7

ಹಿಂದೂಗಳ ರಕ್ಷಣೆಗೆ ‘ಚಲೋ ಖಡಕ್‌ ಗಲ್ಲಿ’

Published:
Updated:
ಹಿಂದೂಗಳ ರಕ್ಷಣೆಗೆ ‘ಚಲೋ ಖಡಕ್‌ ಗಲ್ಲಿ’

ಬೆಳಗಾವಿ: ಇಲ್ಲಿನ ಭಡಕಲ್‌ ಗಲ್ಲಿ, ಜಾಲಗಾರ ಗಲ್ಲಿ, ಖಂಜರ ಗಲ್ಲಿ ಹಾಗೂ ಘೀ ಗಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆಸಿರುವ ಕಿಡಿಗೇಡಿಗಳನ್ನು ಒಂದು ವಾರದೊಳಗೆ ಬಂಧಿಸಬೇಕು. ಇಲ್ಲದಿದ್ದರೆ ನಗರದ ಎಲ್ಲ ಹಿಂದೂಗಳನ್ನು ಸೇರಿಸಿ ಕೊಂಡು ‘ಚಲೋ ಖಡಕ್‌ ಗಲ್ಲಿ’ ಹಮ್ಮಿಕೊಳ್ಳುತ್ತೇವೆ ಎಂದು ಬಿಜೆಪಿ ಮುಖಂಡ ಅಭಯ ಪಾಟೀಲ ಹೇಳಿದರು.

‘ಪದೇ ಪದೇ ಘರ್ಷಣೆಗಳು ನಡೆಯುತ್ತಿದ್ದರೂ ಪೊಲೀಸರು ಏನೂ ಕ್ರಮಕೈಗೊಳ್ಳುತ್ತಿಲ್ಲ. ಇದರ ಹಿಂದೆ ರಾಜಕೀಯ ಒತ್ತಡವಿದೆ. ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಪಕ್ಷದ ಮುಖಂಡರ ಕೈವಾಡವಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಇದಕ್ಕಿಂತಲೂ ಮುಂಚೆ ನಗರ ಪೊಲೀಸ್‌ ಆಯುಕ್ತರೂ (ಪ್ರಭಾರ) ಆಗಿರುವ ಐಜಿಪಿ ಕೆ.ರಾಮಚಂದ್ರ ರಾವ್‌ ಅವರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡರು, ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.

ಮುಖಂಡ ಅಭಯ ಪಾಟೀಲ ಮಾತನಾಡಿ, ‘ಮೊದಲು ಕಲ್ಲು ತೂರಾಟ ನಡೆಸಿದ ವ್ಯಕ್ತಿಗಳನ್ನು ಪತ್ತೆ ಹಚ್ಚಬೇಕು. ಅವರನ್ನು ಬಂಧಿಸಿ, ಶಿಕ್ಷೆ ನೀಡಿದರೆ ಮಾತ್ರ ಮುಂದೆ ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟಬಹುದು. ಪೊಲೀಸ್‌ ಅಧಿಕಾರಿಗಳು ಚಿತ್ರೀಕರಿಸಿಕೊಂಡಿರುವ ವಿಡಿಯೊ ದೃಶ್ಯಾವಳಿಗಳನ್ನು ನೋಡಿ, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ’ ಎಂದು ಒತ್ತಾಯಿಸಿದರು.

‘ರಾತ್ರಿ ಬಂಧಿಸಿದ್ದ ಐದು ಜನ ಆರೋಪಿಗಳನ್ನು ಯಾರ ಒತ್ತಡಕ್ಕೆ ಮಣಿದು ಪೊಲೀಸರು ಬಿಟ್ಟಿದ್ದಾರೆ. ನಿಮ್ಮ ಕೆಲಸದಲ್ಲಿ ಯಾರಾದರೂ ಒತ್ತಡ ತರುತ್ತಿದ್ದಾರೆ ? ಹಿಂದೂಗಳ 10 ಜನರನ್ನು, ಮುಸ್ಲಿಂ ಸಮುದಾಯದ 10 ಜನರನ್ನು ಹೀಗೆ ನಂಬರ್‌ ತೋರಿಸಿ ಬಂಧಿಸುವುದು ಬೇಡ.

ಯಾರು ನಿಜವಾದ ಅಪರಾಧಿಗಳಿದ್ದಾರೆಯೋ ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.

ಶಾಸಕ ಸಂಜಯ ಪಾಟೀಲ ಮಾತನಾಡಿ, ‘ವಿಮಾನ ನಿಲ್ದಾಣದ ರನ್‌ ವೇಯಲ್ಲಿ ಹೋಗಲು ಯಾರಿಗೂ ಅವಕಾಶವಿಲ್ಲ. ಅಂತಹದರಲ್ಲಿ ರನ್‌ವೇಯಲ್ಲಿ ಓಡಾಡುತ್ತಿದ್ದ ಮುಸ್ಲಿಂ ಸಮುದಾಯದ ಆರು ಜನ ಯುವಕರನ್ನು ಪೊಲೀಸರು ಹೇಗೆ ಬಿಟ್ಟಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಆರೋಪಿಸಿದರು.

‘ಕಳೆದ ಎರಡು ವರ್ಷಗಳ ಅವಧಿಯಲ್ಲಿ 5–6 ಸಲ ಘರ್ಷಣೆಗಳು ಉಂಟಾಗಿವೆ. ನಿಜವಾದ ಕಿಡಿಗೇಡಿಗಳನ್ನು ಬಂಧಿಸುವ ಬದಲು ಪೊಲೀಸರು ಅಮಾಯಕ ಜನರನ್ನು ಬಂಧಿಸುತ್ತಿದ್ದಾರೆ’ ಎಂದು ಆರೋಪಿಸಿದ ಅವರು, ‘ಈ ಪ್ರದೇಶಗಳ ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಇನ್ನಷ್ಟು ಬೀದಿ ದೀಪಗಳನ್ನು ಹಾಕಬೇಕು’ ಎಂದು ಒತ್ತಾಯಿಸಿದರು.

ಕೆ.ರಾಮಚಂದ್ರ ರಾವ್‌ ಮಾತನಾಡಿ, ‘ನಗರವು ಶಾಂತಿಯುತವಾಗಿ ಇರಬೇಕಾದರೆ ಎಲ್ಲರ ಸಹಕಾರ ಬೇಕು. ಕಿಡಿಗೇಡಿಗಳನ್ನು ಬಂಧಿಸಿದಾಗ ಅವರನ್ನು ಬಿಟ್ಟುಕೊಡಿ, ಇವರನ್ನು ಬಿಡಿ ಎಂದು ಒತ್ತಾಯಿಸಬೇಡಿ. ನೀವು ಇಷ್ಟು ಸಹಕರಿಸಿದರೆ 24 ಗಂಟೆಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಬಹುದು’ ಎಂದು ಹೇಳಿದರು. ಪಕ್ಷದ ಮುಖಂಡರಾದ ಅನಿಲ ಬೆನಕೆ, ಕಿರಣ ಜಾಧವ, ಉಜ್ವಲಾ ಬಡವನಾಚೆ, ರವಿ ಪಾಟೀಲ, ಉಪಸ್ಥಿತರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry