7

ಬಿಳಿಜೋಳಕ್ಕೆ ತೇವಾಂಶದ ಕೊರತೆ

Published:
Updated:

ಶಹಾಪುರ: ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಬಿಳಿಜೋಳಕ್ಕೆ ತೇವಾಂಶದ ಕೊರತೆ ಕಾಣಿಸಿಕೊಂಡಿದೆ. ಇದರಿಂಧ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ ರೈತರು ನಿರಾಸೆ ಅನುಭವಿಸುವಂತಾಗಿವೆ.

ಉತ್ತರ ಕರ್ನಾಟಕ ಭಾಗದ ಜನರ ಮುಖ್ಯ ಆಹಾರ ಬಿಳಿಜೋಳ ಆಗಿದೆ. ಈಗ ಒಡಿ ಹಾಕುವ ಹಂತದಲ್ಲಿಯೇ ತೇವಾಂಶದ ಕೊರತೆ ಕಂಡು ಬಂದಿದೆ. ನೀರಾವರಿ ಹಾಗೂ ನೀರಿನ ಲಭ್ಯತೆ ಇರುವ ರೈತರು ಜೋಳಕ್ಕೆ ನೀರು ಹಾಯಿಸಿದ್ದಾರೆ.

ಗಡುಸು ಮಣ್ಣಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ ಜೋಳಕ್ಕೆ ಕಡ್ಡಾಯವಾಗಿ ನೀರು ಹಾಯಿಸಬೇಕು ಇಲ್ಲದೆ ಹೋದರೆ ಜೋಳ ಕಾಳು ಕಟ್ಟುವುದಿಲ್ಲ. ಈಗ ಕಾಲಮಾನ ಬದಲಾಗಿದೆ. ಹಿಂದೆ ಇಬ್ಬನಿ ಬಿಳುತ್ತಿತ್ತು. ಅದರಿಂದ ನೀರಿನ ಕೊರತೆ ಆಗುತ್ತಿರಲಿಲ್ಲ. ಆದರೆ, ಈಗ ಬರಿ ಶೀತಗಾಳಿ ಇದೆ ಎನ್ನುತ್ತಾರೆ ರೈತ ಶಿವಪ್ಪ. ಜೇಡಿ ಮಣ್ಣಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ ಜೋಳಕ್ಕೆ ನೀರಿನ ಅವಶ್ಯಕತೆ ಇಲ್ಲ. ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣಧರ್ಮ ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry