7

ಅಜ್ಜನ ಜಾತ್ರೆಯಲ್ಲಿ ಪತ್ರ ಚಳುವಳಿ

Published:
Updated:
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in
ಅಜ್ಜನ ಜಾತ್ರೆಯಲ್ಲಿ ಪತ್ರ ಚಳುವಳಿ

ಕೊಪ್ಪಳ: ರಕ್ತದಾನವನ್ನು ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ಘೋಷಿಸುವ ಕುರಿತು ಪ್ರಧಾನಮಂತ್ರಿ ಗಮನ ಸೆಳೆಯಲು ಗವಿಮಠದ ಜಾತ್ರಾ ಮಹೋತ್ಸವದಲ್ಲಿ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ.

ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಹಾಗೂ ಜೀವದಾನ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಜ.4 ರಿಂದ 6ರ ವರೆಗೆ ಪತ್ರ ಚಳವಳಿಯ ಮೂಲಕ ಪ್ರಧಾನಮಂತ್ರಿಗೆ ಮನವಿ ಮಾಡಲಾಗುವುದು. ಚಳವಳಿಯಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.

ಭಾರತದಲ್ಲಿ ಪ್ರತಿ ನಿಮಿಷಕ್ಕೆ 10 ಜನ ವಿವಿಧ ಕಾರಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಲ್ಲಿ 6 ಜನ ರಕ್ತದ ಕೊರತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ರಕ್ತದಾನವನ್ನು ದೇಶದ ರಾಷ್ಟ್ರೀಯ ಕಾರ್ಯಕ್ರಮವಾಗಿ ಘೋಷಿಸಿದರೆ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚಳವಾಗಲಿದೆ. ಆ ಮೂಲಕ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಬದುಕುವ ಆಶಾಕಿರಣ ಲಭಿಸಲಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಜಾತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಡಾ.ಶ್ರೀನಿವಾಸ ಹ್ಯಾಟಿ, ಸುಧೀರ್‍ ಅವರಾದಿ ತಿಳಿಸಿದ್ದಾರೆ. ಮಾಹಿತಿಗೆ ಮೊ: 90089 96646, 94488 14156 ನ್ನು ಸಂಪರ್ಕಿಸಬಹುದು.

ಜಾತ್ರೆ ನೇರ ಪ್ರಸಾರ: ದೂರದ ಭಕ್ತರಿಗಾಗಿ ಜಾತ್ರೆಯ ಎಲ್ಲ ಕಾರ್ಯಕ್ರಮಗಳನ್ನು ವೀಕ್ಷಿಸಲು ಡಿ.31ರಿಂದ ರಿಂದ ಜ.6 ರವರೆಗೆ ಜರುಗಲಿರುವ ಜಾತ್ರೆ ಕಾರ್ಯಕ್ರಮಗಳನ್ನು ಕೊಪ್ಪಳದ ಸಿಟಿ ಚಾನೆಲ್ ನೇರಪ್ರಸಾರ ಮಾಡಲಿದೆ.

ಕೊಪ್ಪಳ, ಬಾಗಲಕೋಟೆ, ಬಳ್ಳಾರಿ, ಗದಗ, ಕಲಬುರ್ಗಿ, ಬೀದರ್‍, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಸ್ಥಳೀಯ ಚಾನೆಲ್‍ಗಳಲ್ಲಿ ನೇರ ಪ್ರಸಾರವನ್ನು ಏಕಕಾಲಕ್ಕೆ ಕೊಪ್ಪಳ ಸಿಟಿ ಚಾನಲ್ ಮೂಲಕ ಪ್ರಸಾರ ಮಾಡಲಾಗುವುದು. ಮಾಹಿತಿಗೆ ಪ್ರಸಾದ್ ಮೊ: 98800 35088 ಅವರನ್ನು ಸಂಪರ್ಕಿಸಬಹುದು. ಸಿ ಸಿ ಕ್ಯಾಮೆರಾ ಅಳವಡಿಕೆ: ಜ.3 ರಿಂದ 5ರ ವರೆಗೆ ಜಾತ್ರೆ ಆವರಣದಲ್ಲಿ ಜನದಟ್ಟಣೆ ಹೆಚ್ಚು ಇರುವ ಕಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ.

ಫಲಪುಷ್ಪ ಪ್ರದರ್ಶನ: ಜಾತ್ರೆ ಪ್ರಯುಕ್ತ ತೋಟಗಾರಿಕೆ ಇಲಾಖೆ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಿದೆ. ಇದರಲ್ಲಿ ಹೂವಿನಲ್ಲಿ ಅರಳಿದ ಗವಿಮಠದ ತೆಪ್ಪೋತ್ಸವ ಮಾದರಿ, ತರಕಾರಿ ಕೆತ್ತನೆ, ಪುಷ್ಪ ರಂಗೋಲಿ, ವಿವಿಧ ಹೂವಿನ ಅಲಂಕೃತ ಮಾದರಿಗಳು, ವಾರ್ಷಿಕ ಹೂಗಳ ಪ್ರದರ್ಶನ, ವಿಶಿಷ್ಟ ಹಣ್ಣು, ತರಕಾರಿ ಹೂವುಗಳ ಪ್ರದರ್ಶನ ಏರ್ಪಡಿಸಲಾಗುವುದು.

ಇದಲ್ಲದೇ ಹೈಡ್ರೋಪೋಲಿಕ್ಸ್ (ಜಲಕೃಷಿ), ತರಕಾರಿ, ಮೇವಿನಬೆಳೆ, ಹೂವಿನಬೆಳೆ ತೋಟಗಾರಿಕೆಯಲ್ಲಿ ಉಪ ಕಸಬುಗಳು, ಅಣಬೆ ಬೇಸಾಯ ತಾಂತ್ರಿಕತೆ ಪ್ರದರ್ಶನ ಮತ್ತು ಮಾರಾಟ, ಜೇನುಕೃಷಿ ತಾಂತ್ರಿಕತೆ, ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ತಾರಸಿ ತೋಟದ ಮಾದರಿ ಮತ್ತು ಪ್ರದರ್ಶನ, ವಿವಿಧ ಅಲಂಕಾರಿಕ ಹೂವಿನ, ಹಣ್ಣಿನ ಸಸಿಗಳು ಮತ್ತು ಬೀಜಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.  ಮಾಹಿತಿಗೆ ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮೊ: 9448999237, ಸಹಾಯಕ ತೋಟಗಾರಿಕೆ ನಿರ್ದೇಶಕ ದುರ್ಗಾ ಪ್ರಸಾದ್‍ ಮೊ: 8861697989 ಇವರನ್ನು ಸಂಪರ್ಕಿಸಬಹುದು.

* * 

ರಕ್ತದಾನವನ್ನು ದೇಶದ ರಾಷ್ಟ್ರೀಯ ಕಾರ್ಯಕ್ರಮವಾಗಿ ಘೋಷಿಸಿದರೆ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚಳವಾಗಲಿದೆ.

 ಸುಧೀರ್‍ ಅವರಾದಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಕೊಪ್ಪಳ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry