7

ಕತ್ರಿನಾ ಸ್ಕರ್ಟ್‌ಗೆ 30 ರಿಂಗು

Published:
Updated:
ಕತ್ರಿನಾ ಸ್ಕರ್ಟ್‌ಗೆ 30 ರಿಂಗು

ಸೆಲಬ್ರಿಟಿಗಳು ಧರಿಸಿದ ಉಡುಗೆ ತೊಡುಗೆಗಳು ಬೇಗನೆ ಸುದ್ದಿಯಾಗುತ್ತವೆ. ಬಾಲಿವುಡ್‌ನ ಬಳುಕುವ ಸುಂದರಿ ಕತ್ರಿನಾ ಕೈಫ್‌ ಮೊನ್ನೆ ಧರಿಸಿದ್ದ ಸ್ಕರ್ಟು ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.

ಕತ್ರಿನಾ ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ. ಸ್ಕರ್ಟ್‌ ಫ್ಯಾಷನ್‌ಗೆ ಮತ್ತೆ ಮಾರುಕಟ್ಟೆ ಗಿಟ್ಟಿಸಿಕೊಡುತ್ತಿದ್ದಾರೆ. ಕತ್ರಿನಾಗೆ ಸ್ಕರ್ಟ್‌ ಮೇಲೆ ವ್ಯಾಮೋಹ ಶುರುವಾಗಿದೆ ಎನ್ನುವ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇಷ್ಟೇ ಅಲ್ಲ, ಒಂದೇ ವಾರದಲ್ಲಿ ಎರಡು ಬಾರಿ ಇದೇ ಮಾದರಿಯ ಸ್ಕರ್ಟ್‌ ಧರಿಸಿದ್ದರಂತೆ ಕತ್ರಿನಾ.

ಹೌದಲ್ಲ? ಮಂಡಿವರೆಗಿನ ಕಪ್ಪು ಸ್ಕರ್ಟ್‌ನ ಮುಂಭಾಗದಲ್ಲಿ ಸ್ಟೀಲ್‌ ರಿಂಗ್‌ಗಳಿರುವುದರಿಂದ ಇದನ್ನು ‘ರಿಂಗ್‌ ಸ್ಕರ್ಟ್‌’ ಎಂದೂ, ನೆರಿಗೆ ಇದೆ ಎಂಬ ಭ್ರಮೆ ಹುಟ್ಟಿಸುವ ಕಟ್ಟಿಂಗ್‌, ಸ್ಲಿಟ್‌ಗಳಿಂದಾಗಿ ಸ್ಕರ್ಟ್‌ಗೆ ವಿಭಿನ್ನ ನೋಟವೇ ದಕ್ಕಿದೆ. ಇನ್ನೂ ಸ್ವಲ್ಪ ಗ್ಲಾಮರಸ್‌ ಆಗಿರಲಿ ಎಂದು ಒಂದು ಸ್ಲಿಟ್‌ಅನ್ನು ತೊಡೆ ಸಂದಿವರೆಗೂ ವಿಸ್ತರಿಸಲಾಗಿದೆ. ಇಲ್ಲಿರುವ ರಿಂಗ್‌ಗಳು ಮತ್ತು ಟೀಶರ್ಟ್‌, ಅದರ ಮೇಲಿನ ಬರಹ ಕತ್ರಿನಾ ವಯಸ್ಸನ್ನೇ ಮರೆಮಾಚುವಂತೆ ಮಾಡಿದೆ.

ಈ ಸ್ಕರ್ಟ್‌ ಬಗ್ಗೆ ಮಾತನಾಡೋಣ. ಇದು, ಯಾವುದೇ ಸಮಾರಂಭಗಳಿಗೂ ಒಗ್ಗುವಂತಹ ಉಡುಗೆ. ಇದನ್ನು ‘ನೇಪಾಲಿ ರಿಂಗ್‌ ಡಿಟೈಲ್ಡ್‌ ಸ್ಕರ್ಟ್‌’ ಎಂದೇ ಫ್ಯಾಷನ್‌ ಜಗತ್ತು ಗುರುತಿಸೋದು. ಸ್ಕರ್ಟ್‌ನ ಸೊಂಟದ ಪಟ್ಟಿ ಹೊಟ್ಟೆಯ ಮಧ್ಯಭಾಗದಲ್ಲಿ ಕೂರುವಂತಿದೆ. ಇದೇ ಕಾರಣಕ್ಕೆ ಇದನ್ನು ‘ಹೈ ವೇಸ್ಟ್‌’ ಅಂತ ಹೇಳಲಾಗುತ್ತದೆ. ಮಕ್ಕಳಿಂದ ಯುವತಿಯವರೆಗೂ ಈ ಸ್ಕರ್ಟ್‌ ಸೂಕ್ತವೆನಿಸುತ್ತದೆ. ದಪ್ಪಗಿರುವವರಿಗಿಂತ ತೆಳ್ಳಗಿರುವವರಿಗೆ ಈ ಸ್ಕರ್ಟ್‌ ಹೆಚ್ಚು ಹೊಂದುತ್ತದೆ. ‘ಹೈ ವೇಸ್ಟ್‌’ನಿಂದಾಗಿ ಹೊಟ್ಟೆ ಅಥವಾ ಸೊಂಟದ ಸುತ್ತಲಿನ ಬೊಜ್ಜು ಎದ್ದುಕಾಣುವುದು ಇದಕ್ಕೆ ಕಾರಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry