ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ಼್

Last Updated 24 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

1. ಕೊಡಗಿನ ದೊರೆಯನ್ನು ಕುರಿತಂತೆ ಮಾಸ್ತಿಯವರು ಬರೆದ ಕಾದಂಬರಿ.

ಅ) ಚಿಕ್ಕವೀರ ರಾಜೇಂದ್ರ ಆ) ಚನ್ನಬಸವ ನಾಯಕ ಇ) ಸ್ವಾಮಿ ಅಪರಂಪಾರ ಈ) ಹುಲಿಯ ಹಾಲಿನ ಮೇವು

2) ‘ಕೂಲ್ ಕ್ಯಾಪ್ಟನ್’ ಎಂಬ ಪುಸ್ತಕವು ಇವರನ್ನು ಕುರಿತದ್ದಾಗಿದೆ.
ಅ) ಸುನಿಲ್ ಗವಾಸ್ಕರ್ ಆ) ಎಂ.ಎಸ್. ಧೋನಿ
ಇ) ವಿರಾಟ್ ಕೊಹ್ಲಿ ಈ) ಕಪಿಲ್ ದೇವ್

3) ಇದು ಶಬ್ದದ ತೀವ್ರತೆಯನ್ನು ಅಳೆಯುವ ಉಪಕರಣ.
ಅ) ಅಮ್ಮೀಟರ್ ಆ) ಮಾನೋಮೀಟರ್ ಇ) ಆಡಿಯೋ ಮೀಟರ್ ಈ) ಸೋನೋ ಮೀಟರ್

4) ಇದು ಅತ್ಯಂತ ಹಗುರವಾದ ಮೂಲವಸ್ತು.
ಅ) ಇಂಗಾಲ ಆ) ಜಲಜನಕ ಇ) ಸಾರಜನಕ ಈ) ಆಮ್ಲಜನಕ

5) ಯುರೇನಿಯಂ ಗಣಿಗಳು ಈ ಕೆಳಗಿನ ಯಾವ ಸ್ಥಳದಲ್ಲಿದೆ?
ಅ) ಕೆ.ಜಿ.ಎಫ್. ಆ) ಕಲಬುರಗಿ ಇ) ಚಾದುಗುಡ ಈ) ಖೇತು

6) ‘ರೋಲ್ ಇನ್’ ಎಂಬುದು ಈ ಆಟದಲ್ಲಿ ಬಳಸುವ ಪಾರಿಭಾಷಿಕ ಶಬ್ದ.
ಅ) ಹಾಕಿ ಆ) ಕ್ರಿಕೆಟ್ ಇ) ಟೆನಿಸ್ ಈ) ಗಾಲ್ಫ್

7) ‘ಮಜ್ಲಿಸ್ ವಿ-ಶೂರಾ’ ಎಂಬುದು ಈ ದೇಶದ ಪಾರ್ಲಿಮೆಂಟಿನ ಹೆಸರು.
ಅ) ಇರಾಕ್ ಆ) ಇರಾನ್ ಇ) ಬಾಂಗ್ಲಾ ಈ) ಪಾಕಿಸ್ತಾನ

8) ಭಾರತದ ಪ್ರಧಾನಮಂತ್ರಿಗಳು ಈ ಆಯೋಗದ ಅಧ್ಯಕ್ಷರಾಗಿರುತ್ತಾರೆ.
ಅ) ಹಣಕಾಸು ಆಯೋಗ ಆ) ಯೋಜನಾ ಆಯೋಗ ಇ) ಅಲ್ಪಸಂಖ್ಯಾತ ಆಯೋಗ
ಈ) ಲೋಕಸೇವಾ ಆಯೋಗ

9) ಇದು ಸೂರ‍್ಯನ ಅತಿ ನೇರಳೆ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ.
ಅ) ಆಮ್ಲಜನಕ ಆ) ಓಜೋನ್ ಇ) ಸಾರಜನಕ ಈ) ರಂಜಕ

10) ಈತ ಚೀನಾದೇಶದಿಂದ ಭಾರತಕ್ಕೆ ಬಂದ ಯಾತ್ರಿಕ.
ಅ) ಇಬ್ನ್ ಬಬೂತಾ ಆ) ಫಾಹಿಯಾನ್ ಇ) ಅಬ್ದುಲ್ ರಜಾಕ್ ಈ) ಡೊಮಿಂಗೋ ಪಯಸ್

ಹಿಂದಿನ ಸಂಚಿಕೆಯ ಸರಿ ಉತ್ತರ:
1 ಇ) ಉರಯ್ಯೂರು
2 ಅ) ಕಬ್ಬಿಣ ಮತ್ತು ಕ್ರೋಮಿಯಂ
3 ಆ) ಕಾರವಾರ
4 ಈ) ಹನ್ನೆರಡು
5 ಇ) ಭಾರತ
6 ಅ) ಅನಿಬೆಸೆಂಟ್
7 ಅ) ಜಾನಪದ ಅಕಾಡಮಿ
8 ಇ) ತಪತಿ
9 ಆ) ಜಾಂಡಿಸ್-ಕಿಡ್ನಿ
10 ಈ) ಹೈನುಗಾರಿಕೆ
(ಈ ಸಂಚಿಕೆಯ ಉತ್ತರ ಮುಂದಿನ ಸಂಚಿಕೆಯಲ್ಲಿ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT