6

‘ಶಾಸಕ ಜಾಧವ ಲಾಭಿ: ಒಂದೇ ಜಾತಿಗೆ ಸೌಲಭ್ಯ’

Published:
Updated:

ಕಲಬುರ್ಗಿ: ‘ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ ಅವರ ಲಾಭಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನನೆಗಳಲ್ಲಿ ಒಂದೇ ಜಾತಿಗೆ ಎಲ್ಲಾ ಯೋಜನೆಗಳ ಸೌಲಭ್ಯ ದೊರೆಯುತ್ತಿದೆ’ ಎಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶಿವಲಿಂಗ ಹಳಿಮನಿ ಆರೋಪಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ನಿಯಮ ಪಾಲಿಸದೆ ಸ್ವಜಾತಿ ಪ್ರೇಮದಿಂದ ನಿಗಮದಲ್ಲಿ ದೊರೆಯುವ ಸೌಲಭ್ಯಗಳಾದ ಸ್ವಯಂ ಉದ್ಯೋಗ, ಅಂಗವಿಕಲರ ಯೋಜನೆ, ಹೈನುಗಾರಿಕೆ ಸೇರಿದಂತೆ ಶೇ 80ಕ್ಕೂ ಹೆಚ್ಚು  ಲಂಬಾಣಿ ಕುಟುಂಬಗಳಿಗೆ ನೀಡಿದ್ದಾರೆ’ ಎಂದು ಆರೋಪಿಸಿದರು.

‘ಬೆಡಸೂರ ತಾಂಡಾದಲ್ಲಿ ಸರ್ಕಾರದ ಯೋಜನೆಯಡಿ  ನಿರ್ಮಾಣವಾದ  ಕಾಲೊನಿಗೆ ತಮ್ಮ ತಂದೆಯ ಹೆಸರು (ಗೋಪಾಲ ಜಾಧವ) ನಾಮಕರಣ ಮಾಡಿದ್ದಾರೆ. ಈ ಎಲ್ಲಾ ಅಕ್ರಮಗಳ ವಿರುದ್ಧ ಜ. 4ರಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾಗೆ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ಮುಖಂಡರಾದ ಸಂದೀಪ ಭರಣಿ, ಪ್ರಶಾಂತ ಬಾಗೋಡಿ, ಸೂರ್ಯಕಾಂತ, ವಿಶ್ವನಾಥ ಹೊಡಲ್, ಗೌತಮ ಗಣಜಲಖೇಡ, ಚಂದ್ರಕಾಂತ ಇಟಗಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry