ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲಕ್ಕೆ ಸೊಗಡು ಅವರೆಕಾಳಿನ ತಿನಿಸು

Last Updated 18 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಅವರೆಕಾಳು ಉಪ್ಪಿಟ್ಟು ಉಂಡೆ

‌ಬೇಕಾಗುವ ಸಾಮಗ್ರಿ: ಅವರೆಕಾಳು ಒಂದು ಕಪ್, ಅಕ್ಕಿ ತರಿ ಒಂದು ಕಪ್, ಕಾಯಿತುರಿ ಒಂದು ಕಪ್, ಕಾಳು ಮೆಣಸು ಒಂದು ಚಮಚ, ಜೀರಿಗೆ ಒಂದು ಚಮಚ, ಹಸಿಮೆಣಸಿನಕಾಯಿ ಮೂರು, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸ್ವಲ್ಲ, ಉಪ್ಪು ರುಚಿಗೆ ತಕ್ಕಷ್ಟು, ಶುಂಠಿ. ಒಗ್ಗರಣೆಗೆ ಎಣ್ಣೆ, ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ., ತುಪ್ಪ ಸ್ವಲ್ಪ.

ಮಾಡುವ ವಿಧಾನ: ಕುಕ್ಕರಿನಲ್ಲಿ ಎಣ್ಣೆ ಹಾಯಿಸಿ ಮೆಣಸು, ಜೀರಿಗೆ, ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಹಸಿಮೆಣಸಿನ ಕಾಯಿ, ಕರಿಬೇವು ಎಲ್ಲ ಹಾಕಿ ಒಗ್ಗರಣೆ ಮಾಡಿ. ನಂತರ ಅವರೆಕಾಳು, ಅಕ್ಕಿತರಿ, ಉಪ್ಪು, ನೀರು, ಕಾಯಿತುರಿ ಹಾಕಿ. ನಂತರ ಕುಕ್ಕರ್ ಮುಚ್ಚಿ ಎರಡು ವಿಷಲ್ ಕೂಗಿಸಿ ತಣ್ಣಗಾದ ಮೇಲೆ ಕೊತ್ತಂಬರಿ ಸೊಪ್ಪು, ತುಪ್ಪ ಹಾಕಿ ನುಚ್ಚಿನುಂಡೆ ತರಹ ಕಟ್ಟಿ, ಇಡ್ಲಿ ತಟ್ಟೆಗೆ ಹಾಕಿ ಹಬೆಯಲ್ಲಿ ಬೇಯಿಸಿ. ಈಗ ಅವರೆಕಾಳಿನ ಉಪಮಾ ಉಂಡೆ ಸಿದ್ಧ. ಇದನ್ನು ಬಿಸಿಯಾಗಿರುವಾಗಲೇ ತಿನ್ನಲು ಕೊಟ್ಟರೆ ರುಚಿಯಾಗಿರುತ್ತದೆ.

**

ಅವರೆಕಾಳಿನ ರೊಟ್ಟಿ

ಬೇಕಾಗುವ ಸಾಮಗ್ರಿ: ಅಕ್ಕಿ ಹಿಟ್ಟು 2 ಕಪ್, ಅವರೇಕಾಳು 1 ಕಪ್, ಕಾಯಿತುರಿ 1 ಕಪ್, ರುಚಿಗೆ ತಕ್ಕಷ್ಟು. ಉಪ್ಪು ಜೀರಿಗೆ, ಹಸಿಮೆಣಸಿನಕಾಯಿ, ಕೊತಂಬರಿಸೊಪ್ಪು, ಮೆಣಸಿನಕಾಳು ಸ್ವಲ್ಪ.

ಮಾಡುವ ವಿಧಾನ: ಅವರೆಕಾಳನ್ನು ಸ್ವಲ್ಪ ಉಪ್ಪು ಹಾಕಿ ಬೇಯಿಸಿ ಅದಕ್ಕೆ ಅಕ್ಕಿಹಿಟ್ಟು, ಕಾಯಿತುರಿ (ಮೆಣಸು, ಮೆಣಸಿನಕಾಯಿ ಒಂದು ಸಲ ಮಿಕ್ಸಿಯಲ್ಲಿ ಹಾಕಿ ಒಂದು ಸುತ್ತು ರುಬ್ಬಿಕೊಳ್ಳಿ) ಕೋತ್ತಂಬರಿ ಹಾಕಿ ಕಲಸಿ. ಬಾಣಲೆಗೆ ಎಣ್ಣೆ ಹಾಕಿ, ತೆಳ್ಳಗೆ ತಟ್ಟಿ ಮೇಲೆ ತಟ್ಟೆ  ಮುಚ್ಚಿ ಬೇಯಿಸಿ. ಗರಿ ಗರಿಯಾದ ಬಿಸಿ ಬಿಸಿ ರೊಟ್ಟಿ ತುಪ್ಪ ಚಟ್ನಿ ಜೊತೆ ತಿನ್ನಲು ಬಲು ರುಚಿ

**

ಅವರೆಕಾಳಿನ ಸಿಹಿ ಕೂಟು

ಬೇಕಾಗುವ ಸಾಮಗ್ರಿ: ಅವರೆಕಾಳು, ಬೀನ್ಸ್, ಕ್ಯಾರೆಟ್, ಆಲೂ, ಸೀಮೆಬದನೆಕಾಯಿ, ಕಾಳುಮೆಣಸು  ಎಲ್ಲವೂ ಒಂದು ಚಮಚ, ಉದ್ದಿನ ಬೇಳೆ ಎರಡು ಚಮಚ, ಕೊತ್ತಂಬರಿ ಬೀಜ ಒಂದು ಚಮಚ, ಕಡಲೆ ಬೇಳೆ ಒಂದು ಚಮಚ, ಒಣಕೊಬ್ಬರಿ ತುರಿ ಅರ್ಧ ಕಪ್, ಉಪ್ಪು ರುಚಿಗೆ, ತೊಗರಿ ಬೇಳೆ ಒಂದುಕಪ್, ಚೂರು ಬೆಲ್ಲ.

ಮಾಡುವ ವಿಧಾನ: ತರಕಾರಿ ತೊಳೆದು ಹೆಚ್ಚಿಕೊಂಡು ಕುಕ್ಕರ್‌ನಲ್ಲಿ ಬೇಳೆ, ಅವರೆಕಾಳು ಎಲ್ಲ ಹಾಕಿ ಬೇಯಿಸಿಕೊಳ್ಳಿ.

ಬಾಣಲೆಗೆ, ಸ್ವಲ್ಪ ತುಪ್ಪ ಹಾಕಿ, ಮೆಣಸು, ಉದ್ದಿನಬೇಳೆ, ಕಡಲೆಬೇಳೆ ಕೊತ್ತಂಬರಿ ಬೀಜ ಹುರಿದುಕೊಂಡು, ಕೊಬ್ಬರಿ ಸೇರಿಸಿ ಮಿಕ್ಸಿ ಮಾಡಿ, ಬೆಂದಿರುವ ಹೋಳಿಗೆ ಹಾಕಿ ಚನ್ನಾಗಿ ಕುದಿಸಿ, (ಉಪ್ಪು ತರಕಾರಿ ಬೇಯುವಾಗಲೇ ಹಾಕಿ,) ಸಾಸಿವೆ ಇಂಗು ತುಪ್ಪದಲ್ಲಿ ವಗ್ಗರಣೆ ಮಾಡಿ ಹಾಕಿ, ಇದು ರೊಟ್ಟಿ , ಚಪಾತಿ , ಪುರಿ , ಅನ್ನದ ಜೊತೆಗೆ ತಿನ್ನಲು ಚನ್ನ

**

ಅವರೆಕಾಳಿನ ಸಾರು

ಬೇಕಾಗುವ ಸಾಮಗ್ರಿ: ಅವರೆಕಾಳು ಒಂದು ಪಾವು, ಒಣಮೆಣಸಿನ ಕಾಯಿ ಐದು, ಜೀರಿಗೆ. ದನಿಯಾ, ತಲಾ ಒಂದು ಚಮಚ, ಕಾಯಿತುರಿ ಒಂದುಕಪ್, ಉಪ್ಪು, ಇಂಗು, ಕೊತ್ತಂಬರಿ, ಕರಿಬೇವು, ತುಪ್ಪ, ಸ್ವಲ್ಪ ಹುಣಸೆ ಹಣ್ಣು , ಒಂದು ಟೊಮೆಟೊ. ಸಾಸಿವೆ ಒಗ್ಗರಣೆಗೆ.

ಮಾಡುವ ವಿಧಾನ: ಅವರೆಕಾಳನ್ನು ಬೇಯಿಸಿ, ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ. ಜೊತೆಗೆ ಬೆಂದ ಸ್ವಲ್ಪ ಕಾಳನ್ನು ಅದರೊಂದಿಗೆ ಸೇರಿಸಿ ಮಿಕ್ಸಿ ಮಾಡಿಕೊಳ್ಳಿ. ಬೆಂದಿರುವ ಕಾಳಿಗೆ  ಸೇರಿಸಿ. ಚೆನ್ನಾಗಿ ಕುದಿಸಿ, ತುಪ್ಪದಲ್ಲಿ ಸಾಸಿವೆ, ಇಂಗು ಕರಿಬೇವಿನ ಒಗ್ಗರಣೆ ಹಾಕಿ. ಬಿಸಿಬಿಸಿ ಸಾರು ಅನ್ನ–ತುಪ್ಪದೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

-ಉಮಾ ಸರ್ವೇಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT