3

‘ಬೆಳಗಾವಿ ಜಿಲ್ಲೆ ವಿಭಜನೆ ಬೇಡ: ಸಿಎಂಗೆ ಮನವಿ’

Published:
Updated:
‘ಬೆಳಗಾವಿ ಜಿಲ್ಲೆ ವಿಭಜನೆ ಬೇಡ: ಸಿಎಂಗೆ ಮನವಿ’

ಬೈಲಹೊಂಗಲ: ‘ಅಖಂಡ ಬೆಳಗಾವಿ ಜಿಲ್ಲೆ ವಿಭಜನೆ ಈಗ ರಾಜ್ಯ ಸರ್ಕಾರದ ಮುಂದೆ ಪ್ರಸ್ತಾವನೆ ಇಲ್ಲ. ಆಡಳಿತಾತ್ಮಕ ದೃಷ್ಠಿಯಿಂದ ವಿಭಜನೆ ಅನಿವಾರ್ಯವಾದಲ್ಲಿ ಜಿಲ್ಲೆಯ ಮಠಾಧೀಶರು, ಎಲ್ಲ ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತಿರ್ಮಾಣ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಬೆಳಗಾವಿ ಜಿಲ್ಲಾ ವಿಭಜನಾ ವಿರೋಧಿ ಹೋರಾಟ ಸಮಿತಿ ಸದಸ್ಯರು ಶಾಸಕ ಡಾ.ವಿಶ್ವನಾಥ ಪಾಟೀಲ, ಕಾಂಗ್ರೆಸ್‌ ಮುಖಂಡ ಮಹಾಂತೇಶ ಕೌಜಲಗಿ ನೇತೃತ್ವದಲ್ಲಿ ಬೆಳಗಾವಿ ಪ್ರವಾಸಿ ಮಂದಿರಲ್ಲಿ ಭೇಟಿ ನೀಡಿ, ಮನವಿ ಸಲ್ಲಿಸಿದ ಮುಖಂಡರನ್ನು ಉದ್ಧೇಶಿಸಿ ಅವರು ಮಾತನಾಡಿದರು. ‘ಬೆಳಗಾವಿ ಗಡಿ ಪ್ರದೇಶವಾಗಿದ್ದರಿಂದ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವದಿಲ್ಲ. ಜನತೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು’ ಎಂದರು.

ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ, ಮುನವಳ್ಳಿ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸರ್ಕಾರ ಜಿಲ್ಲಾ ವಿಭಜನೆ ಮಾಡುತ್ತಿರುವ ವಿಷಯ ಜನರ ನಿತ್ಯದ ಚರ್ಚೆಯ ವಿಷಯವಾಗಿದೆ. ಜಿಲ್ಲಾ ವಿಭಜನೆಯಿಂದ ಗಡಿ ಪ್ರದೇಶದಲ್ಲಿ ಭಾಷೆಯ ವಿಷಯದ ಕುರಿತು ಶಾಂತಿ ಕದಡುವ ವಾತಾವರಣ ನಿರ್ಮಾಣವಾಗಲಿದೆ. ಜಿಲ್ಲೆ ವಿಭಜನೆ ಬೇಡ ಎಂದು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಜಿಲ್ಲೆ ವಿಭಜಿಸುವದಾದರೆ ಮೊದಲಿನಿಂದಲೂ ಉಪವಿಭಾಗವಾಗಿ ಐದು ತಾಲ್ಲೂಕುಗಳಿಗೆ ಕೇಂದ್ರ ಸ್ಥಾನದಲ್ಲಿರುವ, ಎಲ್ಲ ಇಲಾಖೆಗಳನ್ನು ಹೊಂದಿರುವ ಬೈಲಹೊಂಗಲವನ್ನು ಜಿಲ್ಲೆಯಾಗಿ ಮಾಡಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಶಿವರಂಜನ ಬೋಳಣ್ಣವರ, ಸಿ.ಕೆ. ಮೆಕ್ಕೇದ, ಕಿರಣ ಸಾಧುನವರ, ಮಹಾಂತೇಶ ತುರಮರಿ, ಶಂಕರ ಮಾಡಲಗಿ, ಬಸವರಾಜ ಜನ್ಮಟ್ಟಿ, ಬಸವರಾಜ ಕೌಜಲಗಿ, ಗುರು ಮೆಟಗುಡ್ಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry