4

‘ಸಂಪೂರ್ಣ ಸುಕನ್ಯಾ ಸಮೃದ್ಧಿ’ ಗ್ರಾಮವಾಗಿ ಹುಯಿಗೆರೆ ಘೋಷಣೆ

Published:
Updated:

ಹುಯಿಗೆರೆ (ಬಾಳೆಹೊನ್ನೂರು): ಇಲ್ಲಿನ ಹುಯಿಗೆರೆ ಗ್ರಾಮವನ್ನು ‘ಸಂಪೂರ್ಣ ಸುಕನ್ಯಾ ಸಮೃದ್ಧಿ’ ಗ್ರಾಮವನ್ನಾಗಿ ಕರ್ನಾಟಕ ಪೋಸ್ಟ್ ಮಾಸ್ಟರ್ ಆಫ್ ಜನರಲ್ ರಾಜೇಂದ್ರ ಕುಮಾರ್ ಘೋಷಿಸಿದರು.

ಇಲ್ಲಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸುಕನ್ಯಾ ಸಮೃದ್ಧಿ ಕಾರ್ಯಕ್ರಮ ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿದ ಯೋಜನೆಯಾಗಿದೆ. ಹದಿನಾಲ್ಕು ವರ್ಷಗಳ ಕಾಲ ಹೆಣ್ಣುಮಕ್ಕಳ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ನಿಗದಿತ ಠೇವಣಿ ಮಾಡಿದಲ್ಲಿ ಅವರ 18ನೇ ವರ್ಷಕ್ಕೆ ಅದು ಸಂಪೂರ್ಣವಾಗಿ ಬಡ್ಡಿಸಮೇತ ವಾಪಸ್ಸು ಸಿಗಲಿದೆ. ಈ ಹಣದ ಮೇಲೆ ವಿದ್ಯಾಭ್ಯಾಸಕ್ಕೆ ಸಾಲ ಪಡೆಯಬಹುದಾಗಿದೆ ಅಥವಾ ಮದುವೆಯಂತಹ ಉದ್ದೇಶಕ್ಕೂ ಬಳಸಬಹುದಾಗಿದೆ’ ಎಂದರು.

ಚಿಕ್ಕಮಗಳೂರಿನ ಅಂಚೆ ಅಧೀಕ್ಷಕ ರಾಘವೇಂದ್ರ ಮಾತನಾಡಿ, ‘ಸುಕನ್ಯಾ ಕೊಡುಗೆ’ ಯೋಜನೆ ಅಡಿಯಲ್ಲಿ ಬಡ ಕುಟುಂಬದ ಐವರು ಹೆಣ್ಣು ಮಕ್ಕಳ ಖಾತೆಗಳಿಗೆ ದಾನಿಗಳು ತಲಾ ₹ 1 ಸಾವಿರ ತುಂಬಿದ್ದಾರೆ. ‘ಸುಕನ್ಯಾ ಆಸರೆ’ ಯೋಜನೆ ಅಡಿಯಲ್ಲಿ ಸಂಘ ಸಂಸ್ಥೆಗಳು ಬಡ ಕುಟುಂಬದ ಹೆಣ್ಣುಮಕ್ಕಳ ಠೇವಣಿಯನ್ನು ತುಂಬಲು ಅವಕಾಶದೆ. ಹುಯಿಗೆರೆ ಅಂಚೆ ಕಚೇರಿಯಲ್ಲಿ ಸುಮಾರು 100ಕ್ಕೂ ಅಧಿಕ ಜನರು ಈ ಯೋಜನೆಯಲ್ಲಿ ಹಣ ತೊಡಗಿಸುವ ಮೂಲಕ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ತೋರಿಸಿದ್ದಾರೆ. ಎಲ್ಲ ವರ್ಗದ ಜನರೂ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಂಚೆ ಕಚೇರಿಯಲ್ಲಿರುವ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯುವ ಮೂಲಕ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ನಿವೃತ್ತ ಅಂಚೆಪಾಲಕ ಮಂಜುನಾಥ್ ಭಟ್ ಅವರನ್ನು ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸನ್ಮಾನಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಚ್.ಮಂಜುನಾಥ್, ಎಚ್.ಎಸ್.ರವಿ, ಕೃಷ್ಣಪ್ಪಶೆಟ್ಟಿ, ಮೀನಾಕ್ಷಿ ಶಿವಪ್ಪ, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಚ್.ಶಂಕರ್, ಎಚ್.ಎಸ್.ಕೃಷ್ಣೇಗೌಡ, ಎಚ್.ಎಲ್.ಸುಬ್ಬೇಗೌಡ, ಎಚ್.ಎಸ್.ಮಂಜಪ್ಪಗೌಡ, ಅಭಿವೃದ್ಧಿ ಯೂತ್ ಕ್ಲಬ್ ಅಧ್ಯಕ್ಷ ಎಚ್.ಪಿ.ಸವಿನ್, ರಚನ್ ಹುಯಿಗೆರೆ, ಎಚ್.ಜಿ.ಧರ್ಮೇಗೌಡ, ಎನ್.ರಮೇಶ್, ಚಂದ್ರಾನಾಯಕ್, ಲಕ್ಷ್ಮೀನಾರಾಯಣಭಟ್, ಪ್ರಸನ್ನ, ಅಂಚೆ ಕಚೇರಿ ಸಿಬ್ಬಂದಿ ಶೇಖರ್, ಚೇತನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry