ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರವೇ ರೈತರ ದಿನ ಆಚರಿಸಲಿ’

Last Updated 25 ಡಿಸೆಂಬರ್ 2017, 6:31 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಪ್ರತಿ ವರ್ಷ ಡಿ.23 ರಂದು ಸರ್ಕಾರದ ವತಿಯಿಂದ ರೈತ ದಿನಾಚರಣೆ ಆಚರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರಮುಖ ರಸ್ತೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಕೆಲ ಹೊತ್ತು ರಸ್ತೆ ತಡೆ ನಡೆಸಿದ ಕಾರ್ಯಕರ್ತರು ನಂತರ ಸ್ಥಳಕ್ಕೆ ಬಂದ ಗ್ರೇಡ್-–2 ತಹಶೀಲ್ದಾರ್ ಪಿ.ಜಿ.ಪವಾರ ಅವರಿಗೆ ಮನವಿ ಸಲ್ಲಿಸಿದರು.

ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ, ರೈತರು ದೇಶದ ಬೆನ್ನೆಲುಬು. ದೇಶದ ಜನರಿಗೆ ಅನ್ನ ಹಾಕುವ ಅನ್ನದಾತ. ಅಸಂಘಟಿತ ವರ್ಗದಲ್ಲಿ ಬರುವ ಅವರು ಬೆವರು ಸುರಿಸಿ ದುಡಿಮೆ ಮಾಡಿದಾಗ ಮಾತ್ರ ಜನರು ನೆಮ್ಮದಿಯಿಂದ ಬದುಕಲು ಸಾಧ್ಯ.

ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಹಾಗೂ ರಾಜಕಾರಿಣಿಗಳು ರೈತರ ಪರ ಇದ್ದೇವೆ ಎಂದು ಮಾತನಾಡುತ್ತವೆ. ಯಾವು ಸರ್ಕಾರವು ರೈತರ ದಿನವನ್ನು ಆಚರಿಸಲು ಮುಂದಾಗದೇ ಇರುವುದು ನಾಡಿನ ದೌರ್ಭಾಗ್ಯ. ಈಗಲಾದರು ಸರ್ಕಾರ ಎಚ್ಚೆತ್ತುಕೊಂಡು ರೈತರ ದಿನ ಆಚರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಉಮೇಶ ಅವಟಿ, ಸತೀಶ ನರಸರಡ್ಡಿ, ಸುರೇಶ ನರಸರಡ್ಡಿ, ಆನಂದ ಹಡಗಲಿ, ನರಸಪ್ಪ ವಾಲೀಕಾರ, ಸುರೇಶ ಹಾರಿವಾಳ, ಶ್ರೀಶೈಲ ಹೆಬ್ಬಾಳ, ಮೈಬೂಸಾಬ್ ಇನಾಮದಾರ, ಆನಂದ ನಾಶಿ, ಕೀರಣ ರಾಠೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT