ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿತ್ರದ್ರೋಹ ಮಾಡಿದ ಬಾಲಕೃಷ್ಣ’

Last Updated 25 ಡಿಸೆಂಬರ್ 2017, 6:02 IST
ಅಕ್ಷರ ಗಾತ್ರ

ಬಿಡದಿ (ರಾಮನಗರ) : ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಡವಾಗಿ ಕಟ್ಟಿದ ಎ.ಮಂಜು ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯ ಕ್ಷರಾಗಿ ಮಾಡಲಾಗಲಿಲ್ಲ. ಆದರೆ ಜೆಡಿಎಸ್ ಪಕ್ಷದಿಂದ ಅವರನ್ನು ಶಾಸಕರಾಗಿ ಮಾಡುತ್ತೇವೆ. ಇದಕ್ಕೆ ತಮ್ಮೆಲ್ಲರ ಆಶೀರ್ವಾದ ಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮನವಿ
ಮಾಡಿದರು.

ಇಲ್ಲಿನ ಬೈರಮಂಗಲ ಗ್ರಾಮದಲ್ಲಿ ರಾಷ್ಟ್ರಕವಿ ಕುವೆಂಪು ಮತ್ತು ಡಾ. ರಾಜ್‌ಕುಮಾರ್‌ ಸಮಾನ ಮನಸ್ಕರ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಶನಿವಾರ ರಾತ್ರಿ ನಡೆದ ‘ಕನ್ನಡ ಹಬ್ಬ’ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಹಿಂದೆ ಕುಮಾರಸ್ವಾಮಿ ಅವರ ಪಕ್ಕದಲ್ಲಿದ್ದ ಶಾಸಕ ಬಾಲಕೃಷ್ಣ ಅವರು ಮಿತ್ರದ್ರೋಹ ಮಾಡಿ, ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದರು. ಬಾಲಕೃಷ್ಣ ಅವರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಮೋಸ ಮಾಡುವ ಮೂಲಕ ಕಣ್ಣೀರು ಹಾಕಿಸಿದ್ದಾರೆ. ಅವರಿಗೆ ಕ್ಷೇತ್ರದ ಮತದಾರರು ತಕ್ಕ ಬುದ್ಧಿ ಕಲಿಸಬೇಕು ಎಂದರು.

ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ಕಾವೇರಿ ಮತ್ತು ಮಹದಾಯಿ ವಿಚಾರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯದ ಜನರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿವೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎ. ಮಂಜು ಮಾತನಾಡಿ, ‘ನಾನು ನಿಮ್ಮ ಸೇವಕನಾಗಿ, ನಿಮ್ಮಗಳ ಧ್ವನಿಯಾಗಿ ಕೆಲಸ ಮಾಡಲು ಅವಕಾಶ ನೀಡಿ. ನೀವು ತೋರಿದ ಸರಿದಾರಿಯಲ್ಲಿ ನಡೆದು ಕುಮಾರಸ್ವಾಮಿ ಅವರ ಕೈ ಬಲ ಪಡಿಸುವೆ’ ಎಂದು ಅವರು ಹೇಳಿದರು.

ಬೆಂಗಳೂರು ದಕ್ಷಿಣ ವಿಭಾಗದ ವಿಶೇಷ ಜಿಲ್ಲಾಧಿಕಾರಿ ಎಸ್.ರಂಗಪ್ಪ, ಕೆಎಎಸ್ ಅಧಿಕಾರಿ ಬನ್ನಿಗಿರಿ ರವಿ, ಆರ್.ಚಂದ್ರಯ್ಯ, ಸುಭಾಷ್ ಆಸ್ಪತ್ರೆಯ ವೈದ್ಯ ಡಾ.ಸುಭಾಷ್, ಎಸ್‍ ಪಿಆರ್‌ ಗ್ರೂಪ್‌ನ ಎಂ.ತಿಮ್ಮೇಗೌಡ, ಪೊಲಿಸ್ ಇನ್ ಸ್ಪೆಕ್ಟರ್ ಬಿ.ಎನ್.ಶ್ರೀನಿವಾಸ್, ಬಿಬಿಎಂಪಿ ಎಇಇ ಟಿ.ಕೃಷ್ಣಪ್ಪ, ನಿವೃತ್ತ ಮುಖ್ಯ ಶಿಕ್ಷಕ ವೀರತಿಮ್ಮಯ್ಯ, ನಿವೃತ್ತ ಸೂಪರಿಡೆಂಟ್ ಎಂಜಿನಿಯರ್ ವರದರಾಜು, ನಿವೃತ್ತ ಕೆಎಎಸ್ ಅಧಿಕಾರಿ ಎ.ಪಿ.ಶಂಕರ್, ಶತಾಯಷಿ ಎಚ್.ಕೆಂಪಯ್ಯ, ನಿವೃತ್ತ ಪ್ರಾಚಾರ್ಯ ನಿಂಗಪ್ಪ, ಕಲಾವಿದ ರೇವಣ್ಣ, ಕರಾಟೆ ಚಿನ್ನದ ಪದಕ ವಿಜೇತ ರೋಹಿತ್, ನಿತ್ಯಶ್ರೀ, ಮಾಸ್ಟರ್ ಸಮಂತ್‍ ಕುಮಾರ್‌, ವೈದ್ಯಕೀಯ ಇಲಾಖೆ ಎಚ್.ಪಿ.ಜಯರಾಮು, ಪ್ರಾಧ್ಯಾಪಕ ಎಚ್.ಡಿ.ರಾಧಾಕೃಷ್ಣ, ಎಚ್.ಟಿ.ಧನಂಜಯ, ಎಚ್.ಡಿ. ಯೋಗಾನಂದ, ಕೆ.ಸಿ.ರಾಜು ಅವರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್‌ ಸದಸ್ಯ ಕಾಂತರಾಜ್‌, ಕೆಂಪೇಗೌಡ ವೈದ್ಯಕೀಯ ಆಸ್ಪತ್ರೆ ಅಧ್ಯಕ್ಷ ಪೂಜಾರಿಪಾಳ್ಯ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ್, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ. ಉಮೇಶ್, ಬೈರಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ. ರಾಮಯ್ಯ, ಮುಖಂಡರಾದ ಕಬಡ್ಡಿಬಾಬು, ಲಕ್ಷ್ಮಿಮಂಜುನಾಥ್, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಯುವ ಘಟಕದ ಅಧ್ಯಕ್ಷ ಎಚ್.ಸಿ. ರಾಜಣ್ಣ ಇದ್ದರು.

ಕಾಂಗ್ರೆಸ್‌ ಪಕ್ಷದಲ್ಲಿ ಗೊಂದಲ

ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಮತ್ತು ಹಳೆಯ ಕಾಂಗ್ರೆಸ್ ಎಂದು ಈಗಾಗಲೇ ಪಂಗಡಗಳಿವೆ. ಇದರಿಂದ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ ಎಂದು ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು. ಜಿಲ್ಲೆಯಲ್ಲೂ ಅದರ ಕರಿನೆರಳಿದ್ದು, ಬಾಲಕೃಷ್ಣ ಅವರಿಗೆ ಮುಂದಿನ ದಿನಗಳಲ್ಲಿ ಅದರ ಬಿಸಿ ತಟ್ಟಲಿದೆ ಎಂದು ಹೇಳಿದರು.

* *

ಕನ್ನಡ ನಾಡು, ನುಡಿ, ಜಲವನ್ನು ಉಳಿಸುವ ಕೆಲಸ ಮಾಡಲು ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಪ್ರಾದೇಶಿಕ ಪಕ್ಷದ ಅವಶ್ಯ ಇದೆ
ಮಧು ಬಂಗಾರಪ್ಪ
ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT