5

ಮೊಜಿಲ್ಲಾ ತಂದಿದೆ ವೇಗದ ಬ್ರೌಸರ್

Published:
Updated:
ಮೊಜಿಲ್ಲಾ ತಂದಿದೆ ವೇಗದ ಬ್ರೌಸರ್

ಮೊಜಿಲ್ಲಾದ ಜನಪ್ರಿಯ ಬ್ರೌಸರ್‌ ‘ಫೈರ್‌ಫಾಕ್ಸ್‌’ನ ಹೊಸ ಆವೃತ್ತಿ ಈಚೆಗಷ್ಟೇ ಬಿಡುಗಡೆಯಾಗಿದೆ. ಇದು ಫೈರ್‌ಫಾಕ್ಸ್‌ನ 57ನೇ ಆವೃತ್ತಿ. ಮೊಜಿಲ್ಲಾ ಇದನ್ನು 'ಕ್ವಾಂಟಮ್' ಎಂದೂ ಕರೆದಿದೆ. ಈ ಬ್ರೌಸರ್‌ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿಸ್ಪರ್ಧಿ ಕಂಪೆನಿ ಗೂಗಲ್‌ನ ಕ್ರೋಮ್‌ಗೆ ಹೋಲಿಸಿದರೆ ಕಡಿಮೆ ಮೆಮೊರಿ ಬಳಸುತ್ತದೆ ಎಂಬುದು ಸಂಸ್ಥೆ ನೀಡುವ ವಾಗ್ದಾನ.

‘ಕ್ವಾಂಟಮ್’ ಸರ್ಚ್ ಎಂಜಿನ್‌ನ ಪ್ರಮುಖ ಉಪಯೋಗಗಳ ಪರಿಚಯ ಇಲ್ಲಿದೆ.

ವೇಗ: ಕ್ವಾಂಟಮ್ ಬ್ರೌಸರ್‌ ಹುಡುಕುವ ಕೆಲಸವನ್ನು ಸುಲಭವಾಗಿಸಿದೆ. ಬ್ರೌಸರ್‌ನಲ್ಲಿ ಏಕಕಾಲಕ್ಕೆ ಬೇರೆ ಬೇರೆ ಟ್ಯಾಬ್‌ಗಳು ತೆರೆದುಕೊಂಡಿದ್ದರೂ, ಗೂಗಲ್ ನಕ್ಷೆಗಳಂತಹ ಕ್ಷಣಕ್ಷಣಕ್ಕೂ ಮಾಹಿತಿ ರವಾನೆ ಮಾಡುವ ತಂತ್ರಾಂಶಗಳು ಕಾರ್ಯ ನಿರ್ವಹಿಸುತ್ತಿದ್ದರೂ ಅವು ಕ್ವಾಂಟಮ್‌ನ ವೇಗದ ಮೇಲೆ ಪರಿಣಾಮ ಬೀರುವುದಿಲ್ಲ. ಫೈರ್‌ಫಾಕ್ಸ್‌ನ ಹಿಂದಿನ ಆವೃತ್ತಿಯಾದ ಜೆಕೋ ಸರ್ಚ್ ಎಂಜಿನ್ ಬಳಸುತ್ತಿದ್ದವರಿಗೆ ಇದು ನಿಜಕ್ಕೂ ಸಂತಸದ ಸುದ್ದಿ.

ಆಕರ್ಷಕ ವಿನ್ಯಾಸ: 57ನೇ ಆವೃತ್ತಿಯ ವಿನ್ಯಾಸವನ್ನು ಇನ್ನಷ್ಟು ಆಕರ್ಷಕಗೊಳಿಸಲಾಗಿದೆ. ಈವರೆಗೆ ಬಳಸಿ ರೂಢಿಯಾದ ಫೈರ್‌ಫಾಕ್ಸ್‌ ಎಂಜಿನ್‌ಗಳಲ್ಲಿ ಇರುವುದಕ್ಕಿಂತಲೂ ಹೊಸ ಐಕಾನ್‌ಗಳನ್ನು ಈ ಆವೃತ್ತಿಯಲ್ಲಿ ನೀಡಲಾಗಿದೆ. ಒರಟು ಅಂಚುಗಳನ್ನು ನುಣುಪು ಮಾಡಲಾಗಿದೆ. ಇದು ಕಣ್ಣಿಗೆ ಹಿತಾನುಭವ ನೀಡಲಿದೆ.

ಬಳಕೆದಾರ ಸ್ನೇಹಿ: ಈಗಾಗಲೇ ಕ್ವಾಂಟಮ್ ಬಳಕೆದಾರರಾಗಿದ್ದರೆ ಈ ಶೋಧ ಯಂತ್ರವು ನಮ್ಮ ಕೆಲಸವನ್ನು ಇನ್ನಷ್ಟು ಸರಳಗೊಳಿಸಲಿದೆ. ಅಡ್ರೆಸ್ ಬಾರ್ ಮತ್ತು ಸರ್ಚ್ ಬಾಕ್ಸ್ ಎರಡೂ ಒಂದೇ ಆಗಬಹುದು. ಹೊಸದಾಗಿ ಲೈಬ್ರರಿ ಗುಂಡಿಯನ್ನು ನೀಡಲಾಗಿದೆ. ಇದು ನಾವು ಈ ಹಿಂದೆ ಹುಡುಕಿದ ಬುಕ್ ಮಾರ್ಕ್, ಡೌನ್‌ಲೋಡ್ ಹಾಗೂ ಹಿಸ್ಟರಿಗಳನ್ನು ತೋರಿಸುತ್ತದೆ. ಅದು ನಮ್ಮ ಮುಂದಿನ ಹುಡುಕಾಟಕ್ಕೆ ಹೆಚ್ಚು ಅನುಕೂಲವಾಗಬಹುದು. ಐಕಾನ್‌ಗಳು ಹಾಗೂ ಬಟನ್‌ಗಳ ಗಾತ್ರವನ್ನು ಹಿಗ್ಗಿಸಲಾಗಿದೆ. ಟಚ್‌ಸ್ಕ್ರೀನ್‌ ಕಂಪ್ಯೂಟರ್ ಬಳಸುವವರಿಗೆ ಇದು ಖುಷಿಕೊಡುವ ವಿಷಯ.

ಸ್ಕ್ರೀನ್‌ ಶಾಟ್‌ ಎಂಬ ಬೋನಸ್: ಹೊಸ ಬ್ರೌಸರ್‌ನಲ್ಲಿ ಸಾಕಷ್ಟು ವೈಶಿಷ್ಟ್ಯಗಳಿವೆ. ಅದರಲ್ಲಿ ಮುಖ್ಯವಾದುದು, ಸ್ಕ್ರೀನ್‌ ಶಾಟ್ ಆಯ್ಕೆ. ಯಾವುದೇ ಪುಟದ ಸ್ಕ್ರೀನ್‌ ಶಾಟ್ ತೆಗೆದುಕೊಳ್ಳಲು ಇದು ಸಹಕಾರಿ. ಇಡೀ ಪುಟದ ಸ್ಕ್ರೀನ್ ಶಾಟ್ ಅಗತ್ಯ ಇಲ್ಲ ಎಂದಾದರೆ ಬೇಕಾದ ಭಾಗವನ್ನಷ್ಟೇ ಆಯ್ಕೆ ಮಾಡಿ ಅದನ್ನಷ್ಟೇ ಸ್ಕ್ರೀನ್ ಶಾಟ್ ಪಡೆದುಕೊಳ್ಳಬಹುದು. ಅಡ್ರೆಸ್ ಬಾರ್‌ನಲ್ಲಿಯೇ ಈ ಆಯ್ಕೆಯನ್ನು ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry