7

ಗುಂಡಾಲ್‌ ಜಲಾಶಯದಿಂದ ನೀರು ಬಿಡಲು ಮನವಿ

Published:
Updated:

ಕೊಳ್ಳೇಗಾಲ: ತಾಲ್ಲೂಕಿನ ಗುಂಡಾಲ್ ಜಲಾಶಯದಿಂದ ಮಧುವನಹಳ್ಳಿ ಗ್ರಾಮದ ಕೆರೆಕಟ್ಟೆಗಳಿಗೆ ಹಾಗೂ ಸುತ್ತಲ ಜಮೀನುಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಮಧುವನಹಳ್ಳಿ ಗ್ರಾಮದ ರೈತರು ಶಾಸಕ ಆರ್. ನರೇಂದ್ರ ಅವರಿಗೆ ಮನವಿ ಸಲ್ಲಿಸಿದರು.

ಬಳಿಕ ನರೇಂದ್ರ ಮಾತನಾಡಿ, ಜನವರಿ ಅಂತ್ಯದಲ್ಲಿ ಎಂಜಿನಿಯರ್‌ಗಳ ಜೊತೆ ಚರ್ಚಿಸಿ ಫೆಬ್ರುವರಿ ಮೊದಲ ವಾರದಲ್ಲಿ ನೀರು ಬಿಡಲಾಗುವುದು ಎಂದು ಭರವಸೆ ನೀಡಿದರು. ಜಿ.ಪಂ. ಮಾಜಿ ಸದಸ್ಯ ಶಿವಕುಮಾರ್ ಮಾತನಾಡಿ, ಮಧುವನಹಳ್ಳಿ ಗ್ರಾಮದಲ್ಲಿ ಹಿಂಗಾರು ಹಾಗೂ ಮುಂಗಾರು ಬೆಳೆಯ ಸಮಯದಲ್ಲಿ ನಿರೀಕ್ಷಿತ ಮಳೆ ಇಲ್ಲದೆ ರೈತರು ಫಸಲು ಬೆಳೆಯಲು ಸಾಧ್ಯವಾಗಲಿಲ್ಲ. ಈ ವರ್ಷ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾಗಿದ್ದು, ಬೆಳೆ ಬೆಳೆಯಲು ಗುಂಡಾಲ್ ಜಲಾಶಯದಿಂದ ನೀರು ಬಿಡುವಂತೆ ಮನವಿ ಮಾಡಿದರು.

ಮಧುವನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಮಹದೇವ ಸ್ವಾಮಿ, ಮುಖಂಡರಾದ ಮಹದೇವಶೆಟ್ಟಿ, ಮಹೇಶ್, ಸಿದ್ದೇಶ್, ಮಹದೇವಸ್ವಾಮಿ, ರವೀಂದ್ರನಾಥ್, ನಂದೀಶ್, ಗುರುನಂಜಶೆಟ್ಟಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry