ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ–ಬೆಂಗಳೂರು ಬಸ್‌ ಸೇವೆಗೆ ಚಾಲನೆ

Last Updated 22 ಡಿಸೆಂಬರ್ 2017, 6:32 IST
ಅಕ್ಷರ ಗಾತ್ರ

ಭಾಲ್ಕಿ: ಇಲ್ಲಿನ ಬಸ್ ನಿಲ್ದಾಣದಿಂದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಆರಂಭಿಸಿರುವ ಭಾಲ್ಕಿ–ಬೆಂಗಳೂರು ಮಾರ್ಗದ ಬಸ್‌ ಸೇವೆಗೆ ಬುಧವಾರ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು.

ಈ ಭಾಗದ ಬಹುದಿನಗಳ ಬೇಡಿಕೆಯಂತೆ ಸಾರಿಗೆ ಸಂಸ್ಥೆಯು ಆರು ಹೊಸ ಬಸ್‌ಗಳ ಸಂಚಾರವನ್ನು ಆರಂಭಿಸಿದೆ. ನಾಲ್ಕು ಹವಾ ನಿಯಂತ್ರಿತ ಹಾಗೂ ಎರಡು ಹವಾ ನಿಯಂತ್ರಿತವಲ್ಲದ (ನಾನ್ ಎ.ಸಿ) ಆರಾಮದಾಯಕ ಬಸ್‌ಗಳು ಪ್ರತಿದಿನ ಸಂಜೆ ಭಾಲ್ಕಿಯಿಂದ ಹೊರಟು ಮರುದಿನ ಬೆಂಗಳೂರು ತಲುಪಲಿವೆ.

‘ಸುರಕ್ಷತೆ ಪ್ರಯಾಣಕ್ಕಾಗಿ ಹೆಚ್ಚೆಚ್ಚು ಪ್ರಯಾಣಿಕರು ಸರ್ಕಾರಿ ಬಸ್‌ಗಳನ್ನು ಬಳಸಿಕೊಳ್ಳುವ ಮೂಲಕ ಸಂಚರಿಸಿ ಸಾರಿಗೆ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು’ ಎಂದು ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದರು.

ಸಾರಿಗೆ ಸಂಸ್ಥೆ ನಿರ್ದೇಶಕ ವಿಲಾಸ ಮೋರೆ, ಪುರಸಭೆ ಅಧ್ಯಕ್ಷ ವಿಶಾಲ ಪೂರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಖಾ ಪಾಟೀಲ, ಕಾಂಗ್ರೆಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಹಣಮಂತರಾವ ಚವ್ಹಾಣ, ಪುರಸಭೆ ಸದಸ್ಯರಾದ ಮಹಾದೇವ ಸ್ವಾಮಿ, ಪ್ರಕಾಶ ಭಾವಿಕಟ್ಟಿ, ಪ್ರಮುಖರಾದ ಅನಿಲ್‌ ಲೋಖಂಡೆ, ವಿಲಾಸ ಪಾಟೀಲ, ಸಾರಿಗೆ ಸಂಸ್ಥೆ ಅಧಿಕಾರಿಗಳಾದ ಕೊಟ್ರಪ್ಪ, ಸಿ.ಎಸ್.ಫುಲೇಕರ್, ಧೂಳಪ್ಪ. ಕೆ, ಅಶೋಕ ಪಾಟೀಲ, ಓಂಕಾರ ಧೂಳೆ, ಪ್ರಭುಲಿಂಗ ಸ್ವಾಮಿ, ರಾಜಕುಮಾರ ಟಿ.ಸಿ, ಶಿವಕುಮಾರ ಗಾಯಕವಾಡ, ಶಾಂತಕುಮಾರ,ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT