7

ಬೆಳ್ತಂಗಡಿ: ಕ್ರಿಸ್ಮಸ್ ಸಂಭ್ರಮಾಚರಣೆ

Published:
Updated:

ಬೆಳ್ತಂಗಡಿ: ಕರ್ನಾಟಕ ರಾಜ್ಯ ಮಲ ಯಾಳಿ ಕ್ರಿಶ್ಚಿಯನ್ ಎಸೋಸಿಯೇಶನ್ ಬೆಳ್ತಂಗಡಿ ತಾಲ್ಲೂಕು ಸಮಿತಿ ವತಿಯಿಂದ ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆ  ಶನಿವಾರ ನಡೆಯಿತು.

ಕಾಸರಗೋಡು ಚಿಮೇನಿ ಸೈಂಟ್ ಜಾರ್ಜ್ ಚರ್ಚ್ ಧರ್ಮಗುರು  ಪಿ.ಕೆ. ಅಬ್ರಾಹಂ ಕ್ರಿಸ್ಮಸ್ ಸಂದೇಶ ನೀಡಿ, ‘ನಾವು ಏನೇ ಕೆಲಸ ಮಾಡಿದರೂ ಏಸುಕ್ರಿಸ್ತರ ತತ್ತ್ವ, ಆದರ್ಶವನ್ನು ಸಮುದಾಯವು ಬಳಸಿಕೊಂಡು ಮುನ್ನಡೆಯಬೇಕು. ಕ್ರೈಸ್ತ ಅಭಿವೃದ್ಧಿ ನಿಗಮ ಆದಲ್ಲಿ ಸಮುದಾಯದ ಅಭಿವೃದ್ಧಿ ಸಾಧ್ಯ’ ಎಂದರು.

ತಾಲ್ಲೂಕು ಸಮಿತಿ ಅಧ್ಯಕ್ಷ ಅಜಯ್ ಎ.ಜೆ. ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಅಧ್ಯಕ್ಷ ಎ.ಸಿ. ಜಯರಾಜ್,  ಜಿಲ್ಲಾ ಸಮಿತಿ ಉಪಾಧ್ಯಕ್ಷ ಎ.ಸಿ. ಮ್ಯಾಥ್ಯು, ಸಮಿತಿಯ ಕಾನೂನು ಘಟಕದ ರಾಜ್ಯಧ್ಯಕ್ಷ ಜೆ. ಕೆ. ಪೌಲ್, ಕೊಕ್ಕಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೆಬಾಸ್ಟಿನ್, ಅಮೆಚೂರು ಕಬಡ್ಡಿ ಪಂದ್ಯಾಟದ ಸಲಹೆಗಾರ ಪ್ರಾನ್ಸಿಸ್ ವಿ.ವಿ., ತಾಲ್ಲೂಕು ಸಮಿತಿ ಉಪಾಧ್ಯಕ್ಷ ಬಿಜು ಸಲ್ಕರ್, ಜತೆ ಕಾರ್ಯದರ್ಶಿ ಚಾರ್ಲಿ ಕ್ಲಿಟರ್ಸ್, ಯುವ ಘಟಕದ ತಾಲ್ಲೂಕು ಅಧ್ಯಕ್ಷ ಸಜೇಶ್ ಧರ್ಮಸ್ಥಳ ಉಪಸ್ಥಿತರಿದ್ದರು.

ಯುವ ಘಟಕದ ಸಾಂದ್ರಾ ಬಿಜು ಸ್ವಾಗತಿಸಿದರು. ಕೋಶಾಧಿಕಾರಿ ಜೋಸೇಫ್ ಸಿ. ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry