3

ನೀರಿನ ಟ್ಯಾಂಕ್‌ ಕಾಮಗಾರಿ ಪೂರ್ಣ

Published:
Updated:

ಶ್ರವಣಬೆಳಗೊಳ : ಬಾಹುಬಲಿ ಮಹಾ ಮಸ್ತಕಾಭಿಷೇಕದ ಅಂಗವಾಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಮೇಲ್ವಚಾರಣೆಯ ಕಾಮಗಾರಿಗಳು ಅಂತಿಮ ಹಂತಕ್ಕೆ ತಲುಪಿವೆ.

ಪಟ್ಟಣ ವ್ಯಾಪ್ತಿಯ ನೀರು ಪೂರೈಕೆಗಾಗಿ ವಿಂಧ್ಯಗಿರಿ ಬೆಟ್ಟದ ದಕ್ಷಿಣ ಭಾಗದ ನಾಗಯ್ಯನಕೊಪ್ಪಲು ಬಳಿ ನಿರ್ಮಿಸುತ್ತಿರುವ ₹ 15 ಕೋಟಿ ವೆಚ್ಚ 5 ಲಕ್ಷ ಲೀಟರ್‌ ಸಾಮರ್ಥ್ಯದ ಜಲ ಸಂಗ್ರಹಾಗಾರದ ಕಾಮಗಾರಿ ಪೂರ್ಣಗೊಂಡಿದೆ.

ಹಾಗೆಯೇ ಪಟ್ಟಣದ ಪಂಪ್‌ಹೌಸ್‌ ಬಳಿ ನಿರ್ಮಾಣವಾಗುತ್ತಿರುವ 2.5 ಲಕ್ಷ ಲೀಟರ್‌ ಸಾಮರ್ಥ್ಯದ ಶುದ್ಧ ನೀರು ಜಲ ಸಂಗ್ರಹಗಾರ ಮತ್ತು ಪಂಪ್‌ಹೌಸ್‌ ನಿರ್ಮಾಣದ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಸಹಾಯಕ ಎಂಜಿನಿಯರ್‌ ಜಗದೀಶ್‌ ಅವರು ಈಓ ಸಂದರ್ಭದಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry