7

ಸಕಾಲಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸಲು ಸಚಿವರಿಗೆ ಮನವಿ

Published:
Updated:

ಭಾಲ್ಕಿ: ಪಟ್ಟಣದಲ್ಲಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಪದಾಧಿಕಾರಿಗಳು ತಾಲ್ಲೂಕಿನ ಖಟಕ ಚಿಂಚೋಳಿ, ಎಣಕೂರ, ಸಿಕಿಂದ್ರಾಬಾದ್‌ ವಾಡಿ, ಕೊರುರ ಸೇರಿದಂತೆ 14 ಗ್ರಾಮಗಳಿಗೆ ಸಕಾಲಕ್ಕೆ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಎಬಿವಿಪಿ ಕಲಬುರಗಿ ವಿಭಾಗೀಯ ಸಂಚಾಲಕ ರೇವಣಸಿದ್ದ ಜಾಡರ್‌, ಪ್ರತಿನಿತ್ಯ ಬೆಳಿಗ್ಗೆ, ಸಂಜೆ ಬಸ್‌ಗಳು ಸರಿಯಾದ ಸಮಯಕ್ಕೆ ಬಾರದೆ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ದೊಡ್ಡ ಹೊಡೆತ ಬೀಳುತ್ತಿದೆ. ಕೆಲ ಬಸ್‌ ಚಾಲಕರು ತಮ್ಮಿಷ್ಟದಂತೆ ಮಾರ್ಗ ಬದಲಾವಣೆ ಮಾಡಿ ಬಸ್‌ ಓಡಿಸುತ್ತಿರುವುದರಿಂದ ಸಾರ್ವಜನಿಕರಿಗೂ ಅನನುಕೂಲ ಆಗುತ್ತಿದೆ. ಈ ಸಂಬಂಧ ಅನೇಕ ಸಲ ಪ್ರತಿಭಟನೆ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಚಿವರು ತಕ್ಷಣ ಸಮಸ್ಯೆ ಪರಿಹರಿಸಬೇಕು ಎಂದು ವಿಭಾಗೀಯ ನಿಯಂತ್ರಣ ಅಧಿಕಾರಿ ಚಂದ್ರಕಾಂತ ಫುಲೆ ಅವರಿಗೆ ಸೂಚಿಸಿದರು.

ಕೆಎಸ್‌ಆರ್‌ಟಿಸಿ ನಿರ್ದೇಶಕ ವಿಲಾಸ ಮೋರೆ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಖಾ ವಿಲಾಸ ಪಾಟೀಲ, ಎಬಿವಿಪಿ ಜಿಲ್ಲಾ ಸಂಚಾಲಕ ಈಶ್ವರ ರುಮ್ಮಾ, ವಿಶಾಲ ಘಾಳೆ, ಪ್ರದೀಪ್‌ ಗುಪ್ತಾ, ಸಿದ್ದಾರ್ಥ ಪ್ಯಾಗೆ, ಸಂಗಮೇಶ ಮಂಗನೆ, ಸಾಗರ ಕಲಾ, ಕಿರಣ ಕಾಂಬಳೆ, ಶಿವಾನಂದ, ಸಚಿನ್‌ ರಾಠೋಡ, ಪ್ರಶಾಂತ ದೆವಕತೆ, ಅಜಯ, ಅಂಬ್ರೇಶ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry