7

ಆಯ್ಕೆಯ ಹಗ್ಗ–ಜಗ್ಗಾಟ

Published:
Updated:

ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಕುಲಪತಿಗಳ ಆಯ್ಕೆ ಪ್ರಕ್ರಿಯೆ ಒಂದು ವರ್ಷದಿಂದಲೂ ನಡೆಯುತ್ತಿದೆ. ಕುಲಪತಿಗಳ ಆಯ್ಕೆಗೆ ಮತ್ತೊಮ್ಮೆ ಹೊಸ ಹೆಸರು ಸೂಚಿಸಲು ರಾಜ್ಯಪಾಲರು ಸೂಚನೆ ನೀಡಿದ್ದಾರೆ ಎಂದು ಈಚೆಗೆ ಮಾಧ್ಯಮಗಳು ವರದಿ ಮಾಡಿವೆ. ಅದನ್ನು ಓದಿದ ಬಳಿಕ, ಈ ಪ್ರಕ್ರಿಯೆ ಈ ಕಾಲಕ್ಕೆ ಮುಗಿಯುವಂತೆ ಕಾಣಿಸುತ್ತಿಲ್ಲ ಎಂದೆನಿಸುತ್ತದೆ.

ಯಾಕೆ ಹೀಗೆ? ಶೋಧನಾ ಸಮಿತಿಯಿಂದ ಶಿಫಾರಸುಗೊಂಡ ಹೆಸರುಗಳು, ಅದಕ್ಕೂ ಮೊದಲು ಸರ್ಕಾರ ಶಿಫಾರಸು ಮಾಡಿದ ಹೆಸರುಗಳನ್ನು ಸಹ ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಹೀಗಿರುವಾಗ ರಾಜ್ಯಪಾಲರೇ ಮುತುವರ್ಜಿ ವಹಿಸಿ, ಉನ್ನತ ಶಿಕ್ಷಣ ಇಲಾಖೆ, ಶೋಧನಾ ಸಮಿತಿ ಸದಸ್ಯರು ಹಾಗೂ ತಮಗೆ ವಿಶ್ವಾಸವಿರುವ ಕೆಲವರನ್ನು ರಾಜಭವನಕ್ಕೆ ಕರಿಯಿಸಿಕೊಂಡು ಚರ್ಚಿಸಿ, ಒಂದು ಹೆಸರನ್ನು ಅಂತಿಮಗೊಳಿಸುವುದು ಕಷ್ಟವೇ? ಈ ಪ್ರಕ್ರಿಯೆಗೆ ವರ್ಷಗಟ್ಟಲೆ ಸಮಯ ಬೇಕೇ?

ಈ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ, ಎರಡೂ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸಿ, ಆ ಮೂಲಕ ಶೈಕ್ಷಣಿಕ ಪ್ರಗತಿಗೆ ರಾಜ್ಯಪಾಲರು ಕಾರಣೀಭೂತರಾಗುತ್ತಾರೆ ಎಂದು ಆಶಿಸಬಹುದೇ?

ಸಿ.ಎಂ. ಕಾಳೇಗೌಡ,

ಪಾಂಡವಪುರ, ಮಂಡ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry