7

ಡಯೆಟ್‌, ಚರ್ಮದ ಹೊಳಪಿಗೂ ಬ್ರೊಕೊಲಿ

Published:
Updated:
ಡಯೆಟ್‌, ಚರ್ಮದ ಹೊಳಪಿಗೂ ಬ್ರೊಕೊಲಿ

ತರಕಾರಿ ಬ್ರೊಕೊಲಿಯಲ್ಲಿ ವಿಟಮಿನ್ ಸಿ, ಡಿ, ಎ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಶಿಯಂ, ಖನಿಜಗಳು, ನಾರಿನಾಂಶ ಮತ್ತು ಆಂಟಿಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಡಯೆಟ್‌ ಮಾಡುವವರ ತರಕಾರಿ ಬೌಲ್‌ನಲ್ಲಿ ಬ್ರೊಕೊಲಿ ಇದ್ದೇ ಇರಬೇಕು. ಬ್ರೊಕೊಲಿಯು ಮಧುಮೇಹ, ಕ್ಯಾನ್ಸರ್‌ ತಡೆ, ಹಾಗೂ ಸೌಂದರ್ಯವರ್ಧಕವೂ ಆಗಿದೆ. ಬ್ರೊಕೊಲಿಯ ಕೆಲ ಉಪಯೋಗಗಳ ಪರಿಚಯ ಇಲ್ಲಿದೆ...

ಕ್ಯಾನ್ಸರ್‌ ಬರಲು ಕಾರಣವಾಗುವ ಈಸ್ಟ್ರೊಜೆನ್‌ಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಬ್ರೊಕೊಲಿ ಹೊಂದಿದೆ. ಇದರ ಸೇವನೆಯಿಂದಾಗಿ ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ.

ನಾರಿನ ಅಂಶವು ಬ್ರೊಕೊಲಿಯಲ್ಲಿ ಗಣನೀಯ ಪ್ರಮಾಣದಲ್ಲಿದೆ. ಜೀರ್ಣಕ್ರಿಯೆಗೆ ಮತ್ತು ದೇಹದಲ್ಲಿರುವ ಕೊಬ್ಬನ್ನು ಹೊರಹಾಕಲು ಇದು ಸಹಾಯಕ. ರಕ್ತದಲ್ಲಿರುವ ಸಕ್ಕರೆ ಅಂಶವನ್ನೂ ಕಡಿಮೆ ಮಾಡುತ್ತದೆ.

ಬ್ರೊಕೊಲಿಯಲ್ಲಿ ಗಣನೀಯ ಪ್ರಮಾಣದ ಕ್ಯಾಲ್ಸಿಯಂ ಹಾಗೂ ವಿಟಮಿನ್‌ ಕೆ ಇದೆ. ಇದು ಮೂಳೆಯ ಆರೋಗ್ಯವನ್ನು ಕಾಪಾಡಿ, ಮೂಳೆಗಡಸುರೋಗ ಬರದಂತೆ ತಡೆಯುತ್ತದೆ. ಮ್ಯಾಗ್ನೇಶಿಯಂ, ಗಂಧಕದ ಅಂಶವೂ ಇರುವುದರಿಂದ ಮಕ್ಕಳು, ವೃದ್ಧರು ಹಾಗೂ ಬಾಣಂತಿಯರಿಗೆ ಒಳಿತು. ಇದು ಕಣ್ಣಿನ ಆರೋಗ್ಯಕ್ಕೂ ಪೂರಕ.

ಸಮರ್ಪಕ ರಕ್ತ ಸಂಚಾರಕ್ಕೆ ಸಹಕಾರಿ. ಹೀಗಾಗಿ ಹೃದಯಾಘಾತ ತಪ್ಪಿಸಬಲ್ಲದು. ಬ್ರೊಕೊಲಿ ತಿಂದರೆ ಚರ್ಮ ಹೊಳಪಾಗುವುದಷ್ಟೇ ಅಲ್ಲ, ಸೋಂಕು ಆಗದಂತೆ ತಡೆಯುತ್ತದೆ. ಆ್ಯಂಟಿ ಆಕ್ಸಿಡೆಂಟ್‌ ಹೊಂದಿರುವ ಬ್ರೊಕೊಲಿ ಚರ್ಮ ಸುಕ್ಕುಗಟ್ಟುವುದನ್ನು ತಡೆಗಟ್ಟುತ್ತದೆ. ನಿತ್ಯ ಸೇವನೆಯಿಂದ ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ಮತ್ತು ಮುಖದ ಕಪ್ಪುಕಲೆ ಕಡಿಮೆಯಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry