ಶನಿವಾರ, ಮೇ 15, 2021
24 °C

ಬೆಂಗಳೂರು ‘ನೈಟ್ಸ್‌’ಗೆ ಸನ್ನಿ ಬರಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ‘ನೈಟ್ಸ್‌’ಗೆ ಸನ್ನಿ ಬರಲ್ಲ

ಬೆಂಗಳೂರು: ಹೊಸ ವರ್ಷದ ಪ್ರಯುಕ್ತ ಡಿ.31ರ ರಾತ್ರಿ ನಗರದ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ನಡೆಸಲು ಉದ್ದೇಶಿಸಲಾಗಿರುವ ‘ಸನ್ನಿ ನೈಟ್ಸ್‌’ ಕಾರ್ಯಕ್ರಮದಲ್ಲಿ ತಾವು ಪಾಲ್ಗೊಳ್ಳುವುದಿಲ್ಲ ಎಂದು ನಟಿ ಸನ್ನಿ ಲಿಯೋನ್ ಮಂಗಳವಾರ ಟ್ವೀಟ್ ಮಾಡಿದ್ದು, ಇದರಿಂದ ಆಯೋಜಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ನನಗೆ ಹಾಗೂ ನನ್ನ ಅಭಿಮಾನಿಗಳಿಗೆ ಸುರಕ್ಷತೆ ಒದಗಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಬಹಿರಂಗವಾಗಿ ಹೇಳುತ್ತಿದ್ದಾರೆ. ಹೀಗಾಗಿ, ಜನರ ಸುರಕ್ಷತೆಯೇ ಮುಖ್ಯವೆಂದು ಪರಿಗಣಿಸಿ ನಾನು ಹಾಗೂ ನಮ್ಮ ತಂಡದವರು ಕಾರ್ಯಕ್ರಮದಿಂದ ಹಿಂದೆ ಸರಿದಿದ್ದೇವೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು’ ಎಂದು ಸನ್ನಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‌ಗೆ 3,700 ಲೈಕ್‌ಗಳು ಹಾಗೂ 666 ರಿ–ಟ್ವೀಟ್‌ಗಳು ಬಂದಿವೆ. ಸನ್ನಿ ಕಾರ್ಯಕ್ರಮಕ್ಕೆ ಸುರಕ್ಷತೆ ಒದಗಿಸದ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾ ಣಗಳಲ್ಲಿ ಅಭಿಮಾನಿಗಳು ಆಕ್ರೋಶ

ವ್ಯಕ್ತಪಡಿಸಿದ್ದಾರೆ.

‘ಇಂಥ ಒಂದು ಸಣ್ಣ ಕಾರ್ಯಕ್ರಮಕ್ಕೆ ಭದ್ರತೆ ಒದಗಿಸಲು ಆಗುವುದಿಲ್ಲ ಎಂದರೆ, ರಾಜ್ಯದ ಜನ ನಿಮ್ಮಿಂದ ಎಂಥ ಸುರಕ್ಷತೆಯನ್ನು ನಿರೀಕ್ಷೆ ಮಾಡಬಹುದು. ಸನ್ನಿ ಲಿಯೋನ್ ಒಳ್ಳೆಯ ಕಾರಣವನ್ನೇ ನೀಡಿ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ’ ಎಂದು ಮೋಹಿತ್ ಕೊಹ್ಲಿ ಎಂಬುವರು ಟ್ವೀಟ್ ಮಾಡಿದ್ದಾರೆ.

‘ತಮ್ಮ ಕಲೆಯನ್ನು ಪ್ರದರ್ಶಿಸುವುದಕ್ಕೆ ಸೂಕ್ತ ವಾತಾವರಣ ಇಲ್ಲದ ಜಾಗಕ್ಕೆ ಹೋಗುವುದು ಬೇಡ. ಅದು ನಿಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ದಯವಿಟ್ಟು ದೆಹಲಿಗೆ ಬಂದು ಕಾರ್ಯಕ್ರಮ ಕೊಡಿ’ ಎಂದು ಶಶಾಂಕ್ ಎಂಬುವರು ಟ್ವೀಟ್‌ನಲ್ಲಿ ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.