ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯ್ತಿ ಅಧ್ಯಕ್ಷೆಯನ್ನು ಹುಡುಕಿಕೊಂಡು ಹೋದ ಸದಸ್ಯರು

Last Updated 21 ಡಿಸೆಂಬರ್ 2017, 6:57 IST
ಅಕ್ಷರ ಗಾತ್ರ

ನ್ಯಾಮತಿ: ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಎನ್. ಸುನಿತಾ ಹನುಮಂತರಾವ್ ಗ್ರಾಮ ಪಂಚಾಯ್ತಿ ಕಚೇರಿಗೆ ಬಾರದೆ ಇರುವುದನ್ನು ಖಂಡಿಸಿ ಸದಸ್ಯರು ಅವರ ಮನೆಗೆ ಹುಡುಕಿಕೊಂಡು ಹೋಗಿ, ಪ್ರತಿಭಟನೆ ನಡೆಸಿದರು.

ಸುನೀತಾ ಒಂದು ವರ್ಷದಿಂದ ಕಚೇರಿಗೆ ಸರಿಯಾಗಿ ಬರುತ್ತಿಲ್ಲ. ಮೂರು ತಿಂಗಳಿನಿಂದ ಸಾಮಾನ್ಯ ಸಭೆಯನ್ನೂ ಕರೆಯದೆ, ಗ್ರಾಮಾಡಳಿತ ಕುಂಠಿತವಾಗಿದೆ. ಸಾರ್ವಜನಿಕರ ದಾಖಲೆ, ಸಿಬ್ಬಂದಿಯ ವೇತನ ಹಾಗೂ ಮೂಲ ಸೌಲಭ್ಯಗಳಿಗಾಗಿ ಖರೀದಿ ಮಾಡಿದ ವಸ್ತುಗಳ ಹಣ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಹಣ ಪಾವತಿಸಲು ಅಧ್ಯಕ್ಷರ ಸಹಿ ಅಗತ್ಯ. ಆದರೆ, ಅಧ್ಯಕ್ಷರ ಗೈರುಹಾಜರಿಯಿಂದ ಬಹಳ ತೊಂದರೆಯಾಗುತ್ತಿದೆ ಎನ್ನುವುದು ಸದಸ್ಯರ ದೂರು.

‘ಅಧ್ಯಕ್ಷರು ಬಂದು ಆಡಳಿತ ನಡೆಸಲಿ. ಇಲ್ಲವಾದರೆ ರಾಜೀನಾಮೆ ನೀಡುವ ಮೂಲಕ ಗ್ರಾಮಾಡಳಿತ ಸುಧಾರಣೆಗೆ ಸಹಕರಿಸುವಂತೆ ಮನವಿ ಮಾಡಿ ಎಂದು ಕರೆತರಲು ಮನೆಗೆ ಹೋಗಿದ್ದೆವು. ಆದರೆ, ಅಧ್ಯಕ್ಷರು ಮನೆಯಲ್ಲಿ ಇರಲಿಲ್ಲ. ದೂರವಾಣಿಗೂ ಸಿಗಲಿಲ್ಲ’ ಎಂದು ಸದಸ್ಯರಾದ
ಪಿ.ಚಂದ್ರಶೇಖರ, ಎ.ಪ್ರಸಾದ, ಗಿರೀಶ, ಕೆ.ಆರ್. ಗಂಗಾಧರ, ಎ.ಕೆ. ಸುರೇಶ, ಎನ್‌. ಸುನೀತಾ , ಗೀತಾ, ವರಲಕ್ಷ್ಮಿ, ರೂಪಾ, ಯಶೋದಮ್ಮ, ಬಿ. ಜಯರಾಂ, ರೂಪಾ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT