ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ ಸೆಳೆದ ಮಲ್ಲಕಂಬ ಪ್ರದರ್ಶನ

ರೋಮಾಂಚನ ಮೂಡಿಸಿದ ಜೈ ಕರ್ನಾಟಕ ಮಲ್ಲಕಂಬ ಅಕಾಡೆಮಿ ಸಾಹಸ
Last Updated 21 ಡಿಸೆಂಬರ್ 2017, 9:24 IST
ಅಕ್ಷರ ಗಾತ್ರ

ಯಲ್ಲಾಪುರ: ತಾಲ್ಲೂಕಿನ ಮಂಚೀಕೇರಿಯ ಸಮಾಜ ಮಂದಿರದಲ್ಲಿ  ಯಡಳ್ಳಿಯ ರಾಮನಾಥೇಶ್ವರ ದೇವಾಲಯದ ಸಹಾಯರ್ಥ ಕುಂದಗೋಳದ ಜೈ ಕರ್ನಾಟಕ ಮಲ್ಲಕಂಬ ಅಕಾಡೆಮಿ ಕಲಾವಿದರು ಪ್ರದರ್ಶಿಸಿದ ಮಲ್ಲಕಂಬದ ಸಾಹಸ ಮತ್ತು ಹಗ್ಗದ ಪ್ರದರ್ಶನ ಪ್ರೇಕ್ಷಕರಿಗೆ ರೋಮಾಂಚನ ಉಂಟುಮಾಡಿತು.

ದೇಸಿ ಜಿಮ್ನಾಸ್ಟಿಕ್ ಎಂದೇ ಕರೆಯಲಾಗಿರುವ ಹಗ್ಗದ ಮೇಲಿನ ಪ್ರದರ್ಶನ ನೆರೆದವರ ಕಣ್ಸೆಳೆಯಿತು ಬಾಲಕಿಯರ ದೀಪ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಂತರ ಹಗ್ಗದ ಮೇಲಿನ ಕಸರತ್ತು, ಯೋಗಾಸನದ ವಿವಿಧ ಭಂಗಿ ಸೇರಿದಂತೆ ಹಲವು ವೈವಿಧ್ಯಮಯ ಕಲೆಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.

ವೇದಿಕೆಯ ಮೇಲಿನ ನುಣುಪಾದ ಕಂಬದಲ್ಲಿ ಸಾಹಸ ಪ್ರದರ್ಶನವನ್ನು ಸಂಪೂರ್ಣ ತೆರೆದಿಟ್ಟರು. ಸ್ಥಳೀಯ ರಂಗಸಮೂಹದ ಅಧ್ಯಕ್ಷ ಆರ್.ಎನ್.ಧುಂಡಿ ಚಾಲನೆ ನೀಡಿದರು.

ಸಂಘಟನಾ ಪ್ರಮುಖರಾದ ಎಂ.ಕೆ.ಭಟ್ಟ ಯಡಳ್ಳಿ, ಮಂಜುನಾಥ ಗೌಡ, ಶಾಂತಾರಾಮ ಹೆಗಡೆ, ದೇವಸ್ಥಾನದ ಟ್ರಸ್ಟಿ ರಾಮಕೃಷ್ಣ ಭಟ್ಟ, ಗಣೇಶ ಹೆಗಡೆ ಹಾಸಣಗಿ, ಗ್ರಾಮ ಮೊಕ್ತೇಸರ, ಗಣಪತಿ ಹೆಗಡೆ ಉಪಸ್ಥಿತರಿದ್ದರು.

ಜೈ ಕರ್ನಾಟಕ ಮಲ್ಲಕಂಬ ಅಕಾಡೆಮಿ ಅಧ್ಯಕ್ಷ ಸಿದ್ಧಾರೂಢ ಹೂಗಾರ ಮಾತನಾಡಿ, ದೇಸಿ ಕಲೆ ಪರಿಚಯ ಮತ್ತು ಸಂರಕ್ಷಣೆ ನಮ್ಮ ಗುರಿಯಾಗಬೇಕು ಎಂದು ವಿವರಿಸಿದರು.

ಪಲ್ಲವಿ ಹಡಪದ್, ಅಂಕಿತಾ ಹೂಗಾರ, ಐಶ್ವರ್ಯ ಘೋರ್ಪಡೆ, ಗಂಗಮ್ಮ ಕರಿಮಲ್ಲಣ್ಣವರ, ಮಾರುತಿ ಮರಿಯಪ್ಪನವರ್, ಹಸನ್ ಕುಂದಗೋಳ, ಚೈತ್ರಾ, ಭಾಗ್ಯಶ್ರೀ, ಮಲ್ಲಿಕಾರ್ಜುನ ಶಿರೂರ, ಬಸವಂತರಾವ್ ಘೋರ್ಪಡೆ, ಶಂಕರಪ್ಪ ಸುಣಗಾರ, ಕಿರಣಕುಮಾರ ಸುಳ್ಳದ್, ಧಾವಲ್ ಕುಂದಗೋಳ, ಮುತ್ತು ಕರಿಭೀಮಪ್ಪನವರ್, ಲಕ್ಷ್ಮಣ ಸೊನ್ನದ್ ಅಪರೂಪದ ಕಲೆಯನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT