ಕ್ರೀಡೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಿಸುತ್ತದೆ: ಕೆ.ರಂಜನ್

6

ಕ್ರೀಡೆ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಿಸುತ್ತದೆ: ಕೆ.ರಂಜನ್

Published:
Updated:

ಉಡುಪಿ: ಕ್ರೀಡೆ ಪರಸ್ಪರ ಸಮಾನತೆ,  ಗೌರವ, ಸ್ನೇಹಭಾವ, ಸ್ಪರ್ಧಾ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತದೆ ಎಂದು ಉಡುಪಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಕೆ.ರಂಜನ್ ಹೇಳಿದರು. ವಳಕಾಡಿನ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದ ನಂತರ ಕ್ರೀಡೆಯಿಂದ ದೂರ ಉಳಿಯುವ ಮನೋಭಾವ ಇತ್ತೀಚೆಗೆ ಹೆಚ್ಚಾಗುತ್ತಿದೆ. ವೃತ್ತಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಆರೋಗ್ಯಕ್ಕೆ ಅಗತ್ಯವಿರುವ ಕ್ರೀಡೆ, ಯೋಗ, ವ್ಯಾಯಾಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ನಗರಸಭಾ ಸದಸ್ಯೆ ಗೀತಾರವಿ ಶೇಟ್, ಲಯನ್ಸ್ ಕ್ಲಬ್‌ ದಿವಾಕರ ಶೆಟ್ಟಿ, ಲಯನೆಸ್ ಶೋಭಾ ಶೆಟ್ಟಿ,ಇಂದ್ರಾಳಿ ಲಯನೆಸ್ ಕ್ಲಬ್ ಶ್ವೇತಾ ಜಯಕರ ಶೆಟ್ಟಿ ಇದ್ದರು. ಪ್ರಾಂಶುಪಾಲೆ ಬಿ. ನಿರ್ಮಲ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುಭಾಶ್ಚಂದ್ರ ಹೆಗ್ಡೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry