7

ಕಡೂರು: ₹100 ಕೋಟಿ ವೆಚ್ಚದ ಸೋಲಾರ್ ಪಾರ್ಕ್

Published:
Updated:
ಕಡೂರು: ₹100 ಕೋಟಿ ವೆಚ್ಚದ ಸೋಲಾರ್ ಪಾರ್ಕ್

ಕಡೂರು: ‘ಜನವರಿ 5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಡೂರಿನಲ್ಲಿ ಸುಮಾರು 200 ಕೋಟಿಗೂ ಹೆಚ್ಚಿನ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ₹100 ಕೋಟಿ ವೆಚ್ಚದಲ್ಲಿ 20 ಮೆಗಾವಾಟ್‌ ಸಾಮರ್ಥ್ಯದ ಸೋಲಾರ್ ಪಾರ್ಕ್ ಕಾಮಗಾರಿಗೆ ಚಾಲನೆ ದೊರೆಯಲಿದೆ’ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.

ಕಡೂರಿನ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಕಡೂರು ಮತ್ತು ಬೀರೂರು ಪಟ್ಟಣಕ್ಕೆ ₹40 ಕೋಟಿ ವೆಚ್ಚದಲ್ಲಿ ಭದ್ರಾ ಕುಡಿಯುವ ನೀರು ಯೋಜನೆ ಮತ್ತು ಬಹುಗ್ರಾಮ ಕುಡಿಯುವ ಯೋಜನೆಯಡಿ 32 ಹಳ್ಳಿಗಳಿಗೆ ಕುಡಿಯುವ ನೀರು ಯೋಜನೆಗೆ ಚಾಲನೆ ನೀಡಲಿದ್ದಾರೆ’ ಎಂದರು.

‘16 ಕೋಟಿ ವೆಚ್ಚದ ಬ್ಯಾಗಡೇಹಳ್ಳಿ ಯಿಂದ ಬುಕ್ಕಾಸಾಗರಕ್ಕೆ ಎಕ್ಸ್‌ಪ್ರೆಸ್ ಲೈನ್ ವಿದ್ಯುತ್ ಯೋಜನೆ, ಕಡೂರಿನ ಸಾರ್ವಜನಿಕ ಆಸ್ಪತ್ರೆ ಐಸಿಯು ಘಟಕ ಮತ್ತು ಡಯಾಲಿಸಿಸ್ ಘಟಕ ಮತ್ತು ಬಳ್ಳೇಕೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ’ ಎಂದರು.

‘100 ಕೋಟಿ ವೆಚ್ಚದಲ್ಲಿ 20 ಮೆಗಾವಾಟ್‌ ಸಾಮರ್ಥ್ಯ ಸೋಲಾರ್ ಪಾರ್ಕ್, ₹9 ಕೋಟಿ ವೆಚ್ಚದ ಬಿ.ವೈ.ಎಸ್ ಎಸ್ ಬಿ ರಸ್ತೆ ಕಾಮಗಾರಿಗಳಿಗೂ ಇದೇ ಸಂದರ್ಭದಲ್ಲಿ ಚಾಲನೆ ದೊರೆಯಲಿದೆ. ಇನ್ನೂ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆಯುವ ಹಂತದಲ್ಲಿದೆ’ ಎಂದು ಮಾಹಿತಿ ನೀಡಿದರು.

‘ಶಾಸಕನಾಗಿ ಈ ಕ್ಷೇತ್ರಕ್ಕೆ ನನ್ನ ಕೊಡುಗೆ ಶೂನ್ಯ ಎನ್ನುವವರು ಈ ಕಾಮಗಾರಿಗಳನ್ನು ಗಮನಿಸಬೇಕು. ಟೀಕೆ ಮಾಡುವುದನ್ನೇ ನಿತ್ಯ ಕಾಯಕವನ್ನಾಗಿ ಮಾಡಿಕೊಂಡಿರುವವರಿಗೆ ಪ್ರತಿಕ್ರಿಯಿ ಸಲು ಹೋಗುವುದಿಲ್ಲ. ನನ್ನ ದೃಷ್ಟಿ ಯಾವಾಗಲೂ ಕ್ಷೇತ್ರದ ಅಭಿವೃದ್ದಿಯ ಕಡೆಗೆ ಇರುತ್ತದೆ’ ಎಂದು ಅವರು ಹೇಳಿದರು. ತಾಲ್ಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ, ಸಿಗೇಹಡ್ಲುಹರೀಶ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry