7

‘ಸಾವಯವ ಕೃಷಿಯಲ್ಲಿ ಮಹಿಳೆ ಪಾತ್ರ ಮುಖ್ಯ’

Published:
Updated:

ಬೀದರ್: ‘ಸಾವಯವ ಕೃಷಿ ಪದ್ಧತಿ ಅನುಸರಿಸುವಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ’ ಎಂದು ಆರ್.ಆರ್.ಕೆ ಕಾಲೇಜಿನ ಪ್ರಾಧ್ಯಾಪಕಿ ಸುನೀತಾ ಕೂಡ್ಲಿಕರ್ ತಿಳಿಸಿದರು. ಸಾವಯವ ಕೃಷಿ ಸಮ್ಮೇಳನದಲ್ಲಿ ‘ಸಾವಯವ ಕೃಷಿ – ಮಹಿಳೆ’ ಗೋಷ್ಠಿಯಲ್ಲಿ ‘ಕೃಷಿ ಆಚರಣೆ ಮತ್ತು ಮಹಿಳೆ’ ಕುರಿತು ಅವರು ಮಾತನಾಡಿದರು.

‘ಜಾನಪದ ಸಂಸ್ಕೃತಿಗೆ ಮಹಿಳೆಯೇ ವಾರಸುದಾರಳು. ಅದೇ ರೀತಿ ಜಾನಪದ ಸಂಸ್ಕೃತಿಯ ಒಂದು ಭಾಗವಾದ ಸಾವಯವ ಸಂಪ್ರದಾಯದಲ್ಲಿ ಮಹಿಳೆಗೆ ಅವಿನಾಭಾವ ಸಂಬಂಧವಿದೆ. ಕೃಷಿ ಶ್ರೀಮಂತವಾಗಲು ಮಹಿಳೆಯ ಪಾತ್ರ ಮಹತ್ವದ್ದಾಗಿದೆ’ ಎಂದರು.

‘ಮಹಿಳೆ ಹಾಗೂ ಭೂಮಿ ಎರಡು ದೈವಿ ಶಕ್ತಿಯ ಪ್ರತೀಕ. ಜಾನಪದ ಹಾಗೂ ಸಾವಯವ ಕೃಷಿಯ ನಡುವಿನ ಕೊಂಡಿಯಾಗಿದ್ದಾಳೆ. ವ್ಯವಸಾಯದ ಎಲ್ಲ ಚಟುವಟಿಕೆಗಳು ಹಾಡಿನ ಮೂಲಕ ಮಾಡಿ, ತನ್ನ ಆರೋಗ್ಯ ಅಭಿವೃದ್ಧಿಪಡಿಸಿಕೊಳ್ಳುವುದರ ಜೊತೆಗೆ ತನ್ನ ಇಡೀ ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾಳೆ’ ಎಂದು ತಿಳಿಸಿದರು.

‘ಸಾವಯವ ಕೃಷಿ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರ’ ಕುರಿತು ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯದರ್ಶಿ ಡಾ. ಮಹಾನಂದಾ ಮಡಕಿ ಉಪನ್ಯಾಸ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಶಿವಕುಮಾರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶೋಭಾವತಿ ಕಾರಬಾರಿ, ಅಕ್ಕಮಹಾದೇವಿ ಮಹಿಳಾ ಬ್ಯಾಂಕಿನ ಅಧ್ಯಕ್ಷೆ ಸಾವಿತ್ರಿಬಾಯಿ ಹೆಬ್ಬಾಳೆ, ಜಾನಪದ ಪರಿಷತ್ತಿನ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಡಾ. ಧನಲಕ್ಷ್ಮಿ ಪಾಟೀಲ, ಪಶು ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕಿ ಶೋಭಾವತಿ ಫುಲಾರೆ, ಆರತಿ ಮಹಿಳಾ ವಿಕಾಸ ಸಮಿತಿ ಅಧ್ಯಕ್ಷೆ ಕಾವೇರಿ ಸ್ವಾಮಿ ಉಪಸ್ಥಿತರಿದ್ದರು. ಮಲ್ಲಮ್ಮ ಸಂತಾಜಿ ಸ್ವಾಗತಿಸಿದರು. ಸುರೇಖಾ ಬಿರಾದಾರ ನಿರೂಪಿಸಿದರು. ಸರ್ವಮಂಗಳಾ ತಿಪಶಟ್ಟಿ ವಂದಿಸಿದರು.

ಮನರಂಜಿಸಿದ ಸುಗ್ಗಿ ಹಾಡು, ಜಾನಪದ ನೃತ್ಯ

ಬೀದರ್: ಇಲ್ಲಿಯ ಸಾಯಿ ಆದರ್ಶ ಸ್ಕೂಲ್‌ ಆವರಣದಲ್ಲಿ ಆಯೋಜಿಸಿದ್ದ ಪ್ರಥಮ ಜಿಲ್ಲಾ ಸಾವಯವ ಕೃಷಿ ಸಮ್ಮೇಳನ ಮತ್ತು ಸಿರಿಧಾನ್ಯ ಮೇಳದಲ್ಲಿ ಶನಿವಾರ ನಡೆದ ಜಾನಪದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಜಾನಪದ ಯುವ ಕಲಾವಿದ ಪವನಕುಮಾರ ನಾಟೇಕರ್ ಹಾಗೂ ತಂಡದವರು ಸುಗ್ಗಿ ಹಾಡು ಹಾಡುವ ಮೂಲಕ ಗಮನ ಸೆಳೆದರು. ಗದಗ ಜಿಲ್ಲೆಯ ಶಂಕರೆಪ್ಪ ಸಂಕಣ್ಣನವರ್ ಕಲಾ ತಂಡದಿಂದ ಜಾನಪದ ನೃತ್ಯ ಹಾಗೂ ಹಾಡುಗಳು, ಚಿಟ್ಟಾವಾಡಿ ಕಲಾ ತಂಡದವರು ಭಜನೆ ಹಾಡುಗಳನ್ನು ಹಾಡಿದರು.

ಗುತ್ತಿಗೆದಾರ ಗುರುನಾಥ ಕೊಳ್ಳೂರು ಕಾರ್ಯಕ್ರಮ ಉದ್ಘಾಟಿಸಿದರು. ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಕರ್ನಾಟಕ ಲಲಿತಕಲಾ ಆಕಾಡೆಮಿ ಸದಸ್ಯ ಯೋಗೇಶ ಮಠದ, ಸಹಾಯಕ ಕೃಷಿ ನಿರ್ದೇಶಕ ಅನ್ಸಾರಿ, ಜಾನಪದ ಪರಿಷತ್ತಿನ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಮೈನಾಳೆ, ಕನ್ನಡಾಂಬೆ ಗೆಳೆಯರ ಬಳಗದ ಅಧ್ಯಕ್ಷ ವಿರುಪಾಕ್ಷ ಗಾದಗಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಮಾರುತಿ ಕೋಳಿ ಚಾಂಬೋಳ್, ಪ್ರಮುಖರಾದ ರವಿ ಸ್ವಾಮಿ, ಓಂಪ್ರಕಾಶ ಬಜಾರೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry