ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಣದ ಗೆಲುವು

Last Updated 24 ಡಿಸೆಂಬರ್ 2017, 20:52 IST
ಅಕ್ಷರ ಗಾತ್ರ

ಗುಜರಾತ್‌ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶದಿಂದ ಬಿಜೆಪಿ ಬೀಗಬೇಕಿಲ್ಲ. ಇದು ಮುಂದಿನ ಲೋಕಸಾಭಾ ಚುನಾವಣಾ ಫಲಿತಾಂಶಕ್ಕೆ ದಿಕ್ಸೂಚಿಯೂ ಅಲ್ಲ. ಹೇಗೆಂದರೆ ಈಗಲೂ ಬಿಜೆಪಿ ಗಳಿಸಿದ ಮತಗಳ ಪ್ರಮಾಣ ಶೇ 49.1 ಮಾತ್ರ! ಇಷ್ಟನ್ನಾದರೂ ಗಳಿಸಲು ಸ್ವತಃ ಮೋದಿಯವರೇ ಹರಸಾಹಸ ಮಾಡಬೇಕಾಯ್ತು. ಪ್ರಧಾನಮಂತ್ರಿಯೇ ಹೀಗೆ ವಿಧಾನಸಭಾ ಚುನಾವಣೆಗೆ ಬೆವರು ಹರಿಸುವುದು ಆಯಾ ರಾಜ್ಯದ ನಾಯಕರ ಗೆಲುವಲ್ಲ ಎಂಬುದನ್ನು ಒತ್ತಿ ಹೇಳುತ್ತಿದೆ.

ಗುಜರಾತ್‌ನಲ್ಲಿ ಮೋದಿಯವರೇ ಗೆದ್ದಂತಾಗಿದೆ. ಅದೂ ಅವರ ಮೋಡಿ ಮಾಡುವ ಭಾಷಣ ಶೈಲಿಯಿಂದ ಸಾಧ್ಯವಾಯಿತು ಎಂಬುದನ್ನು ಗಮನಿಸಬೇಕು. ಜೊತೆಗೆ ರಾಹುಲ್‌ ಗಾಂಧಿಯ ರಾಜಕೀಯ ಅನನುಭವವೂ ಸಹಕರಿಸಿದೆ! ಇದು ಏನೇ ಇರಲಿ, ‘ಮತದಾರ ಪ್ರಜ್ಞಾವಂತ’ ಎಂಬುದನ್ನು ಫಲಿತಾಂಶ ಹೇಳುತ್ತಿದೆಯಾದ್ದರಿಂದ ಮೋದಿಯವರ ಭಾಷಣದ ಮೋಡಿ ಇನ್ನೆಷ್ಟು ದಿನ ನಡೆಯುತ್ತದೆಯೋ ಹೇಳಲಾಗದು. ಹೀಗಾಗಿ ಇದು ಭಾಷಣದ ಗೆಲುವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT