7

ಸಮಕಾಲೀನ ಸಂಗತಿಗಳತ್ತ ಹೊರಳುನೋಟ

Published:
Updated:
ಸಮಕಾಲೀನ ಸಂಗತಿಗಳತ್ತ ಹೊರಳುನೋಟ

ಬೆಳೆ ನಷ್ಟದಿಂದಾಗಿ ಸಾಲ ತೀರಿಸಲಾಗದೆ ರೈತರು ಸರಣಿ ಆತ್ಮಹತ್ಯೆಗಳಿಗೆ ಶರಣಾದ ಸಂದರ್ಭದಲ್ಲಿ ಹುಟ್ಟಿದ್ದೇ ‘ರೈತ ಕಲ್ಲಪ್ಪನ ಆತ್ಮಹತ್ಯೆ‘ ಕಾದಂಬರಿ.

ಗುಜರಾತಿನ ಭುಜ್, ಕಚ್ ಸೇರಿದಂತೆ ಹಲವು ಭಾಗಗಳಲ್ಲಿ ಭೂಕಂಪ ಸಂಭವಿಸಿದಾಗ ಉಂಟಾದ ಸಾವು ನೋವುಗಳಿಗೆ ಮಿಡಿತವಾಗಿ ಮೊಳಕೆಯೊಡೆದಿದ್ದು ‘ಭೂಕಂಪ’ ಕಾದಂಬರಿ. ರಂಗಭೂಮಿ ತನ್ನ ಮೂಲ ಉದ್ದೇಶ ಬಿಟ್ಟು ಬೇರೆಡೆ ಸಾಗುತ್ತಿದೆ ಎನಿಸಿದಾಗ ಬರೆಯಿಸಿಕೊಂಡಿದ್ದು ‘ಇದು ಹಿಂಗ್ಯಾಕ ಆತು’ ಎಂಬ ತಿಳಿ ಹಾಸ್ಯದ ಲೇಖನವುಳ್ಳ ಗಂಭೀರ ನಾಟಕ.

ಹೀಗೆ ಆಯಾ ಕಾಲಮಾನಕ್ಕೆ ತಕ್ಕಂತೆ ಹಲವಾರು ಬೆಳವಣಿಗೆಗಳಿಗೆ ತಮ್ಮ ಲೇಖನಿಯನ್ನು ಬಳಸಿಕೊಂಡವರು ಡಾ. ಮಲ್ಲಿಕಾರ್ಜುನ ಪಾಟೀಲರು.

ಬಹು ಮಾಧ್ಯಮಗಳಲ್ಲಿ ಆಸಕ್ತಿ ಹೊಂದಿರುವ ಮಲ್ಲಿಕಾರ್ಜುನ ಪಾಟೀಲರು ತಮ್ಮ ಕೆಲ ಕಾದಂಬರಿಗಳನ್ನು ನಾಟಕಗಳಾಗಿಯೂ, ಸಾಲದೆಂಬಂತೆ ಬೆಳ್ಳಿ ತೆರೆಯಲ್ಲಿಯೂ ತಂದವರು. ಉತ್ತರ ಕರ್ನಾಟಕದ ಗ್ರಾಮೀಣ ಸೊಗಡಿನ ಅವರ ಕಾದಂಬರಿ ರೈತ ಕಲ್ಲಪ್ಪನ ಆತ್ಮಹತ್ಯೆಯು ‘ನೇಗಿಲ ಯೋಗಿ’ ಹೆಸರಿನಲ್ಲಿ ಸಿನಿಮಾ ಆಗಿತ್ತು.

‘ನೋಡ್ಕೊಂಡು ಹೋಗ್ರಿ‘ (ರೈತ ಕಲ್ಲಪ್ಪನ ಆತ್ಮಹತ್ಯೆ ಕಾದಂಬರಿಯ ರೂಪಾಂತರ), ‘ಭೂಕಂಪ‘, ‘ಇದು ಹಿಂಗ್ಯಾಕ ಆತು‘, ‘ನಮ್ಮದು ನಮಗs ಇರಲಿ ನಿಮ್ಮದು ನಿಮಗs ಇರ್ಲಿ‘, ‘ತಿರುಮಂತ್ರ‘, ‘ಪ್ರಳಯದಾಚೆಗೆ...‘, ‘ಮಂಡೋದರಿ ಕಲ್ಯಾಣಂ‘, ‘ಮಿಯಾಬೀವಿ ರಾಜೀ ಹೊತೋ?‘, ‘ಉದ್ರಿ ಮಾತs ಇಲ್ಲ...‘ ‘ಇಣುಕು– ತುಣುಕು‘ ಎಂಬ ನಾಟಕಗಳನ್ನು ಒಂದೇ ಕೃತಿಯಲ್ಲಿ ನೀಡಲಾಗಿದೆ. ಪಾತ್ರ ಪೋಷಣೆಯ ದೃಷ್ಟಿಯಿಂದಲೂ ಪಾಟೀಲರ ನಾಟಕಗಳು ರಂಗಕಲಾವಿದರಿಗೆ ಅಚ್ಚುಮೆಚ್ಚು. ಧಾರವಾಡದಲ್ಲಿ ಹಲವು ನಾಟಕಗಳು ಪ್ರಯೋಗ ಕಂಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry