ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಪಾತ್ರದ ಮೂಲಕ ಮತ್ತೆ ಬೆಳ್ಳಿ ತೆರೆಗೆ ರಾಣಿ ಮುಖರ್ಜಿ: ’ಹಿಚಕಿ’ ಟ್ರೇಲರ್‌ ಬಿಡುಗಡೆ

Last Updated 19 ಡಿಸೆಂಬರ್ 2017, 11:54 IST
ಅಕ್ಷರ ಗಾತ್ರ

ಬೆಂಗಳೂರು: ನಾಲ್ಕು ವರ್ಷಗಳ ನಂತರ ರಾಣಿ ಮುಖರ್ಜಿ ಮತ್ತೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಚಕಿ ಚಿತ್ರದಲ್ಲಿ ಸವಾಲಿನ ಪಾತ್ರದ ಮೂಲಕ ಬಾಲಿವುಡ್‌ ಅಂಗಳದಲ್ಲಿ ಮರುಪ್ರವೇಶ ಪಡೆಯುತ್ತಿದ್ದು, ಚಿತ್ರದ ಟ್ರೇಲರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ಯದ ಟ್ರೆಂಡ್‌ ಆಗಿದೆ.

ಮಂಗಳವಾರ ಹಿಚಕಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಯುಟ್ಯೂಬ್‌ನಲ್ಲಿ 3.5 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ವಿಶೇಷ ಕಾಳಜಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಶಿಕ್ಷಕಿಯಾಗಿ ಕಾಣಿಸಿಕೊಳ್ಳುವ ರಾಣಿ ಮುಖರ್ಜಿ ಪಾತ್ರಕ್ಕೆ ಅಗತ್ಯವಿರುವ ಭಿನ್ನ ಮ್ಯಾನರಿಸಂ ಅನ್ನು ತನ್ನದಾಗಿಸಿಕೊಂಡಿರುವುದು ಟ್ರೇಲರ್‌ನಲ್ಲಿ ಸ್ಪಷ್ಟವಾಗುತ್ತದೆ.

ನರದೌರ್ಬಲ್ಯಕ್ಕೆ ಸಂಬಂಧಿಸಿದ ಟುರೆಟ್‌ ಸಿಂಡ್ರೋಮ್‌ ಹೊಂದಿರುವ ಶಿಕ್ಷಕಿಗೆ ಆಗಾಗ್ಗೆ ಕಾಡುವ ಬಿಕ್ಕಳಿಕೆ ಹಾಗೂ ನರಗಳ ಸೆಳೆತದ ಸಮಸ್ಯೆ ಇರುತ್ತದೆ. ಎಲ್ಲರಿಗೂ ಕಾಣುವಂತಹ ದೌರ್ಬಲ್ಯದ ನಡುವೆಯೂ ಆಕೆ ತನ್ನ ವಿಶ್ವಾಸವನ್ನು ಕಳೆದುಕೊಳ್ಳುವುದಿಲ್ಲ. ಇದರೊಂದಿಗೆ ತನ್ನ ವಿದ್ಯಾರ್ಥಿಗಳಿಗೂ ಸರಿಯಾದ ಹಾದಿ ಕಂಡುಕೊಳ್ಳಲೂ ಹೇಗೆ ಸಹಕಾರಿಯಾಗುತ್ತಾಳೆ ಎಂಬುದು ಈ ಪಾತ್ರದ ಕಥೆ.

2018ರ ಫೆಬ್ರುವರಿ 23ರಂದು ಚಿತ್ರ ಬಿಡುಗಡೆಗೆ ನಿಗದಿಯಾಗಿದೆ. ಸಿದ್ಧಾರ್ಥ್‌ ಪಿ ಮಲ್ಹೋತ್ರಾ ನಿರ್ದೇಶನದ ಈ ಚಿತ್ರವನ್ನು ಯಶ್‌ ರಾಜ್‌ ಫಿಲ್ಮಂಸ್‌ ತೆರೆಗೆ ತರಲಿದೆ.

2014ರಲ್ಲಿ ತೆರೆಕಂಡಿದ್ದ ಪ್ರದೀಪ್‌ ಸರ್ಕಾರ್‌ ನಿರ್ದೇಶನದ ಮರ್ದಾನಿ ರಾಣಿ ಮುಖರ್ಜಿ ಅಭಿನಯಿಸಿದ್ದ ಕೊನೆಯ ಚಿತ್ರ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT