7

ಕಸ ವಿಲೇವಾರಿಯಾಗುತ್ತಿಲ್ಲ: ದೂರು

Published:
Updated:
ಕಸ ವಿಲೇವಾರಿಯಾಗುತ್ತಿಲ್ಲ: ದೂರು

ವಿಜಯಪುರ: ಸಮರ್ಪಕವಾಗಿ ಕಸವಿಲೇವಾರಿ ಮಾಡದೇ ಇರುವ ಪರಿಣಾಮವಾಗಿ ಎಲ್ಲೆಂದರಲ್ಲಿ ಕಸದ ರಾಶಿಗಳು ಕಾಣಿಸುತ್ತಿದ್ದು, ಕಸದ ರಾಶಿಗಳಿಗೆ ಬೆಂಕಿ ಹಚ್ಚಲಾಗುತ್ತಿದ್ದ ಇದರಿಂದ ಮಾಲಿನ್ಯ ಉಂಟಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಇಲ್ಲಿನ 23 ವಾರ್ಡುಗಳಲ್ಲಿ ಉತ್ಪತ್ತಿಯಾಗುತ್ತಿರುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ನಿರ್ಧಿಷ್ಟವಾದ ಸ್ಥಳಾವಕಾಶವಿಲ್ಲದ ಕಾರಣ ಎಲ್ಲೆಂದರಲ್ಲಿ ಹಾಕಿರುವ ಕಸದ ರಾಶಿಗಳಿಗೆ ನಾಗರಿಕರು ಬೆಂಕಿ ಹಚ್ಚುತ್ತಿದ್ದಾರೆ. ಸುತ್ತಮುತ್ತಲಿನ ಮನೆಗಳಲ್ಲಿ ನೆಮ್ಮದಿಯಿಂದ ವಾಸಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಪ್ಲಾಸ್ಟಿಕ್ ಕವರುಗಳಿಗೆ ಬೆಂಕಿಹಾಕುತ್ತಿರುವುದರಿಂದ ದುರ್ವಾಸನೆಯ ಜೊತೆಗೆ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಬಹಳಷ್ಟು ಕಡೆಗಳಲ್ಲಿ ಕಸದ ರಾಶಿಗಳಿಂದ ದುರ್ನಾತ ಬೀರುತ್ತಿದೆ. ಕೂಡಲೇ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಪುರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಸ್ಥಳೀಯರಾದ ಸುರೇಶ್, ಅಶೋಕ್ ಕುಮಾರ್, ಪ್ರತಾಪ್ ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry