೆಂಡರ್‌ಗಳು ಈಗಾಗಲೇ ಅಂಗಡಿಗಳಲ್ಲಿ ಕಾಣಿಸಿಕೊಂಡಿವೆ. ಕ್ಯಾಲೆಂಡರ್‌ ಅಂದಾಗ ದಿನ, ವಾರ, ತಿಥಿ ನೋಡಲು ಕ್ಯಾಲೆಂಡರ್ ಬೇಕೇಬೇಕು. ಕೆಲ ಪ್ರಾಣಿ ದಯಾ ಸಂಘಟನೆಗಳು ಜನಜಾಗೃತಿಗಾಗಿ ಕ್ಯಾಲೆಂಡರ್‌ಗಳನ್ನು ಸಾಧನವನ್ನಾಗಿಸಿಕೊಂಡಿವೆ. ಅಂಥ ಕೆಲ ಕ್ಯಾಲೆಂಡರ್‌ಗಳ ಮಾಹಿತಿ ಇಲ್ಲಿದೆ.

ನೀಲಗಿರಿ ವನ್ಯಜೀವಿಗಳು

ಚೆನ್ನೈನ ‘ದಿ ಬ್ಲೂ ಕ್ರಾಸ್‌ ಆಫ್‌ ಇಂಡಿಯಾ’ ಪ್ರಾಣಿ ದಯಾ ಸಂಘಟನೆಯು ‘ವೈಲ್ಡ್‌ಲೈಫ್‌ ಆಫ್‌ ನೀಲಗಿರಿ’ ಹೆಸರಿನಲ್ಲಿ ಗೋಡೆಯಲ್ಲಿ ನೇತು ಹಾಕಬಹುದಾದ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. ಕ್ಯಾಲೆಂಡರ್‌ ಬೆಲೆ ₹200. ಈ ಕ್ಯಾಲೆಂಡರ್‌ನಲ್ಲಿ ನೀಲಗಿರಿ ಕಾಡಿನ ಹುಲಿ, ಆನೆ, ಗುಬ್ಬಚ್ಚಿ ಇತ್ಯಾದಿ ಪ್ರಾಣಿಗಳ ನೈಜ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಛಾಯಾಗ್ರಾಹಕರಾದ ಟಿ.ಆರ್‌.ಎ. ಅರುಣ ಸೆಲ್ವಂ, ಎಂ. ಕುಮಾರವೇಲು, ಆರ್‌. ಪ್ರಕಾಶ್‌, ಜೆ. ಶ್ರೀಧರನ್‌ ಹಾಗೂ ಪಿ. ಸುಧಾಕರನ್‌ ಚಿತ್ರಗಳನ್ನು ಒದಗಿಸಿದ್ದಾರೆ. ಸಂಪರ್ಕಕ್ಕೆ– rosalyn@bluecross

ನಗುವಿನ ಘಳಿಗೆ

ಮಂಗಳೂರು ಮೂಲದ ಎನಿಮಲ್‌ ಕೇರ್‌ ಟ್ರಸ್ಟ್‌ (ಆ್ಯಕ್ಟ್‌) 2017ರಲ್ಲಿ ರಕ್ಷಣೆ ಮಾಡಿದ ನಾಯಿಗಳ ಚಿತ್ರಗಳನ್ನು ಬಳಸಿ ಕ್ಯಾಲೆಂಡರ್‌ ಹೊರತಂದಿದೆ. ಆಯಾಯ ನಾಯಿ ಜೊತೆ ಅದನ್ನು ರಕ್ಷಣೆ ಮಾಡಿದ ಸ್ವಯಂಸೇವಕರು ಹಾಗೂ ಸಿಬ್ಬಂದಿ ಈ ಫೋಟೊದಲ್ಲಿರುವುದು ವಿಶೇಷ. ಕ್ಯಾಲೆಂಡರ್‌ ಬೆಲೆ ₹150. ಛಾಯಾಗ್ರಹಣ ಭರತ್‌ರಾಜ್‌ ಬೈಕಾಡಿ ಅವರದು. ಸಂಪರ್ಕಕ್ಕೆ–sumatara@yahoo.com

ಅಂಗವಿಕಲ ಪ್ರಾಣಿಗಳಿಗಾಗಿ

ಕೊಯಮುತ್ತೂರಿನ ‘ಹ್ಯೂಮನ್‌ ಅನಿಮಲ್‌ ಸೊಸೈಟಿ’ ಡೆಸ್ಕ್‌ಟಾಪ್‌ ಕ್ಯಾಲೆಂಡರ್‌ ಬಿಡುಗಡೆ ಮಾಡಿದ್ದು, ಇದರಲ್ಲಿ ಈ ಸಂಘಟನೆಯ ಆಶ್ರಯದಲ್ಲಿರುವ ಅಂಗವಿಕಲ ಪ್ರಾಣಿಗಳ ಚಿತ್ರಗಳಿವೆ. ಈ ಕ್ಯಾಲೆಂಡರ್‌ ಬೆಲೆ ₹150. ‘ಪ್ರಾಣಿಗಳ ಅದಮ್ಯ ಜೀವನೋತ್ಸಾಹಕ್ಕೆ ಈ ಕ್ಯಾಲೆಂಡರ್‌ ಅನ್ನು ಸಮರ್ಪಿಸುತ್ತಿದ್ದೇವೆ. ನಮ್ಮ ಸಣ್ಣ ಪ್ರಯತ್ನ ಅವುಗಳ ಜೀವನದಲ್ಲಿ ದೊಡ್ಡ ಬದಲಾವಣೆಯನ್ನೇ ತರಬಹುದು’ ಎಂದು ಈ ಸಂಘಟನೆಯ ಮಿನಿ ವಾಸುದೇವನ್‌ ಹೇಳಿಕೊಂಡಿದ್ದಾರೆ. ಸಂಪರ್ಕಕ್ಕೆ– has.cbe@gmail.com

ಕಾಡಿನ ಛಾಯೆ

ಎಸ್‌ಒಎಸ್‌ ಸಂಸ್ಥೆ ತಮ್ಮ ಡೆಸ್ಕ್‌ಟಾಪ್‌ ಕ್ಯಾಲೆಂಡರಿನಲ್ಲಿ, ತಾವು ರಕ್ಷಿಸಿದ ಆನೆಗಳು, ಚಿರತೆಗಳು ಹಾಗೂ ಕರಡಿಗಳ ಚಿತ್ರಗಳನ್ನು ಬಳಸಿಕೊಂಡಿದೆ. ಈ ಕ್ಯಾಲೆಂಡರ್‌ ಬೆಲೆ ₹500. ಸಂಪರ್ಕಕ್ಕೆ–info@wildlifesos.org

****

ನಿಮ್ಮೂರಿನಲ್ಲಿಯೂ ಸಂಘ–ಸಂಸ್ಥೆಗಳು ವಿಶಿಷ್ಟ ಕ್ಯಾಲೆಂಡರ್‌ ಪ್ರಕಟಿಸಿವೆಯೇ? ಚಿತ್ರದೊಂದಿಗೆ ಸಣ್ಣ ಬರಹ ಕಳಿಸಿಕೊಡಿ. ಇಮೇಲ್– gulmoharpv@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry