7

‘ ಕನ್ನಡ ಕಲಿಕೆಗೆ ಉತ್ತೇಜನ’

Published:
Updated:

ಬಳ್ಳಾರಿ: ‘ ವಿದ್ಯಾರ್ಥಿಗಳಲ್ಲಿ ಕನ್ನಡ ಕಲಿಕೆಗೆ ಉತ್ತೇಜನ ನೀಡುವುದೇ ಸಂಘದ ಮೂಲ ಉದ್ದೇಶ ’ ಎಂದು ಶ್ರೀಧರಗಡ್ಡೆ ಗೋಡೆ ಕಲ್ಯಾಣಪ್ಪ ಪೊಲೀಸ್ ಗೌಡರ ಗಡಿನಾಡ ಕನ್ನಡ ಸೇವಾ ಸಂಘದ ಶ್ರೀಧರಗಡ್ಡೆ ಸಿದ್ದಬಸಪ್ಪ ಹೇಳಿದರು.

ಜಿಲ್ಲೆಯ ಗಡಿಭಾಗದ ಕೆ.ಬೆಳಗಲ್ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಕನ್ನಡ ಸೇವಾ ಸಂಘ ಹಮ್ಮಿಕೊಂಡಿದ್ದ ‘ಕನ್ನಡ ಕಲಿಯೋ ಭಾಗ್ಯ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ವೇಳೆಯಲ್ಲಿ ಸಂಘದ ಸದಸ್ಯರು ₹ 11,424 ಮೌಲ್ಯದ ಕನ್ನಡ ಭೂಪಟ ಪುಸ್ತಕಗಳು, ವಿಜ್ಞಾನದ ಉಪಕರಣಗಳನ್ನು ಶಾಲೆಗೆ ದೇಣಿಗೆ ನೀಡಿದರು.

ಮುಖ್ಯ ಶಿಕ್ಷಕ ಜಮಾಪುರ ಮಲ್ಲಪ್ಪ, ಸಂಘದ ಸಿ.ಹೇಮರೆಡ್ಡಿ, ಸಿ.ಚರಣ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕಪ್ಪಗಲ್ ತಿಮ್ಮಪ್ಪ, ಶಿಕ್ಷಕಿ ಖುಷುಬು ಬೇಬಿ, ಚಮನ್‌ ಸಾಬ್, ವೀರೇಶ್‌, ನಾಗರಾಜ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry