6

ರೈತರಿಗಾಗಿ ಬೆಲೆ ಆಯೋಗ ರಚಿಸಿ

Published:
Updated:
ರೈತರಿಗಾಗಿ ಬೆಲೆ ಆಯೋಗ ರಚಿಸಿ

ರಾಮನಗರ: ಸ್ವಾತಂತ್ರ್ಯ ನಂತರದ ವರ್ಷಗಳಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ವರ್ತಕರ ಆರ್ಥಿಕ ಸ್ಥಿತಿಗತಿ ಹೆಚ್ಚಾಗುತ್ತಿದೆ. ಆದರೆ ಕೃಷಿಕರು ಬಡವರಾಗುತ್ತಿದ್ದಾರೆ ಎಂದು ಹಿರಿಯ ರೈತ ಮುಖಂಡ ಸಿ. ಪುಟ್ಟಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಚೈತನ್ಯ ಭವನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ನಿಸರ್ಗ ಬಿಂಬ ಫೌಂಡೇಷನ್‌ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜಕಾರಣಿಗಳು, ಅಧಿಕಾರಿಗಳು, ವರ್ತಕರ ಆರ್ಥಿಕ ಸ್ಥಿತಿಗತಿ ಏರಿಕೆ ಆಗುತ್ತಲೇ ಇದೆ. ಅವರ ಆಸ್ತಿಪಾಸ್ತಿ ಲಕ್ಷ ಪಟ್ಟು ಜಾಸ್ತಿಯಾಗಿದೆ. ಆದರೆ ರೈತರ ಸ್ಥಿತಿಗತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ದೇಶದಲ್ಲಿ ರೈತರಾಗಿ ಹುಟ್ಟುವುದೇ ದುರ್ದೈವದ ಸಂಗತಿ ಎಂದರು.

ರೈತಾಪಿ ವರ್ಗಕ್ಕೆ ಜೀವ ಸೂಚ್ಯಂಕಗಳೇ ಇಲ್ಲ. ಅದೇ ಸರ್ಕಾರಿ ನೌಕರರಿಗೆ ಜೀವ ಸೂಚ್ಯಂಕಗಳಿವೆ. ಸರ್ಕಾರಿ ನೌಕರರಿಗೆ ವೇತನ ಆಯೋಗ ಇರುವಂತೆ, ರೈತರಿಗೆ ಬೆಲೆ ಆಯೋಗ ರಚನೆಯಾಗಬೇಕು. ಈ ದೇಶದ ಕೃಷಿ ನೀತಿ ತಾರತಮ್ಯದಿಂದ ಕೂಡಿದೆ. ಕೈಗಾರಿಕಾ ಕ್ಷೇತ್ರಕ್ಕೆ ಪ್ರತ್ಯೇಕ ನೀತಿ ರೂಪಿಸಬೇಕು, ರೈತರಿಗೂ ಪ್ರತ್ಯೇಕ ನೀತಿಗಳನ್ನು ರೂಪಿಸಿ ರೈತರ ಪ್ರಗತಿಗೆ ಸರ್ಕಾರಗಳು ನೆರವಾಗಬೇಕು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್, ರೈತ ಮುಖಂಡರಾದ ಸಂಪತ್‌ ಕುಮಾರ್, ಪಟೇಲ್‌ ಸಿ ರಾಜು, ಎಂ.ಡಿ. ಶಿವಕುಮಾರ್, ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳಾದ ವೆಂಕಟಾಚಲಯ್ಯ, ಚಂದ್ರಶೇಖರ್, ತಮ್ಮಯ್ಯ ಇದ್ದರು.

ಕೃಷಿಕ ಸಮಾಜ : ವ್ಯವಸಾಯದಲ್ಲಿ ರೈತರು ಆಧುನಿಕ ತಾಂತ್ರಿಕತೆ ಅಳವ ಡಿಸಿಕೊಂಡು ಬೆಳೆ ಬೆಳೆಯಿರಿ ಎಂದು ತಾಲ್ಲೂ ಕೃಷಿಕ ಸಮಾಜದ ಅಧ್ಯಕ್ಷ ದೇವ ರಾಜು ಹೇಳಿದರು. ಇಲ್ಲಿನ ಕೃಷಿ ಇಲಾಖೆಯ ಕಚೇರಿ ಆವರಣದಲ್ಲಿ ಕೃಷಿಕ ಸಮಾಜ ಹಾಗೂ ಕೃಷಿ ಇಲಾಖೆಯ ಸಹ ಭಾಗಿತ್ವದಲ್ಲಿ ಶನಿವಾರ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರ ರೈತ ದಿನಾಚರಣೆಗೆ ರಜೆ ಘೋಷಿ ಸಬೇಕು. ರೈತನೇ ಈ ದೇಶದ ಬೆನ್ನೆಲುಬಾಗಿದ್ದು ಆತನಿಲ್ಲದಿದ್ದರೆ ಬದುಕು ದುಸ್ಥರವಾಗುತ್ತದೆ. ಇಂತಹ ಸನ್ನಿವೇಶದಲ್ಲಿ ರೈತನಿಗೆ ಸರ್ಕಾರ ಅಗತ್ಯ ನೇರವು ನೀಡಬೇಕು ಎಂದರು.

ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಕೆ. ಶಾಂತಪ್ಪ ಮಾತನಾಡಿ ರೈತರು ಇಲಾಖೆಗಳಲ್ಲಿ ರಿಯಾಯಿತಿ ದರದಲ್ಲಿ ದೊರೆಯುವ ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣಗಳು, ಕೀಟ ನಾಶಕಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ತಾಲ್ಲೂಕು ಕೃಷಿ ಇಲಾಖೆ ನಿರ್ದೇಶಕ ಹರೀಶ್, ಕೃಷಿ ಅಧಿಕಾರಿ ನವೀನ, ಕೃಷಿಕ ಸಮಾಜದ ನಿರ್ದೇಶಕರಾದ ಕೆ. ಶಿವಲಿಂಗಯ್ಯ, ಚನ್ನಮಾನಹಳ್ಳಿ ಅಪ್ಪಾ ಜಯ್ಯ, ಗೋಪಾಲ್, ಪುಟ್ಟಗೌರಮ್ಮ, ನಂಜಪ್ಪ ರೈತ ಮುಖಂಡರಾದ ಪುಟ್ಟ ಲಿಂಗಯ್ಯ, ಪಾರ್ಥ, ಚಂದ್ರಣ್ಣ, ಶಿವಲಿಂಗಯ್ಯ, ಕುಮಾರ್, ಶಿವ ರುದ್ರಯ್ಯ, ಪ್ರಗತಿಪರ ರೈತ ಮಹಿಳೆ ಪುಟ್ಟಗೌರಮ್ಮ ಇದ್ದರು.

ಮಾವು ಬೆಳೆಗಾರರ ಸಂಘ: ಜಿಲ್ಲೆಯ ರೈತರಿಗೆ ಅಗತ್ಯವಾಗಿ ಬೇಕಾಗಿರುವ ಸಂಸ್ಕರಣಾ ಘಟಕ ಸ್ಥಾಪನೆ ಮಾಡಲು ಸರ್ಕಾರ ಮುಂದಾಗಬೇಕಿದೆ ಎಂದು ಜಿಲ್ಲಾ ಮಾವು ಮತ್ತು ತೋಟದ ಬೆಳೆ ಗಾರರ ಸಂಘದ ಸಂಸ್ಥಾಪಕ ಜೋಗಯ್ಯ ಹೇಳಿದರು. ಇಲ್ಲಿನ ಎಪಿಎಂಸಿ ಆವರಣದಲ್ಲಿ ಶನಿವಾರ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು.

ಎಪಿಎಂಸಿ ಅಧ್ಯಕ್ಷ ಪುಟ್ಟರಾಮು, ನಿರ್ದೇಶಕ ದೊರೆಸ್ವಾಮಿ, ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ಸಿ. ಮಹೇಶ್, ನಿರ್ದೇಶಕರಾದ ಗೋಪಾಲಕೃಷ್ಣ, ರಾಮಚಂದ್ರೇಗೌಡ, ಲವಕುಮಾರ್, ರೈತ ಮುಖಂಡರಾದ ತುಂಬೇನಹಳ್ಳಿ ಶಿವಕುಮಾರ್, ಎಂ.ಆರ್. ಶಿವಕುಮಾರ್, ನಾರಾಯಣ್, ಬನ್ನಿಕುಪ್ಪೆ ದೇವರಾಜು, ಮುನಿಯಪ್ಪ, ಎ.ಎಸ್. ಶಿವಣ್ಣ, ಪುಟ್ಟಸ್ವಾಮಯ್ಯ ಇದ್ದರು.

ಸಂಸ್ಕರಣಾ ಘಟಕ ಬೇಕು

ಜಿಲ್ಲೆಯಲ್ಲಿ ಹೆಚ್ಚು ಮಾವು ಮತ್ತು ಇತರ ಬೆಳೆ ಬೆಳೆಯುವ ರೈತರಿದ್ದಾರೆ. ಇವರಿಗೆ ತಾವು ಬೆಳೆದ ಬೆಳೆ ಸಂಸ್ಕರಿಸಲು ರಾಜ್ಯದ ನಾನಾಕಡೆ, ಹೊರರಾಜ್ಯ ದೇಶ ವಿದೇಶಗಳಿಗೆ ರಫ್ತು ಮಾಡಲು ಸಂಸ್ಕರಣಾ ಘಟಕ ಇಲ್ಲದಿರುವುದು ತೊಂದರೆಯಾಗಿದೆ ಎಂದು ಎಂದು ಜಿಲ್ಲಾ ಮಾವು ಮತ್ತು ತೋಟದ ಬೆಳೆಗಾರರ ಸಂಘದ ಸಂಸ್ಥಾಪಕ ಜೋಗಯ್ಯ ಹೇಳಿದರು.

ಇದರಿಂದ ರೈತ ಬೆಳೆದ ಬೆಳೆಗಳು ಬಹುಬೇಗನೆ ಹಾಳಾಗುತ್ತಿದ್ದು ರೈತನಿಗೆ ನಷ್ಟ ಉಂಟಾಗುತ್ತಿದೆ. ಅನೇಕ ರೈತರು ಸಾಲದ ಸುಳಿಗೆ ಸಿಲುಕಿ ನರಳುತ್ತಿದ್ದಾರೆ. ಇದನ್ನು ತಪ್ಪಿಸಲು ಅಗತ್ಯವಾಗಿ ಸರ್ಕಾರ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತವಾದ ಸಂಸ್ಕರಣಾ ಘಟಕ ಸ್ಥಾಪಿಸಿ ರೈತರಿಗೆ ನೆರವಾಗಬೇಕು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry