7

ಮನೆ ಕೆಲಸ ಮಾಡುವ ರೋಬೊ ನಾಯಿ

Published:
Updated:
ಮನೆ ಕೆಲಸ ಮಾಡುವ ರೋಬೊ ನಾಯಿ

ಮನುಷ್ಯ ಮಾಡುವ ಬಹಳಷ್ಟು ಕೆಲಸವನ್ನು ಸಲೀಸಾಗಿ ನಿರ್ವಹಿಸಬಲ್ಲ ರೋಬೊಗಳ ಅಭಿವೃದ್ಧಿ ಕಡೆಗೇ ವಿಶ್ವದ ತಂತ್ರಜ್ಞಾನ ಕ್ಷೇತ್ರ ತುಡಿಯುತ್ತಿರುವುದು. ಅಂಥ ಒಂದು ಪ್ರಯತ್ನದ ರೂಪದಂತೆ ಬೋಸ್ಟನ್ ಡೈನಮಿಕ್ಸ್, ಒಂದು ರೋಬೊವನ್ನು ಅಭಿವೃದ್ಧಿಪಡಿಸಿದೆ.

ಥೇಟ್ ನಾಯಿಯಂತೆಯೇ ಕಾಣುವ ಈ ರೋಬೊವನ್ನು ಮನೆಯಲ್ಲಿನ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ಉದ್ದೇಶದಿಂದಲೇ ರೂಪಿಸಲಾಗಿದೆ. ಈ ಹಿಂದೆ ಇದೇ ರೂಪದಲ್ಲಿ ‘ಬಿಗ್‌ ಡಾಗ್’ ಎಂಬ ರೋಬೊವನ್ನು ಮಿಲಿಟರಿ ಸಾಮಗ್ರಿಗಳನ್ನು ಸಾಗಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಅದರ ಮಿತಿ ಮೀರಿದ ಶಬ್ದ ಆ ತಂತ್ರಜ್ಞಾನದಿಂದ ದೂರವುಳಿಯುವಂತೆ ಮಾಡಿತು. ಆ ಬಿಗ್‌ ಡಾಗ್‌ನ ಸಣ್ಣ ಮಟ್ಟದ ರೂಪವೇ ಈ ‘ಸ್ಪಾಟ್‌ ಮಿನಿ’ ರೋಬೊ.

ನಾಲ್ಕು ಕಾಲುಗಳನ್ನು, ವಿಸ್ತರಿಸಬಲ್ಲ ಕುತ್ತಿಗೆಯನ್ನು ಇದಕ್ಕೆ ನೀಡಲಾಗಿದೆ. ಹೊರಮೈ ಯೆಲ್ಲೊ ಪ್ಲಾಸ್ಟಿಕ್‌ನದ್ದು. ವಿದ್ಯುತ್ ಬೆಂಬಲಿತವಾಗಿದ್ದು, ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 90 ನಿಮಿಷದವರೆಗೂ ಕೆಲಸ ಮಾಡಬಲ್ಲದು. ಮುಂಭಾಗದಲ್ಲಿ ಫೇಸ್‌ಸ್ಟೈಲ್ ಸೆನ್ಸರ್ ಸಿಸ್ಟಂ ಇದೆ. ನೇವಿಗೇಷನ್ ಸೆನ್ಸರ್‌ಗಳು ಹಾಗೂ ಕ್ಯಾಮೆರಾಗಳು ಇದರ ಚಲನವಲನಕ್ಕೆ ಸಹಕರಿಸುತ್ತವೆ. ತೂಕ 30 ಕೆ.ಜಿ.

ಮೆಟ್ಟಿಲು ಹತ್ತಿ ಇಳಿಯಬಲ್ಲ, ಹೇಗೆಂದರೆ ಹಾಗೆ ತಿರುಗಬಲ್ಲ ಗುಣವೇ ಈ ರೋಬೊದ ವೈಶಿಷ್ಟ್ಯ. ನಾಯಿಯಂತೆಯೇ ಚುರುಕಾಗಿ ಚಲನವಲನ ಮಾಡಬಲ್ಲ ಈ ‘ಸ್ಪಾಟ್‌ ಮಿನಿ’ಯ 24 ಸೆಕೆಂಡಿನ ಟೀಸರ್ ಎಲ್ಲೆಲ್ಲೂ ಸದ್ದು ಮಾಡುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry