ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಪಂಚ: ನಿಮಗೆಷ್ಟು ಪರಿಚಿತ?

Last Updated 23 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

1. ನಮ್ಮ ಪ್ರಪಂಚದ ಭೂಪಟದ ಒಂದು ಭಾಗ ಚಿತ್ರ-1ರಲ್ಲಿದೆ. ಈ ಕೆಳಗೆ ಹೆಸರಿಸಿರುವ ಭೂ ಭಾಗಗಳಲ್ಲಿ ಯಾವುವು ಪೂರ್ಣವಾಗಿ ಅಥವಾ ಭಾಗಶಃ ಈ ಭೂಪಟ ಭಾಗದಲ್ಲಿ ಗೋಚರಿಸುತ್ತಿವೆ, ಗುರುತಿಸಬಲ್ಲಿರಾ?

ಅ. ಅಂಟಾರ್ಕ್ಟಿಕಾ
ಬ. ಗ್ರೀನ್ ಲ್ಯಾಂಡ್
ಕ. ಪೆಸಿಫಿಕ್ ಸಾಗರ
ಡ. ಹಿಂದೂ ಮಹಾ-ಸಾಗರ
ಇ. ಉತ್ತರ ಅಮೆರಿಕ
ಈ. ದಕ್ಷಿಣ ಅಮೆರಿಕ
ಉ. ನ್ಯೂಜಿಲ್ಯಾಂಡ್
ಟ. ಅಟ್ಲಾಂಟಿಕ್ ಮಹಾಸಾಗರ

2. ಉತ್ತರ ಅಮೆರಿಕದ ಅತ್ಯಂತ ಪ್ರಸಿದ್ಧ ನದಿಗಳಲ್ಲೊಂದಾದ ‘ಕಾಲೆರೇಡೋ’ ಮಿಲಿಯಾಂತರ ವರ್ಷಗಳ ಅವಧಿಯಲ್ಲಿ ನೆಲದಲ್ಲಿ ಕೊರೆದಿರುವ ಭಾರೀ ಉದ್ದದ, ಆಳದ, ಬೃಹದಾಕಾರದ, ವಿಶ್ವ ಪ್ರಸಿದ್ಧ ಕೊರಕಲಿನ ಒಂದು ದೃಶ್ಯ ಚಿತ್ರ-2 ರಲ್ಲಿದೆ. ಈ ಕೊರಕಲಿನ ಹೆಸರೇನು ಗೊತ್ತೇ?

ಅ. ಕಿಂಗ್ಸ್ ಕ್ಯಾನ್ಯನ್
ಬ. ದಿ ಗ್ರ್ಯಾಂಡ್ ಕ್ಯಾನ್ಯನ್
ಕ. ಕೋಲ್ಕಾ ಕ್ಯಾನ್ಯನ್
ಡ. ಕಾಪರ್ ಕ್ಯಾನ್ಯನ್

3. ದಕ್ಷಿಣ ಅಮೆರಿಕದ ‘ಪಾಂಪಾಸ್’ ಹುಲ್ಲು ಬಯಲುಗಳಲ್ಲಿ ಕಾಣಬಹುದಾದ ‘ರಿಯಾ’ ಹಕ್ಕಿ ಗುಂಪೊಂದು ಚಿತ್ರ-3ರಲ್ಲಿದೆ. ರಿಯಾದಂತೆಯೇ ಭಾರೀ ಗಾತ್ರದ, ಹಾರಲಾರದ ಹಕ್ಕಿಗಳು ಈ ಪಟ್ಟಿಯಲ್ಲಿ ಯಾವುವು?

ಅ. ಕಕಾಪೋ
ಬ. ಕ್ಯಾಸೋವರೀ
ಕ. ಕಿವಿ
ಡ. ಕಾಗು
ಇ. ಎಮು
ಈ. ಆಸ್ಟ್ರಿಚ್

4. ಜಗತ್ತಿನ ಸುಪ್ರಸಿದ್ಧ ಗಗನ ಚುಂಬಿ ಕಟ್ಟಡಗಳಲ್ಲಿ ಎರಡು ಕ್ರಮವಾಗಿ ಚಿತ್ರ-5 ಮತ್ತು ಚಿತ್ರ-6ರಲ್ಲಿವೆ. ಈ ಅದ್ಭುತ ನಿರ್ಮಾಣಗಳು ಯಾವುವು - ಕೆಳಗಿನ ಪಟ್ಟಿಯಲ್ಲಿ ಗುರುತಿಸಿ:

ಅ. ಶಾಂಘಾಯ್ ಟವರ್
ಬ. ಪೆಟ್ರೊನಾಸ್ ಟವರ್ಸ್
ಕ. ಬುರ್ಜ್ ಖಲೀಫಾ
ಡ. ತೈಪೈ 101
ಇ. ಒನ್ ವರ್ಲ್ಡ್ ಟ್ರೇಡ್ ಸೆಂಟರ್
ಈ. ಲೋಟ್ಟೆ ವರ್ಲ್ಡ್ ಟವರ್

5. ಹಗಲಿನ ಬೇರೆ ಬೇರೆ ಸಮಯಗಳಲ್ಲಿ ಬೇರೆ ಬೇರೆ ವರ್ಣಗಳನ್ನು ತಾಳುವ ಬೃಹದಾಕಾರದ ವಿಶ್ವಪ್ರಸಿದ್ಧ ನೈಸರ್ಗಿಕ ‘ಏಕ ಶಿಲಾ ಶಿಲ್ಪ’ದ ಎರಡು ದೃಶ್ಯಗಳು ಚಿತ್ರ-7 ಮತ್ತು ಚಿತ್ರ-8ರಲ್ಲಿವೆ. ಆಸ್ಟ್ರೇಲಿಯಾದಲ್ಲಿರುವ ಈ ಅದ್ಭುತ ನೈಸರ್ಗಿಕ ನಿರ್ಮಿತಿಯ ಹೆಸರೇನು?

ಅ. ರಾಕ್ ಆಫ್ ಜಿಬ್ರಾಲ್ಟರ್
ಬ. ಶಿಪ್ ರಾಕ್
ಕ. ಡೆವಿಲ್ಸ್ ಟವರ್
ಡ. ಊಲ್ರಾ
ಇ. ಲಯನ್ ರಾಕ್

6. ಹಿಮಾವೃತ ಶಿಖರದ ಪರ್ವತವೊಂದರ ದೃಶ್ಯ ಚಿತ್ರ-9ರಲ್ಲಿದೆ. ಈ ಕೆಳಗೆ ಹೆಸರಿಸಲಾಗಿರುವ ಪ್ರಸಿದ್ಧ ಪರ್ವತಗಳು ಯಾವ ಯಾವ ಭೂಖಂಡಗಳಲ್ಲಿವೆ?

ಅ. ರೂವೆಂಜ಼ೋರಿ
ಬ. ಆಲ್ಪ್ಸ್
ಕ. ದಿ ಗ್ರೇಟ್ ಡಿವೈಡಿಂಗ್ ರೇಂಜ್
ಡ. ಹಿಮಾಲಯ
ಇ. ಸಿಯೆರಾ ನಿವೇಡಾ
ಈ. ಆಂಡಿಸ್

7. ಆಫ್ರಿಕ ಖಂಡಕ್ಕೆ ಸೀಮಿತವಾದ ವಾಸ್ತವ್ಯ ಹೊಂದಿರುವ ಪ್ರಸಿದ್ಧ ಪ್ರಾಣಿ ‘ಜಿರಾಫ್’ ಜೋಡಿಯೊಂದು ಚಿತ್ರ-10 ರಲ್ಲಿದೆ. ಆಫ್ರಿಕದ ಕೆಲವು ರಾಷ್ಟ್ರಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. ಈ ಪೈಕಿ ಯಾವ ಯಾವ ರಾಷ್ಟ್ರಗಳಲ್ಲಿ ಜಿರಾಫ್‌ಗಳು ನೈಸರ್ಗಿಕವಾಗಿ ನೆಲೆಸಿವೆ?

ಅ. ಈಜಿಪ್ಟ್
ಬ. ಇಥಿಯೋಪಿಯಾ
ಕ. ತಾಂಜಾನಿಯಾ
ಡ. ಲಿಬ್ಯಾ
ಇ. ಕೆನ್ಯಾ
ಈ. ನೈಜರ್
ಉ. ಮಡಗಾಸ್ಕರ್

8. ಪುರಾತನವಾದ, ಜಗತ್ಪ್ರಸಿದ್ಧವೂ ಆದ ‘ಫೇರೋ’ ಅರಸರ ಗೋರಿ ಪಿರಮಿಡ್ ಚಿತ್ರ-10ರಲ್ಲಿದೆ. ಈಜಿಪ್ಟ್ ದೇಶದ ಈ ಮಹದದ್ಭುತದ ವಿಖ್ಯಾತ ನಿರ್ಮಿತಿಗಳು ಅಲ್ಲಿನ ಈಗಿನ ಯಾವ ನಗರದಲ್ಲಿವೆ?

ಅ. ಅಲೆಕ್ಸಾಂಡ್ರಿಯಾ
ಬ. ಗೀಜ಼ಾ
ಕ. ಕೈರೋ
ಡ. ಲಕ್ಸರ್
ಇ. ಆಸ್ವಾನ್

9. ಅಂಟಾರ್ಕ್ಟಿಕಾ ಭೂಖಂಡದಲ್ಲಿ ‘ಸಂತಾನ ಸಂತೆ’ ಸೇರಿರುವ ಪೆಂಗ್ವಿನ್ ಹಕ್ಕಿ ಸಮೂಹವೊಂದರ ದೃಶ್ಯ ಚಿತ್ರ-11ರಲ್ಲಿದೆ. ಅಂಟಾರ್ಕ್ಟಿಕಾ ಅಲ್ಲದೆ ಇಲ್ಲಿ ಹೆಸರಿಸಿರುವ ಇನ್ನಾವ ಇತರ ಪ್ರದೇಶಗಳಲ್ಲಿ ಪೆಂಗ್ವಿನ್‌ಗಳು ನೆಲೆ ಹೊಂದಿವೆ?

ಅ. ಶ್ರೀಲಂಕಾ
ಬ. ದಕ್ಷಿಣ ಆಫ್ರಿಕ
ಕ. ಹವಾಯ್ ದ್ವೀಪಗಳು
ಡ. ಗ್ಯಾಲಪಗಾಸ್ ದ್ವೀಪಗಳು
ಇ. ರಷ್ಯಾ
ಈ. ನ್ಯೂಜ಼ಿಲ್ಯಾಂಡ್
ಉ. ಕೆನಡಾ

10. ಆಫ್ರಿಕ ಖಂಡದ ಜ಼ಾಂಬಿಯಾ ಮತ್ತು ಜಿಂಬಾಬ್ವೆ ರಾಷ್ಟ್ರಗಳ ಗಡಿಯಲ್ಲಿರುವ ವಿಶ್ವ ವಿಖ್ಯಾತ ‘ವಿಕ್ಟೋರಿಯಾ ಜಲಪಾತ’ದ ಒಂದು ದೃಶ್ಯ ಚಿತ್ರ-12ರಲ್ಲಿದೆ. ಹಾಗೆಯೇ ಈ ಕೆಳಗೆ ಹೆಸರಿಸಿರುವ ಎರಡೆರಡು ರಾಷ್ಟ್ರಗಳ ಗಡಿಯಲ್ಲಿನ ಜಲಪಾತಗಳು ಯಾವುವು ಗೊತ್ತೇ?

ಅ. ದಕ್ಷಿಣ ಅಮೆರಿಕದ ಅರ್ಜಂಟೈನಾ ಮತ್ತು ಬ್ರೆಜ಼ಿಲ್
ಬ. ಉತ್ತರ ಅಮೆರಿಕದ ಯುಎಸ್ಎ ಮತ್ತು ಕೆನಡಾ

11. ಕಡಲ ತಡಿಯ ಒಂದು ಮಹಾ ನಗರದ ದೃಶ್ಯ ಚಿತ್ರ-13ರಲ್ಲಿದೆ. ಇಲ್ಲಿ ಪಟ್ಟಿ ಮಾಡಿರುವ ಮಹಾ ನಗರಗಳಲ್ಲಿ ಯಾವುವು ಸಾಗರ ತೀರದಲ್ಲಿವೆ ಗುರುತಿಸಬಲ್ಲಿರಾ?

ಅ. ಸಿಂಗಪುರ
ಬ. ಲಂಡನ್
ಕ. ನ್ಯೂಯಾರ್ಕ್
ಡ. ದುಬೈ
ಇ. ದೆಹಲಿ
ಈ. ಹಾಂಗ್ ಕಾಂಗ್
ಉ. ಟೋಕಿಯೋ
ಟ. ಸಿಯೋಲ್
ಣ. ಬಾರ್ಸಿಲೋನ
ಸ. ಫ್ರಾಂಕ್‌ಫರ್ಟ್

12. ಹೊಂದಿಸಿ ಕೊಡಿ:

1. ನಾಗರಹೊಳೆ→ಅ. ಐತಿಹಾಸಿಕ ಶಿಲ್ಪಕಲಾ ಸ್ಥಳ

2. ಕೂನೂರ್‌→ಬ. ಯಾತ್ರಾ ಕ್ಷೇತ್ರ

3. ಗಂಡಕೀ→ಕ. ಅಭಯಾರಣ್ಯ

4. ಬಾದಾಮಿ→ಡ. ಸರೋವರ

5. ಮರೀನಾ→ಇ. ಗಿರಿಧಾಮ

6. ಚಿಲ್ಕಾ→→ಈ. ಕಣಿವೆ ಪ್ರದೇಶ

7. ಕುಲ್ಲು→→ಉ. ನದಿ

8. ಪ್ರಯಾಗ→ಟ. ಕಡಲ ತೀರ

ಉತ್ತರಗಳು :

1.→ಬ, ಕ, ಇ, ಈ ಮತ್ತು ಟ

2.→ಬ - ದಿ ಗ್ರಾಂಡ್ ಕ್ಯಾನ್ಯನ್

3.→ಬ, ಇ ಮತ್ತು ಈ

4.→ಚಿತ್ರ 4 - ತೈಪೈ101 ; ಚಿತ್ರ 5 - ಪೆಟ್ರೋನಾಸ್ ಟವರ್ಸ್

5.→ಡ - ಊಲ್ರಾ

6. →ಅ- ಆಫ್ರಿಕ ; ಬ - ಯೂರೋಪ್ ; ಕ - ಆಸ್ಟ್ರೇಲಿಯಾ ; ಡ - ಏಷಿಯಾ ; ಇ - ಉತ್ತರ ಅಮೆರಿಕ ; ಈ - ದಕ್ಷಿಣ ಅಮೆರಿಕ

7.→ಕ, ಇ ಮತ್ತು ಈ

8.→ಬ - ಗೀಜ಼ಾ

9.→ಬ, ಡ ಮತ್ತು ಈ

10. ಅ - ಇಗುವಾಜು ಜಲಪಾತ ; ಬ - ನಯಾಗರಾ ಜಲಪಾತ

11. ಬ, ಇ, ಟ ಮತ್ತು ಸ ಬಿಟ್ಟು ಇನ್ನೆಲ್ಲ

12. 1-ಕ ; 2-ಇ ; 3-ಉ ; 4-ಅ ; 5-ಟ ; 6-ಡ ; 7-ಈ ; 8-ಬ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT