7

ರೈಲಿಗೆ ತಲೆಕೊಟ್ಟು ಯುವತಿ ಆತ್ಮಹತ್ಯೆಗೆ ಯತ್ನ

Published:
Updated:
ರೈಲಿಗೆ ತಲೆಕೊಟ್ಟು ಯುವತಿ ಆತ್ಮಹತ್ಯೆಗೆ ಯತ್ನ

ಕಲಬುರ್ಗಿ: ರೈಲಿಗೆ ತಲೆಕೊಟ್ಟು ಇಪ್ಪತ್ತು ವರ್ಷದ ಯುವತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಕೋರಂಟಿ ಹನುಮಾನ ದೇವಸ್ಥಾನ ಸಮೀಪ ನಡೆದಿದೆ.

ಗುರುವಾರ ಬೆಳಿಗ್ಗೆಕ್ಕೆ ಚೆನ್ನೈ-ದಾದರ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಯುವತಿಯ ಬಲಗಾಲು ತುಂಡಾಗಿದೆ. ರೈಲು ಹಳಿ ಮೇಲೆ ಯುವತಿಯನ್ನು ಕಂಡು ಚಾಲಕ ರೈಲು ನಿಲ್ಲಿಸಿದ್ದಾರೆ.

ಚಾಲಕನ ಸಮಯ ಪ್ರಜ್ಞೆಯಿಂದ ಯುವತಿ ಬದುಕುಳಿದಿದ್ದಾರೆ. ಅದಾಗ್ಯೂ ಯುವತಿಯ ಬಲಗಾಲು ತುಂಡಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.

ಗಂಭೀರ ಗಾಯಗೊಂಡ ಯುವತಿಯವನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಯುವತಿ ಯಾರು? ಆತ್ಮಹತ್ಯೆ ಯತ್ನಕ್ಕೆ ಕಾರಣವೇನು? ಎಂಬುದು ತಿಳಿದಿಲ್ಲ. ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry