7

ನಾಲೆಗಳಿಗೆ ಸಮರ್ಪಕ ನೀರು ಹರಿಸಲು ರೈತರ ಆಗ್ರಹ

Published:
Updated:

ಕಂಪ್ಲಿ: ಇಲ್ಲಿನ ನೀರಾವರಿ ಇಲಾಖೆ ಉಪ ವಿಭಾಗ ವ್ಯಾಪ್ತಿಗೆ ಒಳಪಡುವ ಸಣಾಪುರ ಮತ್ತು ಎಂ.1 ವಿತರಣಾ ನಾಲೆ ಮೂಲಕ ಬೇಸಿಗೆ ಹಂಗಾಮು ಬೆಳೆಗಳಿಗೆ ಸಮರ್ಪಕ ನೀರು ಹರಿಸುವಂತೆ ಆಗ್ರಹಿಸಿ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಯಲ್ಲಪ್ಪ ಅವರಿಗೆ ಮಂಗಳವಾರ ರೈತರು ಮನವಿ ಸಲ್ಲಿಸಿದರು.

ರೈತ ಮುಖಂಡ ಎಲ್. ರಾಮನಾಯ್ಡು ಮಾತನಾಡಿ, ‘ಮುಂಗಾರು ಹಂಗಾಮಿನಲ್ಲಿ ಅನೇಕ ರೈತರು ನೀರು ಸಮರ್ಪಕವಾಗಿ ದೊರೆಯದೆ ತೊಂದರೆ ಅನುಭವಿಸಿದರು. ಈ ಸಮಸ್ಯೆ ಬೇಸಿಗೆ ಹಂಗಾಮಿನಲ್ಲಿ ಮರುಕಳಿಸದಂತೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು. ವಿಶೇಷವಾಗಿ ಕಾಲುವೆ ಕೊನೆ ಅಂಚಿನ ಭೂಮಿಗಳಿಗೂ ನೀರು ತಲುಪುವಂತೆ

ನೋಡಿಕೊಂಡಲ್ಲಿ ರೈತರಿಗೆ ಅನುಕೂಲವಾಗಲಿದೆ. ಹಾಲಿ ಕಾಲುವೆಗಳ ನೀರು ನಿರ್ವಹಣೆಗಾಗಿ ಅಧಿಕಾರಿಗಳನ್ನು ಕಾಯಂ ಆಗಿ ನೇಮಿಸುವಂತೆ’ ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್. ಓಬಳೇಶ್, ರೈತ ಮುಖಂಡರಾದ ಎನ್. ಚಂದ್ರಕಾಂತರೆಡ್ಡಿ, ಶೇಖರಗೌಡ, ವೀರನಗೌಡ, ಕೇಶವರೆಡ್ಡಿ, ಕೆ. ಪೂರ್ಣಚಂದ್ರರಾವ್, ಪೋಲೂರು ಸತ್ಯನಾರಾಯಣ, ರಾಘವರೆಡ್ಡಿ, ಚಿನ್ನಿ, ಕರಿಬಸವನಗೌಡ, ರಾಘವ ರೆಡ್ಡಿ, ಎಂ. ನಾರಾಯಣಪ್ಪ, ಕಂಠಂನೇನಿ ನೆಹರು ಸೇರಿದಂತೆಕಾಲುವೆ ವ್ಯಾಪ್ತಿಯ ರೈತರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry