ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ವೀರಶೈವ–ಲಿಂಗಾಯತ ಸಮನ್ವಯ ಸಮಾವೇಶಕ್ಕೆ ಚಾಲನೆ

Last Updated 24 ಡಿಸೆಂಬರ್ 2017, 7:38 IST
ಅಕ್ಷರ ಗಾತ್ರ

ಗದಗ: ಇಲ್ಲಿನ ವಿದ್ಯಾದಾನ ಸಮಿತಿ ಮೈದಾನದಲ್ಲಿ ವೀರಶೈವ–ಲಿಂಗಾಯತ ಜನಜಾಗೃತಿ ಸಮಾವೇಶ ಸಮಾವೇಶಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಪಂಚಪೀಠಗಳ ಶಿವಾಚಾರ್ಯರು ಭಾಗವಹಿಸಿದ್ದಾರೆ.

ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಸೇರಿ ವಿವಿಧ ಭಾಗಗಳಿಂದ ನೂರಾರು ಮಠಾಧೀಶರು, ಹೆಚ್ಚಿನ ಭಕ್ತರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

ಸಮೀಪದ ಆಂಗ್ಲೊ ಉರ್ದು ಶಾಲೆಯ ಮೈದಾನದಲ್ಲಿ ಮಧ್ಯಾಹ್ನ ಊಟದ  ವ್ಯವಸ್ಥೆ ಮಾಡಲಾಗಿದೆ. ಮೈದಾನದಲ್ಲಿ ಪ್ರತಿ 100 ಮೀಟರ್‌ ಅಂತರದಲ್ಲಿ ಒಂದರಂತೆ ನಾಲ್ಕು ದೊಡ್ಡ ಎಲ್‍ಇಡಿ ಪರದೆ ಹಾಗೂ ಧ್ವನಿರ್ವಧಕ ಅಳವಡಿಸಲಾಗಿದೆ.

‘ಗುರು– ವಿರಕ್ತರೊಂದಿಗೆ, ಸನಾತನ ಧರ್ಮವಾದ ವೀರಶೈವ– ಲಿಂಗಾಯತ ಛಿದ್ರವಾಗದಂತೆ ರಕ್ಷಿಸಲು ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸುವುದು, ವೀರಶೈವ ಲಿಂಗಾಯತ ಧರ್ಮದ ಎಲ್ಲ ಒಳಪಂಗಡದವರಿಗೆ  ಪ್ರವರ್ಗ 2ಎ ಅಡಿ ಶೇ 12ರಿಂದ 15ರಷ್ಟು ಮೀಸಲಾತಿ ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ಹೇರುವ ನಿರ್ಣಯವನ್ನೂ ಈ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT