3

ಅಕ್ಷರದ ಜತೆ ಕೃಷಿ ಬದುಕು ಕಲಿಸಿ

Published:
Updated:
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಮಾಗಡಿ: ಮಕ್ಕಳಿಗೆ ಅಕ್ಷರ ಕಲಿಕೆಯ ಜೊತೆಗೆ ವಿನಾಶದತ್ತ ಸಾಗಿರುವ ಕೃಷಿ ಬದುಕನ್ನು ಪರಿಚಯಿಸುವ ಅಗತ್ಯವಿದೆ ಎಂದು ಶಿಕ್ಷಣ ತಜ್ಞ ಎಚ್‌.ಎಚ್‌.ಗಂಗರಾಜು ತಿಳಿಸಿದರು. ಪಟ್ಟಣದ ಹೊಸಪೇಟೆಯ ಮಾರುತಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಶುಕ್ರವಾರ ನಡೆದ ಮಾರುಕಟ್ಟೆ ಮೇಳದಲ್ಲಿ ಕ್ಯಾಲೆಂ ಡರ್‌ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರೈತರು ಬೆಳೆದ ದವಸ ಧಾನ್ಯ, ತರಕಾರಿ ಹಣ್ಣುಗಳನ್ನು ಮಾರುಕಟ್ಟೆಗೆ ತಂದವರಿಂದ ಖರೀದಿಸಿ ಮಾರಾಟ ಮಾಡಿ ರೈತನಿಗೆ ಪೂರಕವಾಗಿ ದುಡಿಯುವ ತರಕಾರಿ ಮಾರಾಟದ ಬದುಕು ಸಹ ಗೌರವಯುತವಾದುದು ಎಂಬುದನ್ನು ಮಕ್ಕಳಿಗೆ ಬಾಲ್ಯದಿಂದಲೇ ಕಲಿಸುವ ಅಗತ್ಯವಿದೆ.

ಮಾರುಕಟ್ಟೆಯ ರೀತಿ ನೀತಿಗಳನ್ನು ಮಕ್ಕಳಿಗೆ ಕಲಿಸಿಕೊಡುವ ಉದ್ದೇಶದಿಂದ ಇಲ್ಲಿ ನಡೆಸಿರುವ ಮಾರುಕಟ್ಟೆ ಮೇಳ ಹೊಸದೊಂದು ಕಲ್ಪನೆಯಾಗಿದೆ. ಮಕ್ಕಳಿಂದ ತಾಜಾ ತರಕಾರಿ ಖರೀದಿಸಿದ್ದು ತುಂಬ ಸಂತಸ ತಂದಿದೆ ಎಂದರು.

ಶಾಲಾ ಪ್ರಾಂಶುಪಾಲೆ ಕೆ.ಟಿ.ವರಲಕ್ಷ್ಮೀ ಮಾತನಾಡಿ ಎಲ್ಲಾ ಕುಲಕಸುಬುಗಳು ಕಣ್ಮರೆಯಾದರೆ, ಪೂರ್ವಜರ ಜನಪದ ಸಂಸ್ಕೃತಿಯ ಕಲ್ಪನೆ ಮಕ್ಕಳಿಗೆ ತಲುಪುವುದಿಲ್ಲ ಎಂಬ ಉದ್ದೇಶದಿಂದ ಮಾರುಕಟ್ಟೆ ಮೇಳ ನಡೆಸಲಾಗುತ್ತಿದೆ ಎಂದು ಹೇಳಿದರು.

ಖ್ಯಶಿಕ್ಷಕ ಯು, ನರಸಿಂಹ ಮೂರ್ತಿ ಮಾತನಾಡಿದರು. ತಿಗಳ ಸಮುದಾಯದ ನರಸಿಂಹ ಮೂರ್ತಿ, ಶಾಲೆಯ ಶಿಕ್ಷಕರು, ಸಿಬ್ಬಂದಿ, ಪೋಷಕರು, ಮಕ್ಕಳು, ಐಟಿಐ ಕಾಲೇಜಿನ ವಿದ್ಯಾರ್ಥಿಗಳು ತರಕಾರಿ ಖರೀದಿಸಿದರು. ಮಾರುಕಟ್ಟೆ ಮೇಳದಲ್ಲಿ ತಾಜಾ ತರಕಾರಿ, ಹೂವು, ಹಣ್ಣು ಹಂಪಲು ಮಾರಾಟ ಮಾಡಿದ ಮಕ್ಕಳು ಉತ್ಸಾಹದಿಂದ ತರಕಾರಿ ವ್ಯಾಪಾರದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry