7

‘ರೈತರ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧ’

Published:
Updated:

ಹೊಳೆಆಲೂರ (ರೋಣ): ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರೈತರ ಅಭಿವೃದ್ಧಿಗಾಗಿ ಹಲವು ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ₹ 50 ಸಾವಿರವರೆಗಿನ ರೈತರ ಸಾಲ ಮನ್ನಾ ಮಾಡಿ ರೈತರ ಬದುಕಿಗೆ ಆಸರೆಯಾಗಿದ್ದಾರೆ ಎಂದು ಶಾಸಕ ಬಿ.ಆರ್.ಯಾವಗಲ್ ಹೇಳಿದರು. ತಾಲ್ಲೂಕಿನ ಮೆಣಸಗಿ ಗ್ರಾಮದಲ್ಲಿ ಶನಿವಾರ ಕೃಷಿ ಇಲಾಖೆ ಆಶ್ರಯದಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೀರಾವರಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೃಷಿಭಾಗ್ಯ ಯೋಜನೆಯಡಿ ಕೃಷಿಹೊಂಡ ನಿರ್ಮಿಸಲಾಗಿದೆ. ಸಾವಯವ ಕೃಷಿ ಅಭಿವೃದ್ಧಿಗಾಗಿ ಕ್ರಮ ವಹಿಸಲಾಗಿದೆ. ಕೃಷಿ ಯಂತ್ರ ಒದಗಿಸಲು ಯಂತ್ರಧಾರೆ ಯೋಜನೆ ರೂಪಿಸಲಾಗಿದೆ. ರೈತರು ಈ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಹೊಳೆಆಲೂರು ರೈತ ಸಂಪರ್ಕ ಕೇಂದ್ರದ ಪ್ರಭಾರ ಕೃಷಿ ಅಧಿಕಾರಿ ವಿ.ಎಸ್.ಶಾಂತಗೇರಿ ಮಾತನಾಡಿ, ಕೀಟನಾಶಕ ಬಳಸುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ. ರೈತರು ಅಗತ್ಯಕ್ಕೆ ತಕ್ಕಂತೆ ಮಾತ್ರ ಕೀಟನಾಶಕಗಳನ್ನು ಬಳಸಬೇಕು. ರಾಸಾಯನಿಕ ಮುಕ್ತ ಕೃಷಿ ಕೈಗೊಳ್ಳುವ ತುರ್ತು ಅಗತ್ಯವಿದೆ ಎಂದರು.

ಎ.ಪಿ.ಕುಲಕರ್ಣಿ, ಸಹದೇವ ಯರಗೊಪ್ಪ, ಬಿ.ಆರ್.ಹಿರೇಗೌಡ್ರ, ನಾಗಮ್ಮ ಕಲಾದಗಿ, ಶಂಕ್ರಣ್ಣ ಕಳಿಗಣ್ಣವರ, ಬಸವರಾಜ ಉಮಚಗಿ, ಕೇದಾರಗೌಡ ಮಣ್ಣೂರ, ಹನುಮಂತಗೌಡ ಗೌಡರ, ಮಲ್ಲನಗೌಡ ಗದಗಿನ, ರಾಮಣ್ಣ ಸಕ್ರಿ, ಬಸವಂತಪ್ಪ ಕಳ್ಳಿಮನಿ ಇದ್ದರು.

ರೈತರನ್ನು ಗೌರವಿಸಲು ಸಲಹೆ

ಮುಂಡರಗಿ: ‘ರೈತ ಈ ನಾಡಿನ ಬೆನ್ನೆಲಬು. ರೈತ ಚೆನ್ನಾಗಿದ್ದರೆ ನಾಡಿನ ಬದುಕು ಚೆನ್ನಾಗಿರುತ್ತದೆ. ಕಷ್ಟ ಕೊಟಲೆಗಳನ್ನು ಎದುರಿಸಿ ನಾಡಿನ ಜನತೆಗೆ ಅನ್ನ ನೀಡುತ್ತಿರುವ ರೈತನನ್ನು ನೆನೆಯುವುದು ಎಲ್ಲರ ಕರ್ತವ್ಯ’ ಎಂದು ಬಸವಂತಪ್ಪ ಮುದ್ದಿ ಹೇಳಿದರು. ಪಟ್ಟಣದಲ್ಲಿ ಮಂಜುಳಾ ಇಟಗಿ ಮತ್ತು ಗೆಳತಿಯರು ಹಮ್ಮಿಕೊಂಡಿದ್ದ ರೈತ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ರೈತರು ರಾಸಾಯನಿಕ ಗೊಬ್ಬರ ಬಳಸಿ ಭೂಮಿಯ ಫಲವತ್ತತೆ ನಾಶ ಮಾಡದೇ, ಸಾವಯವ ಕೃಷಿಯತ್ತ ಗಮನಹರಿಸಬೇಕು. ಇದರಿಂದ ಉತ್ತಮ ಇಳುವರಿ ಪಡೆಯಬಹುದು’ ಎಂದು ಸಲಹೆ ನೀಡಿದರು.

ರೈತ ಎಸ್.ವಿ.ಪಾಟೀಲ ಮಾತನಾಡಿ, ‘ನಾವು ಜಾಣರನ್ನು ಶಾಲೆಗೆ ಕಳುಹಿಸಿ, ದಡ್ಡರನ್ನು ಒಕ್ಕಲುತನಕ್ಕೆ ಕಳುಹಿಸುತ್ತೇವೆ. ಒಕ್ಕಲುತನ ಜಾಣರು ಮಾಡುವ ಉದ್ಯೋಗವಾಗಿದ್ದು, ಇಂದಿನ ಯುವ ಪೀಳಿಗೆ ಕೃಷಿ ಕ್ಷೇತ್ರದತ್ತ ಮುಖ ಮಾಡಬೇಕು’ ಎಂದು ತಿಳಿಸಿದರು.

ಬ್ರಹ್ಮಕುಮಾರಿ ಜಯಕ್ಕ, ದೇವಪ್ಪ ರಾಮೇನಹಳ್ಳಿ, ಯೋಧನ ಪತ್ನಿ ಜಯಶ್ರೀ ಚೆನ್ನಳ್ಳಿ, ಮಂಜುನಾಥ ಇಟಗಿ, ಪ್ರಾ.ಸಿ.ಎಸ್.ಅರಸನಾಳ, ಶಶಿಕಲಾ ಕುಕನೂರ, ಚಿನ್ನಮ್ಮ ಮುದ್ದಿ ಮಾತನಾಡಿದರು.

ಮಂಜುಳಾ ಇಟಗಿ ಅಧ್ಯಕ್ಷತೆ ವಹಿಸಿದ್ದರು. ರೈತರಾದ ಕನಕಪ್ಪ ಕುರಿ, ಪರಮೇಶಪ್ಪ ಕುಕನೂರ, ಎಸ್.ವಿ.ಪಾಟೀಲ, ದೇವಪ್ಪ ರಾಮೇನಹಳ್ಳಿ, ರೈತ ಮಹಿಳೆ ಶಾರಮ್ಮ ಸೊಬರದ, ಸುಶೀಲಮ್ಮ ಮುದ್ದಿ, ಯೋದನ ಪತ್ನಿ ಜಯಶ್ರೀ ಚೆನ್ನಳ್ಳಿ, ಹಿರಿಯರಾದ ಬಸವಂತಪ್ಪ ಮುದ್ದಿ, ಪ್ರಾ.ಸಿ.ಎಸ್. ಅರಸನಾಳ ಅವವರನ್ನು ಸನ್ಮಾನಿಸಲಾಯಿತು.

ಸುಪ್ರಿಯಾ, ಕಾವ್ಯಾ, ಸಾವಿತ್ರಿ ಲಮಾಣಿ, ದೇವಪ್ಪ ಇಟಗಿ, ನಾಗರಾಜ ಮುರಡಿ, ವಿಜಯಕುಮಾರ ಬಣಕಾರ, ಪೂಜಾ ಅರ್ಕಸಾಲಿ, ಕೀರ್ತಿ ಪಾಟೀಲ, ಸಂಗಮ್ಮ ಚೆನ್ನಳ್ಳಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry