7

‘ಸರ್ಕಾರದಿಂದ ಅಕ್ರಮ ಗಣಿಗಾರಿಕೆಗೆ ತಡೆ’

Published:
Updated:

ಸಂಡೂರು: ಬಿಜೆಪಿ ಆಡಳಿತಾವಧಿಯಲ್ಲಿ ವ್ಯಾಪಕವಾಗಿದ್ದ ಅಕ್ರಮ ಗಣಿಗಾರಿಕೆಯನ್ನು ಕಾಂಗ್ರೆಸ್‌ ನೇತೃತ್ವದ ನಮ್ಮ ಸರ್ಕಾರ ನಿಯಂತ್ರಿಸಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪಟ್ಟಣದ ಯಶವಂತ ವಿಹಾರ ಮೈದಾನದಲ್ಲಿ ಸೋಮವಾರ 507 ಕೋಟಿ ವೆಚ್ಚದ ವಿವಿಧ ಕಾಮಗಾರಿGl ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಈ ಹಿಂದೆ ಅಕ್ರಮ ಗಣಿಗಾರಿಕೆ ತಿಳಿಯಲು ತಾಲ್ಲೂಕಿನ ರಾಮಘಡಕ್ಕೆ ಬಂದಿದ್ದ ವೇಳೆ ಕೆಲವರು ನಾವು ಸಂಚರಿಸುತ್ತಿದ್ದ ರಸ್ತೆಗೆ ಮಣ್ಣು ಸುರಿದು, ಸಂಚಾರಕ್ಕೆ ತಡೆ ಒಡ್ಡಿದ್ದರು. ಗೂಂಡಾಗಳು ಬೈಕ್‌ ಮೂಲಕ ಹಿಂಬಾಲಿಸಿದ್ದರು. ನಾನು ವಿರೋಧ ಪಕ್ಷದ ನಾಯಕನಾಗಿದ್ದರೂ ಭದ್ರತೆಗಾಗಿ ಒಬ್ಬ ಕಾನ್‌ಸ್ಟೆಬಲ್‌, ಗ್ರಾಮ ಲೆಕ್ಕಿಗ, ಫಾರೆಸ್ಟ್‌ ಗಾರ್ಡ್ ಕೂಡ ಬಂದಿರಲಿಲ್ಲ. ಕಾರಣ ಅವರಿಗೆ ಜನಾರ್ದನರೆಡ್ಡಿ ಭಯವಿತ್ತು. ಆಗಲೇ ಬಳ್ಳಾರಿಗೆ ಪಾದಯಾತ್ರೆ ಮಾಡಲು ನಿರ್ಧರಿಸಿದೆವು ಎಂದು ಸ್ಮರಿಸಿದರು.

ಬಿಜೆಪಿ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಶಾಸಕರುಗಳಾದ ಕೃಷ್ಣಯ್ಯಶೆಟ್ಟಿ, ಕಟ್ಟಾ ಸುಬ್ರಹ್ಮಣ್ಯನಾಯ್ಡು, ಆನಂದ್‌ಸಿಂಗ್, ನಾಗೇಂದ್ರ, ಸುರೇಶ್‌ಬಾಬು ಜೈಲಿಗೆ ಹೋಗಿದ್ದು ಬೀಗಸ್ಥನ ಮಾಡಲಲ್ಲ. ಅಕ್ರಮ ಎಸಗಿದ್ದರಿಂದಲೇ ಜೈಲಿಗೆ ಹೋಗಬೇಕಾಯಿತು. ಈಗ ಬಿಜೆಪಿಯವರು ಪರಿವರ್ತನೆಯ ಮಾತುಗಳನ್ನು ಆಡುತ್ತಿದ್ದಾರೆ. ಆ ಪಕ್ಷದ ಮುಖಂಡರಿಗೆ ನಾಚಿಕೆಯಾಗಬೇಕು ಎಂದು ಜರೆದರು.

ಉಸ್ತುವಾರಿ ಸಚಿವ ಸಂತೋಷ್ ಲಾಡ್, ಶಾಸಕ ಈ. ತುಕಾರಾಂ, ಡಾ.ನಂಜುಂಡಪ್ಪ ವರದಿ ಅನುಷ್ಠಾನ ಸಮಿತಿ ಅಧ್ಯಕ್ಷ ಎನ್.ವೈ. ಗೋಪಾಲಕೃಷ್ಣ, ಶಾಸಕರಾದ ಅನಿಲ್‌.ಎಚ್.ಲಾಡ್, ಬಿ.ಎಂ. ನಾಗರಾಜ, ವಿಧಾನಪರಿಷತ್ ಸದಸ್ಯರಾದ ಕೆ.ಸಿ. ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ. ಕೃಷ್ಣ, ರಾಜ್ಯ ಮಹರ್ಷಿ ವಾಲ್ಮೀಕಿ ಪ.ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ.ಎನ್. ಗಿರಿಮಲ್ಲಪ್ಪ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎ. ಮಾನಯ್ಯ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಉಪಾಧ್ಯಕ್ಷ ಕೆ.ಎಂ. ಹಾಲಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ಘೋರ್ಪಡೆ, ಮಾಜಿ ಶಾಸಕ ಸಿರಾಜ್‌ ಶೇಖ್‌, ವಾಡಾ ಅಧ್ಯಕ್ಷ ರೋಷನ್ ಜಮೀರ್, ಜಿಲ್ಲಾ ಪಂಚಾಯ್ತಿ ಸದಸ್ಯ ಅಕ್ಷಯ್ ಲಾಡ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry