ಕಠಿಣ ಪರಿಶ್ರಮ ಯಶಸ್ವಿನ ಮೆಟ್ಟಿಲು: ಕಾಶಿ ಶ್ರೀ

7

ಕಠಿಣ ಪರಿಶ್ರಮ ಯಶಸ್ವಿನ ಮೆಟ್ಟಿಲು: ಕಾಶಿ ಶ್ರೀ

Published:
Updated:

ನರಗುಂದ: ‘ಉತ್ತಮ ಕಾರ್ಯ ಸಾಧನೆಗೆ ತಪಸ್ಸು ಹಾಗೂ ಏಕಾಗ್ರತೆ ಬೇಕು. ಕಠಿಣ ತಪಸ್ಸು ಹಾಗೂ ಪರಿಶ್ರಮ ಯಶಸ್ಸಿನ ಮೆಟ್ಟಿಲು’ ಎಂದು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಕೊಣ್ಣೂರಿನಲ್ಲಿ ನಡೆದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರ ಮೌನ ತಪೋನುಷ್ಠಾನ ಮಹಾಮಂಗಲ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾವನೆಗಳು ಶುದ್ಧವಾಗಿದ್ದರೆ, ಭಾಗ್ಯಕ್ಕೇನು ಕಡಿಮೆ ಇರುವುದಿಲ್ಲ. ಜೀವನದಲ್ಲಿ ಕಷ್ಟ, ಸುಖ ಒಂದಾದ ನಂತರ ಒಂದರಂತೆ ಬರುತ್ತವೆ. ಅವುಗಳನ್ನು ಆತ್ಮಸ್ಥೈರ್ಯದಿಂದ ಎದುರಿಸುವುದನ್ನ ರೂಢಿಸಿಕೊಳ್ಳಬೇಕು’ ಎಂದು ಕೊಣ್ಣೂರು ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಹೇಳಿದರು. ಬದಾಮಿಯ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮಹಾಂತೇಶ ಮಮದಾಪುರ ಕಾರ್ಯಕ್ರಮ ಉದ್ಘಾಟಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ರಾಜಶೇಖರ ಶಿವಾಚಾರ್ಯರು, ನೀಲಕಂಠ ಶಿವಾಚಾರ್ಯರು, ಸಿದ್ಧಲಿಂಗ ಶಿವಾ ಚಾರ್ಯರು, ಜಿಲ್ಲಾ ಪಂಚಾಯ್ತಿ ಸದಸ್ಯೆ ರೇಣುಕಾ ಅವರಾದಿ, ತಾಲ್ಲೂಕು ಪಂಚಾಯ್ತಿ ಸದಸ್ಯ ಟಿ.ಬಿ.ಶಿರಿಯಪ್ಪಗೌಡ್ರ, ಎ.ಪಿ.ಎಂಸಿ.ಸದಸ್ಯ ಶಂಕರಗೌಡ ಯಲ್ಲಪ್ಪಗೌಡ್ರ, ಬಸಯ್ಯ ಚಿಕ್ಕಮಠ,ವಿಕ್ರಮ ಭೂಸರಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry