7

ಎರಡು ಗುಂಪುಗಳಿಂದ ಪ್ರತ್ಯೇಕ ಸ್ವಾಗತ

Published:
Updated:
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಹಿರೀಸಾವೆ: ತಾಲ್ಲೂಕು ಬಿಜೆಪಿ ಕಾರ್ಯಕರ್ತರ ನಡುವೆ ಇರುವ ಅಸಮಾಧಾನ ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ಅವರ ಮುಂದೆ ಗುರುವಾರ ಬಹಿರಂಗವಾಯಿತು. ಬಿಜೆಪಿ ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಗುರುವಾರ ಸೋಮಣ್ಣ ಜಿಲ್ಲೆಗೆ ಬಂದಿದ್ದರು. ತಾಲ್ಲೂಕು ಘಟಕದ ಅಧ್ಯಕ್ಷ ಶಿವನಂಜೇಗೌಡರ ನೇತೃತ್ವದಲ್ಲಿ ಕೆಲ ಕಾರ್ಯಕರ್ತರು ಹಾಸನ ಜಿಲ್ಲಾ ಗಡಿಭಾಗವಾದ ಕಿರೀಸಾವೆಯಲ್ಲಿ ಸ್ವಾಗತಿಸಿದರೆ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಬೂಕದ ಶಿವಣ್ಣ ನೇತೃತ್ವದಲ್ಲಿ ಕೆಲ ಕಾರ್ಯಕರ್ತರು ಹಿರೀಸಾವೆ ಶ್ರೀಕಂಠಯ್ಯ ವೃತ್ತದಲ್ಲಿ ಪ್ರತ್ಯೇಕವಾಗಿ ಸ್ವಾಗತಿಸಿದರು.

‘ತಾಲ್ಲೂಕು ಘಟಕದ ಅಧ್ಯಕ್ಷರು ಪಕ್ಷದ ಮೂಲ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ’ ಎಂದು ಕಾರ್ಯಕರ್ತ ಕಬ್ಬಳಿಯ ವೆಂಕಟೇಶ್‌ ಆರೋಪಿಸಿದರು. ಜತೆಗೆ ಪಕ್ಷದ ಕಚೇರಿಯನ್ನು ಈಗ ಇರುವ ಸ್ಥಳದಿಂದ ಬೇರೆಗಡೆಗೆ ಸ್ಥಳಾಂತರಿಸಬೇಕು ಎಂದು ವಿ. ಸೋಮಣ್ಣ ಅವರ ಬಳಿ ಮನವಿ ಮಾಡಿದರು.

ಜ. 7 ಅಥವಾ 8ರಂದು ತಾಲ್ಲೂಕು ಕಾರ್ಯಕರ್ತರ ಸಭೆ ನಡೆಸಲಾಗುವುದು. ಆ ಸಮಯದಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಸೋಮಣ್ಣ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಮುಖಂಡ ಪರಮ ಗಂಗಾಧರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry