7

ಇದು ಕೇಕ್‌ ಕಾಲ

Published:
Updated:
ಇದು ಕೇಕ್‌ ಕಾಲ

ತಾಜಾ ಹಣ್ಣಿನ (ಬಾಳೆಹಣ್ಣು) ಕೇಕ್

ಅಗತ್ಯ ಸಾಮಗ್ರಿ: 225 ಗ್ರಾಂ ಮೈದಾ, 225 ಗ್ರಾಂ ಸಕ್ಕರೆ ಪುಡಿ, 155 ಗ್ರಾಂ ವನಸ್ಪತಿ, 4 ಟೀ ಚಮಚ ಬೇಕಿಂಗ್ ಸೋಡಾ, 2 ಮೊಟ್ಟೆ, ಒಂದು ಚಿಟಿಕೆ ಉಪ್ಪು, 55 ಗ್ರಾಂ ಗೋಡಂಬಿ, 1 ಬಾಳೆಹಣ್ಣು, ಬಾಳೆಹಣ್ಣಿನ ಎಸೆನ್ಸ್‌ ಕೆಲವು ಹನಿ, 4 ಟೀ ಚಮಚ ಬೇಕಿಂಗ್ ಪೌಡರ್.

ವಿಧಾನ: ವನಸ್ಪತಿ ಮತ್ತು ಸಕ್ಕರೆಯನ್ನು ಸೋಡಾ ಜೊತೆಗೆ ಸಾಟಿ (ಕ್ರೀಮಿಂಗ್) ಮಾಡಿ. ಮೊಟ್ಟೆಯನ್ನು ಎಸೆನ್ಸ್‌ ಜೊತೆ ಚೆನ್ನಾಗಿ ಕಲಸಿ. ಬಾಳೆಹಣ್ಣನ್ನು ಸಣ್ಣಸಣ್ಣ ಚೂರುಗಳಾಗಿ ಕತ್ತರಿಸಿ ಮೈದಾ ಜೊತೆ ಡಮಿಶ್ರಣ ಮಾಡಿ. ಇದನ್ನು ಸಾಟಿ ಜೊತೆ ಸೇರಿಸಿ. ಗೋಡಂಬಿ ಚೂರನ್ನು ಮಿಶ್ರಣ ಮಾಡಿ. ಮಿಶ್ರಣವನ್ನು ಬೇಯಿಸುವ ಕೇಕ್‌ ತಟ್ಟೆಯಲ್ಲಿ ಹಾಕಿ. 160ರಿಂದ 170 ಡಿಗ್ರಿ ಸೆಲ್ಸಿಯಸ್ ಶಾಖದಲ್ಲಿ 20ರಿಂದ 25 ನಿಮಿಷಗಳ ಕಾಲ ಬೇಯಿಸಿ.

ಚಾಕೊಲೇಟ್ ಬ್ರೌನೀಸ್ ಕೇಕ್

ಅಗತ್ಯ ಸಾಮಗ್ರಿ: 100 ಗ್ರಾಂ ಮೈದಾ, 100 ಗ್ರಾಂ ಸಕ್ಕರೆ ಪುಡಿ, ವನಸ್ಪತಿ 90 ಗ್ರಾಂ, 2 ಮೊಟ್ಟೆ, 30 ಮಿ.ಲೀ. ನೀರು, ವೆನಿಲ್ಲಾ ಎಸೆನ್ಸ್ ಕೆಲವು ಹನಿ, ಸೋಡ 4 ಚಮಚ, ಬೇಕಿಂಗ್ ಪೌಡರ್ 4 ಚಮಚ, ಗೋಡಂಬಿ 15 ಗ್ರಾಂ, 20 ಗ್ರಾಂ ಹಾಲಿನ ಪುಡಿ, ಒಂದು ಚಿಟಿಕೆ ಉಪ್ಪು, 15 ಗ್ರಾಂ ಕೊಕೊ ಪೌಡರ್.

ವಿಧಾನ: ಸಕ್ಕರೆ ಮತ್ತು ತುಪ್ಪವನ್ನು ಸೋಡಾ ಜೊತೆ ಸೇರಿಸಿ ಸಾಟಿ ಮಾಡಿ. ಮೈದಾ, ಬೇಕಿಂಗ್ ಪೌಡರ್, ಉಪ್ಪು ಹಾಗೂ ಕೋಕೊ ಪೌಡರ್ ಜೊತೆ ಜರಡಿ ಮಾಡಿ. ಮೊಟ್ಟೆಯನ್ನು ವೆನಿಲ್ಲಾ ಎಸೆನ್ಸ್ ಜೊತೆ ಸೇರಿಸಿ ಕಲಸಿ. ನೀರಿನ ಜೊತೆ ಬಣ್ಣ ಮತ್ತು ಪರಿಮಳ ಬೆರೆಸಿ. ನೀರಿನ ಮಿಶ್ರಣ ಮತ್ತು ಮೈದಾವನ್ನು ಸಾಟಿ ಜೊತೆ ಬೆರೆಸಿ ಇದಕ್ಕೆ ಗೋಡಂಬಿ ಚೂರನ್ನು ಮಿಶ್ರಣ ಮಾಡಿ. ಬೇಯಿಸುವ ತಟ್ಟೆಯಲ್ಲಿ ಮಿಶ್ರಣವನ್ನು ಹಾಕಿ 180 ಡಿಗ್ರಿ ಸೆಲ್ಸಿಯಸ್‌ ಶಾಖದಲ್ಲಿ 15ರಿಂದ 20 ನಿಮಿಷ ಬೇಯಿಸಿ.

ಒಣ ಹಣ್ಣಿನ ಕೇಕ್‌ (ಡ್ರೈ ಫ್ರೂಟ್‌ ಕೇಕ್‌)

ಅಗತ್ಯ ಸಾಮಗ್ರಿ: ಮೈದಾ 150 ಗ್ರಾಂ, ಸಕ್ಕರೆಪುಡಿ 100 ಗ್ರಾಂ, ವನಸ್ಪತಿ 100 ಗ್ರಾಂ, 2 ಮೊಟ್ಟೆ, ವೆನಿಲ್ಲಾ ಎಸೆನ್ಸ್‌ ಕೆಲವು ಹನಿಗಳು, 1 ಚಿಟಿಕೆ ಉಪ್ಪು, ಬೇಕಿಂಗ್ ಪುಡಿ 4 ಟೀ ಚಮಚ, ಕಾಫಿ ಪುಡಿ 1 ಟೀ ಚಮಚ, 2 ದೊಡ್ಡ ಚಮಚ ಕ್ಯಾರಮಲ್, ಮಿಕ್ಸಡ್ ಸ್ಪೈಸ್ 4 ಟೀ ಚಮಚ, 4 ಟೀ ಚಮಚ ನಿಂಬೆ ಹಣ್ಣಿನ ಸಿಪ್ಪೆ ಪುಡಿ, ನಿಂಬೆ ಹಣ್ಣಿನ ರಸ 1 ದೊಡ್ಡ ಚಮಚ, ಒಣಹಣ್ಣುಗಳು; ದ್ರಾಕ್ಷಿ 50 ಗ್ರಾಂ, 50 ಗ್ರಾಂ ಗೋಡಂಬಿ, 50 ಗ್ರಾಂ ಟೂಟಿ ಫ್ರೂಟಿ, ಕಿತ್ತಳೆ ಸಿಪ್ಪೆ 50 ಗ್ರಾಂ, ಚೆರ‍್ರಿ 50 ಗ್ರಾಂ.

ವಿಧಾನ: ದ್ರಾಕ್ಷಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ತಟ್ಟೆಯಲ್ಲಿ ಒತ್ತಿ ಇಡಿ. ಹಣ್ಣುಗಳೆಲ್ಲವನ್ನೂ ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ ದ್ರಾಕ್ಷಿಯ ಜೊತೆ ಬೆರೆಸಿ. ಈ ಮಿಶ್ರಣಕ್ಕೆ ನಿಂಬೆ ರಸ, ಮಿಕ್ಸೆಡ್ ಸ್ಪೈಸ್‌ನ್ನು ಚೆನ್ನಾಗಿ ಮಿಶ್ರ ಮಾಡಿ ಒಂದು ರಾತ್ರಿ ಇಡಿ. ರಮ್‌ ಕೂಡಾ ಸೇರಿಸಬಹುದು. ವನಸ್ಪತಿ ಮತ್ತು ಸಕ್ಕರೆಯನ್ನು ಚೆನ್ನಾಗಿ ಸಾಟಿ ಮಾಡಿ. ಮೊಟ್ಟೆಯನ್ನು ವೆನಿಲ್ಲಾ ಜೊತೆಯಲ್ಲಿ ಚೆನ್ನಾಗಿ ಬೆರೆಸಿ ಸಾಟಿಯಲ್ಲಿ ಸೇರಿಸಿ. ಬೇಕಿಂಗ್ ಪುಡಿ, ಉಪ್ಪು ಮತ್ತು ಮೈದಾ ಹಿಟ್ಟನ್ನು ಜರಡಿ ಮಾಡಿಕೊಳ್ಳಿ. ಇದಕ್ಕೆ ಚೂರು ಮಾಡಿದ ಹಣ್ಣುಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಈ ಮಿಶ್ರಣವನ್ನು ಸಾಟಿಯಲ್ಲಿ ಸೇರಿಸಿ ಚೆನ್ನಾಗಿ ಬೆರೆಸಿ. ಕಾಫಿಪುಡಿ ಮತ್ತು ಕ್ಯಾರಮಲ್‌ಗಳನ್ನು ಸೇರಿಸಿ ಮತ್ತು ಬೆರೆಸಿ. ಇದನ್ನು ಎಣ್ಣೆ ಸವರಿದ ಕೇಕಿನ ತಟ್ಟೆಗಳಲ್ಲಿ ಸುರಿದು 170 ಡಿಗ್ರಿ ಸೆಲ್ಸಿಯಸ್‌ ಶಾಖದಲ್ಲಿ ಸುಮಾರು ಒಂದು ಗಂಟೆ ಕಾಲ ಬೇಯಿಸಿ. ಬೆಂದ ಕೇಕ್‌ಗೂ ರಮ್‌ನ ಹನಿಗಳನ್ನು ಸಿಂಪಡಿಸಬಹುದು.

ಸ್ಪಾಂಜ್ ಕೇಕ್

ಅಗತ್ಯ ಸಾಮಗ್ರಿ: ಮೈದಾ 180 ಗ್ರಾಂ, ಹಾಲು 180 ಗ್ರಾಂ ಹಾಲು, 120 ಗ್ರಾಂ ವನಸ್ಪತಿ, ವೆನಿಲ್ಲಾ ಎಸೆನ್ಸ್‌ ಕೆಲ ಹನಿಗಳು, 3 ಮೊಟ್ಟೆ, ಬೇಕಿಂಗ್ ಪುಡಿ 4 ಟೀ ಚಮಚ, ಉಪ್ಪು ಒಂದು ಚಿಟಿಕೆ, ಸಕ್ಕರೆ ಪುಡಿ ಹದಕ್ಕೆ ಬೇಕಾಗುವಷ್ಟು.

ವಿಧಾನ: ಮೈದಾ, ಉಪ್ಪು ಮತ್ತು ಬೇಕಿಂಗ್ ಪುಡಿಯನ್ನು ಜರಡಿಯಾಡಿ. ವನಸ್ಪತಿ ಮತ್ತು ಸಕ್ಕರೆಪುಡಿಯನ್ನು ಚೆನ್ನಾಗಿ ಸಾಟಿ ಮಾಡಿ ಇಟ್ಟುಕೊಳ್ಳಿ. ಮೊಟ್ಟೆಯನ್ನು ವೆನಿಲ್ಲಾ ಜೊತೆ ಸೇರಿಸಿ ಚೆನ್ನಾಗಿ ಕಲಸಿ. ಈ ಕಲಸಿದ ಮೊಟ್ಟೆಯನ್ನು ಸ್ವಲ್ಪ ಸ್ವಲ್ಪವಾಗಿ ಸಾಟಿಯೊಳಗೆ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಮೈದಾ ಹಿಟ್ಟು, ತಕ್ಕಷ್ಟು ಹಾಲನ್ನು ಸೇರಿಸಿ. ಹದವಾದ ಹಿಟ್ಟು ಸೌಟಿನಲ್ಲಿ ಹಿಡಿದರೆ ಕೆಳಗೆ ಬೀಳುವ ತನಕ ಹಾಲು ಹಾಕಬೇಕು. ಹೀಗೆ ಬೆರೆಸಿದ ಹಿಟ್ಟನ್ನು ಬೇಕಾದ ಅಚ್ಚುಗಳಲ್ಲಿ/ಬೇಕಿಂಗ್ ತಟ್ಟೆಗಳಲ್ಲಿ ಸುರಿದು (ಎಣ್ಣೆ ಸವರಿ ಹಿಟ್ಟು ಉದುರಿಸಿದ) 180 ಡಿಗ್ರಿ ಸೆಲ್ಸಿಯಸ್‌ ಶಾಖದಲ್ಲಿ 20 ನಿಮಿಷಗಳವರೆಗೆ ಬೇಯಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry